ಭದ್ರಾವತಿ: ಶಿವಕುಮಾರ್ ಗೂಂಡಾ, ಸಿದ್ದರಾಮಯ್ಯ ಜಾತಿವಾದಿ ಅಂದರು ಸಚಿವ ಕೆ ಎಸ್ ಈಶ್ವರಪ್ಪ

ಕೇವಲ ರಾಜ್ಯ ಮಾತ್ರವಲ್ಲದೆ ಕೇಂದ್ರದಲ್ಲೂ ಭಾರತೀಯ ಜನತಾ ಪಕ್ಷವೇ ಅಧಿಕಾರಕ್ಕೆ ಬರಬೇಕು, ನಮ್ಮನ್ನು ಬಿಟ್ಟರೆ ಬೇರೆ ಯಾರಿದ್ದಾರೆ, ಕಾಂಗ್ರೆಸ್ ಪಕ್ಷದ ಗೂಂಡಾ ಡಿಕೆ ಶಿವಕುಮಾರ ಬರುತ್ತಾನೆಯೇ ಇಲ್ಲ ಜಾತಿವಾದಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಾನೆಯೇ? ಎಂದು ಏಕವಚನದಲ್ಲೇ ಕಾಂಗ್ರೆಸ್ ನಾಯಕರನ್ನು ಈಶ್ವರಪ್ಪ ಉಲ್ಲೇಖಿಸಿದರು.

TV9kannada Web Team

| Edited By: Arun Belly

Feb 19, 2022 | 10:59 PM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸಂಪುಟದಲ್ಲಿ ಪಂಚಾಯತ್ ರಾತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಕೆ ಎಸ್ ಈಶ್ವರಪ್ಪನವರು (KS Eshwarappa) ಶನಿವಾರ ಭದ್ರಾವತಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರೋಧ ಪಕ್ಷದ ನಾಯಕ ಸಿದ್ದರಾರಮಯ್ಯನವರ (Siddaramaiah) ವಿರುದ್ಧ ಬೆಂಕಿಯುಗುಳಿದರು. ಅವರ ಸಿಟ್ಟನ್ನು ಕನ್ನಡಿಗರು ಅರ್ಥಮಾಡಿಕೊಳ್ಳಬಲ್ಲರು. ಕಳೆದ 3-4 ದಿನಗಳಿಂದ ಶಿವಕುಮಾರ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು; ಈಶ್ವರಪ್ಪ ಕೆಂಪುಕೋಟೆಯ ಮೇಲೆ ಭಗವಾ ಧ್ವಜ ಹಾರಿಸುತ್ತೇವೆ ಅಂತ ಹೇಳಿ ರಾಷ್ಟ್ರದ್ರೋಹವೆಸಗಿದ್ದಾರೆ, ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು, ಪಕ್ಷದಿಂದ ಉಚ್ಚಾಟಿಸಬೇಕು ಮತ್ತು ಜೈಲಿಗೆ ಕಳಿಸಬೇಕು ಅಂತ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿದಿನ ಸದನದ ಕಾರ್ಯಕಲಾಪಗಳಿಗೆ ಅಡ್ಡಿಪಡಿಸುತ್ತಿದ್ದಾರೆ, ಇನ್ ಫ್ಯಾಕ್ಟ್, ಕಲಾಪ ನಡೆಯಲು ಅವಕಾಶವೇ ನೀಡುತ್ತಿಲ್ಲ.

ನಾವೆಲ್ಲ ನೋಡುತ್ತಿರುವ ಹಾಗೆ ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿದಿನ ಸದನದ ಕಲಾಪವನ್ನು ಮರುದಿನಕ್ಕೆ ಮುಂದೂಡುತ್ತಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕೇವಲ ರಾಜ್ಯ ಮಾತ್ರವಲ್ಲದೆ ಕೇಂದ್ರದಲ್ಲೂ ಭಾರತೀಯ ಜನತಾ ಪಕ್ಷವೇ ಅಧಿಕಾರಕ್ಕೆ ಬರಬೇಕು, ನಮ್ಮನ್ನು ಬಿಟ್ಟರೆ ಬೇರೆ ಯಾರಿದ್ದಾರೆ, ಕಾಂಗ್ರೆಸ್ ಪಕ್ಷದ ಗೂಂಡಾ ಡಿಕೆ ಶಿವಕುಮಾರ ಬರುತ್ತಾನೆಯೇ ಇಲ್ಲ ಜಾತಿವಾದಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಾನೆಯೇ? ಎಂದು ಏಕವಚನದಲ್ಲೇ ಕಾಂಗ್ರೆಸ್ ನಾಯಕರನ್ನು ಈಶ್ವರಪ್ಪ ಉಲ್ಲೇಖಿಸಿದರು.

ಸೋಮವಾರ ವಿಧಾನಮಂಡಲದ ಕಲಾಪ ಮುಂದುವರಿಯಲಿದೆ ನಿಜ, ಆದರೆ ಬಿಸಿನೆಸ್ ಮಾತ್ರ ಮಾಮೂಲಿನಂತೆ ನಡೆಯುವುದು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  ರಾಷ್ಟ್ರೀಯ ವಿಚಾರಕ್ಕೆ ಮನ್ನಣೆ ನೀಡುವ ಭದ್ರಾವತಿ ಜನ ಈ ಬಾರಿಯೂ ಬಿಜೆಪಿ ಆಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದರು ಈಶ್ವರಪ್ಪ

Follow us on

Click on your DTH Provider to Add TV9 Kannada