ಅಗಲಿದ ಹಿರಿಯ ನಟ ರಾಜೇಶ್ ಅವರ ಮಗಳು ಕೇವಲ ಒಂದು ಚಿತ್ರದಲ್ಲಿ ಮಾತ್ರ ನಟಿಸಿದ್ದರೂ ಸಿದ್ದರಾಮಯ್ಯಗೆ ಅದು ಚೆನ್ನಾಗಿ ನೆನಪಿದೆ!
1986 ರಲ್ಲಿ ಬಿಡುಗಡೆಯಾದ ‘ರಥಸಪ್ತಮಿ’ ಚಿತ್ರದಲ್ಲಿ ಅರ್ಜುನ್ ಅವರ ಪತ್ನಿ ಆಶಾರಾಣಿ ಅವರು ಶಿವರಾಜಕುಮಾರ್ ಎದುರು ನಾಯಕಿ ನಟಿಯಾಗಿ ಅಭಿನಯಿಸಿದ್ದರು. ಇದು ಶಿವಣ್ಣನ ಕೇವಲ ಎರಡನೇ ಚಿತ್ರವಾಗಿತ್ತು. ಮೊದಲ ಚಿತ್ರ ‘ಆನಂದ್’ ನಂತೆಯೇ ‘ರಥಸಪ್ತಮಿ’ ಸಹ ಬಾಕ್ಸಾಫೀಸನ್ನು ಕೊಳ್ಳೆಹೊಡೆದಿತ್ತು.
ಹಿರಿಯ ಮತ್ತು ಹಳೆ ಜಮಾನಾದ ನಟ-ನಟಿಯರ ಬಗ್ಗೆ ಮಾತ್ರ ಅಲ್ಲ ಅವರ ಮಕ್ಕಳ ಬಗ್ಗೆಯೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಮಾಹಿತಿ ಇಟ್ಟುಕೊಂಡಿರುತ್ತಾರೆ. ಶನಿವಾರ ತಮ್ಮ 87ನೇ ವಯಸ್ಸಿನಲ್ಲಿ ವಿಧಿವಶರಾದ ಕನ್ನಡ ಚಿತ್ರರಂಗದ ಹಿರಿಯ ನಟ ಕಲಾ ತಪಸ್ವೀ ರಾಜೇಶ್ (Rajesh) ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿಗಳು ರಾಜೇಶ್ ಅವರ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸುತ್ತಾರೆ ಮತ್ತು ತಮ್ಮ ಪಕ್ಕದಲ್ಲಿ ನಿಂತಿದ್ದ ಅರ್ಜುನ್ ಸರ್ಜಾ (Arjun Sarja) ಅವರೆಡೆ ಕೈಮಾಡಿ ಇವರು ಅಗಲಿದ ನಟನ ಅಳಿಯ ಎಂದು ಹೇಳುತ್ತಾರೆ. ಅದು ಬಹಳಷ್ಟು ಜನಕ್ಕೆ ಗೊತ್ತಿರುವ ವಿಷಯವಾದರೂ ಅನೇಕರಿಗೆ ಗೊತ್ತಿರದ ವಿಷಯವನ್ನು ಪ್ರಸ್ತಾಪಿಸಿ ಅಲ್ಲಿದ್ದವರನ್ನು ಆಶ್ಚರ್ಯಚಕಿತಗೊಳಿಸುತ್ತಾರೆ. ಸಿದ್ದರಾಮಯ್ಯ ಅರ್ಜುನ್ ಅವರಿಗೆ, ‘ನಿಮ್ಮ ಪತ್ನಿ ಸಹ ಸಿನಿಮಾದಲ್ಲಿ ನಟಿಸಿದ್ದಾರಲ್ಲವೇ,’ ಅಂತ ಕೇಳಿದಾಗ ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಅಗಿರುವ ಅರ್ಜುನ್, ‘ಹೌದು ಸರ್’ ಎನ್ನುತ್ತಾರೆ.
ಹೌದು, 1986 ರಲ್ಲಿ ಬಿಡುಗಡೆಯಾದ ‘ರಥಸಪ್ತಮಿ’ ಚಿತ್ರದಲ್ಲಿ ಅರ್ಜುನ್ ಅವರ ಪತ್ನಿ ಆಶಾರಾಣಿ ಅವರು ಶಿವರಾಜಕುಮಾರ್ ಎದುರು ನಾಯಕಿ ನಟಿಯಾಗಿ ಅಭಿನಯಿಸಿದ್ದರು. ಇದು ಶಿವಣ್ಣನ ಕೇವಲ ಎರಡನೇ ಚಿತ್ರವಾಗಿತ್ತು. ಮೊದಲ ಚಿತ್ರ ‘ಆನಂದ್’ ನಂತೆಯೇ ‘ರಥಸಪ್ತಮಿ’ ಸಹ ಬಾಕ್ಸಾಫೀಸನ್ನು ಕೊಳ್ಳೆಹೊಡೆದಿತ್ತು.
ಅದಾದ ಮೇಲೆ ಆಶಾರಾಣಿ ಬೇರೆ ಕನ್ನಡ ಸಿನಿಮಾನಲ್ಲಿ ನಟಿಸಲಿಲ್ಲ. ಅಸಲಿಗೆ ಆಶಾರಾಣಿ ಅಂತ ಹೇಳಿದರೆ ಹಳಬರೂ ಸಹ ಬೇಗ ಗುರುತು ಹಿಡಿಯಲಾರರು. ಆ ಹೆಸರು ಸಿನಿಮಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿತ್ತು. ಮದುವೆಯ ನಂತರ ಅವರು ನಿವೇದಿತಾ ಆರ್ಜುನ್ ಆದರು.
ಉತ್ತಮ ನೃತ್ಯಪಟು ಕೂಡ ಆಗಿರುವ ನಿವೇದಿತಾ ಮದುವೆಯ ಬಳಿಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: Actor Rajesh: ನಟ ರಾಜೇಶ್ಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ? ಅವರೇ ಹೇಳಿಕೊಂಡಿದ್ದ ಮಾತುಗಳು ಇಲ್ಲಿವೆ