AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವಿ ಪತಿ ಜತೆ ಅದಿತಿ ಪ್ರಭುದೇವ ಹೊಸ ವರ್ಷದ ಸೆಲೆಬ್ರೇಷನ್​; ಫೋಟೋ ವೈರಲ್​

Aditi Prabhudeva: ಅದಿತಿ ಪ್ರಭುದೇವ ಮತ್ತು ಯಶಸ್​ ಮದುವೆ ದಿನಾಂಕದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇಲ್ಲಸಲ್ಲದ ಗಾಸಿಪ್​ ಹಬ್ಬುವುದಕ್ಕಿಂತ ಮುನ್ನವೇ ಅವರು ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ.

ಭಾವಿ ಪತಿ ಜತೆ ಅದಿತಿ ಪ್ರಭುದೇವ ಹೊಸ ವರ್ಷದ ಸೆಲೆಬ್ರೇಷನ್​; ಫೋಟೋ ವೈರಲ್​
ಅದಿತಿ ಪ್ರಭುದೇವ - ಯಶಸ್​
TV9 Web
| Edited By: |

Updated on: Jan 02, 2022 | 9:10 PM

Share

ಅಭಿಮಾನಿಗಳಿಗೆ ಸಣ್ಣ ಸುಳಿವನ್ನೂ ನೀಡದೇ ನಿಶ್ಚಿತಾರ್ಥ ಮಾಡಿಕೊಂಡವರು ನಟಿ ಅದಿತಿ ಪ್ರಭುದೇವ (Aditi Prabhudeva). ಭಾವಿ ಪತಿ ಯಶಸ್​ (Yashas Patla) ಜತೆ ಇರುವ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡ ಬಳಿಕವೇ ಎಂಗೇಜ್​ಮೆಂಟ್ (Aditi Prabhudeva Engagement)​ ವಿಚಾರ ಜಗಜ್ಜಾಹೀರಾಗಿದ್ದು. ಈಗ ಅವರು ಇನ್ನೊಂದು ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಎಲ್ಲರಿಗೂ ಹೊಸ ವರ್ಷದ ಶುಭಕೋರಿದ್ದಾರೆ. ಆ ಫೋಟೋ ಕೂಡ ಅಭಿಮಾನಿಗಳ ವಲಯದಲ್ಲಿ ವೈರಲ್​ ಆಗುತ್ತಿವೆ. ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಈ ಜೋಡಿಗೆ ಎಲ್ಲರೂ ವಿಶ್​ ಮಾಡುತ್ತಿದ್ದಾರೆ.

ಹಲವು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ಬ್ಯುಸಿ ಆಗಿದ್ದಾರೆ. ಈ ನಡುವೆಯೇ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿರುವುದಂತೂ ನಿಜ. ಇಷ್ಟು ದಿನ ಈ ಬಗ್ಗೆ ರಹಸ್ಯ ಕಾಯ್ದುಕೊಂಡಿದ್ದ ಅವರು ಈಗ ಫೋಟೋಗಳ ಮೂಲಕ ವಿಷಯ ಹಂಚಿಕೊಳ್ಳುತ್ತಿದ್ದಾರೆ. ಉದ್ಯಮಿ ಮತ್ತು ಕಾಫಿ ಪ್ಲಾಂಟರ್​ ಆಗಿರುವ ಯಶಸ್​ ಜತೆ ಅದಿತಿ ಪ್ರಭುದೇವ ಬಾಳ ಪಯಣ ಸಾಗುತ್ತಿದೆ.

ಹಾಸನದ ಸಮೀಪ ಇರುವ ಸಂಬಂಧಿಕರ ಮನೆಯಲ್ಲಿ ಅದಿತಿ ಪ್ರಭುದೇವ-ಯಶಸ್​ ಅವರ ನಿಶ್ಚಿತಾರ್ಥ ನೆರವೇರಿತು. ಚಿತ್ರೀಕರಣದ ಬ್ಯುಸಿ ಶೆಡ್ಯೂಲ್​ ನಡುವೆಯೇ ಈ ಸಮಾರಂಭ ನಡೆದಿದೆ. ಎಂಗೇಜ್​ಮೆಂಟ್​ ಆದ ಕೂಡಲೇ ಅವರು ನೇರವಾಗಿ ಶೂಟಿಂಗ್​ ಸೆಟ್​ಗೆ ತೆರಳಿದರು. ಕೊಡಗು ಮೂಲದ ಯಶಸ್​ ಅವರ ಅನೇಕ ಗುಣಗಳು ಅದಿತಿಗೆ ಮ್ಯಾಚ್​ ಆಗುತ್ತವೆಯಂತೆ. ಆ ಕಾರಣಕ್ಕೆ ಇಬ್ಬರೂ ಜೋಡಿ ಆಗಿದ್ದಾರೆ.

ಅದಿತಿ ಅವರನ್ನು ಮೊದಲು ಇಷ್ಟಪಟ್ಟವರು ಯಶಸ್​. ನಂತರ ಕುಟುಂಬದ ಹಿರಿಯರ ಮೂಲಕ ಅದಿತಿಗೆ ಈ ವಿಷಯ ತಿಳಿಯಿತು. ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆದಿದೆ. ಮದುವೆ ದಿನಾಂಕದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇಲ್ಲಸಲ್ಲದ ಗಾಸಿಪ್​ ಹಬ್ಬುವುದಕ್ಕಿಂತ ಮುನ್ನವೇ ಎಂಗೇಜ್​ಮೆಂಟ್​ ಮಾಡಿಕೊಳ್ಳುವುದು ಸೂಕ್ತ ಎಂಬ ಕಾರಣಕ್ಕೆ ಅದಿತಿ ಮತ್ತು ಯಶಸ್​ ಈ ತೀರ್ಮಾನಕ್ಕೆ ಬಂದಿದ್ದಾರೆ.

ಅದಿತಿ ಪ್ರಭುದೇವ ಕೈಯಲ್ಲಿ ಈಗ ಅನೇಕ ಸಿನಿಮಾಗಳಿವೆ. ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತೋತಾಪುರಿ, ಒಂಭತ್ತನೇ ದಿಕ್ಕು, ಗಜಾನನ ಆ್ಯಂಡ್​ ಗ್ಯಾಂಗ್​, ಓಲ್ಡ್​ ಮಾಂಕ್​ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಮಾಫಿಯಾ, 5ಡಿ, ತ್ರಿಬಲ್​ ರೈಡಿಂಗ್​ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅದಿತಿ ನಟಿಸುತ್ತಿದ್ದಾರೆ. ಅವರ ಸಿನಿಮಾ ಜರ್ನಿಗೆ ಯಶಸ್​ ಮತ್ತು ಅವರ ಕುಟುಂಬದವರು ಬೆಂಬಲವಾಗಿ ನಿಂತಿದ್ದಾರೆ.

ಇದನ್ನೂ ಓದಿ:

ಆ ಸಿನಿಮಾ ನೋಡದೆಯೂ ಅದಿತಿಗೆ ಫ್ಯಾನ್​ ಆದ ಮೇಘನಾ ರಾಜ್ ಸರ್ಜಾ​; ಯಾವುದು ಆ ಚಿತ್ರ?

ಗುಟ್ಟಾಗಿ ಮದುವೆ ಆದ ಸೀರಿಯಲ್​ ನಟ; ಫೋಟೋ ವೈರಲ್​ ಆದ ಬಳಿಕ ಅಚ್ಚರಿಪಟ್ಟ ಫ್ಯಾನ್ಸ್​

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?