ರಮೇಶ್​ ಅರವಿಂದ್​ ಜತೆ ‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ನಟಿಸಲಿರುವ ಖ್ಯಾತ ನಟ ನಾಸರ್​

Ramesh Aravind | Shivaji Surathkal 2: ಬಹಳ ವರ್ಷಗಳಿಂದಲೂ ರಮೇಶ್​ ಅರವಿಂದ್​ ಮತ್ತು ನಾಸರ್​ ನಡುವೆ ಒಡನಾಟ ಇದೆ. ಆದರೆ ಜೊತೆಯಲ್ಲಿ ನಟಿಸಲು ಕಾಲ ಕೂಡಿಬಂದಿರುವುದು ಇದೇ ಮೊದಲು.

ರಮೇಶ್​ ಅರವಿಂದ್​ ಜತೆ ‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ನಟಿಸಲಿರುವ ಖ್ಯಾತ ನಟ ನಾಸರ್​
ರಮೇಶ್​ ಅರವಿಂದ್​, ನಾಸರ್​
Follow us
TV9 Web
| Updated By: ಮದನ್​ ಕುಮಾರ್​

Updated on: Jan 03, 2022 | 9:58 AM

ನಟ ರಮೇಶ್​ ಅರವಿಂದ್​ (Ramesh Aravind) ಅವರು ‘ಶಿವಾಜಿ ಸುರತ್ಕಲ್​’ (Shivaji Surathkal) ಸಿನಿಮಾ ಮೂಲಕ ಮೋಡಿ ಮಾಡಿದರು. 2020ರ ಫೆಬ್ರವರಿಯಲ್ಲಿ ತೆರೆಕಂಡ ಆ ಸಿನಿಮಾ ಸೂಪರ್​ ಹಿಟ್​ ಆಯಿತು. ನಂತರ ಒಟಿಟಿ ಪ್ಲಾಟ್​ಫಾರ್ಮ್​ನಲ್ಲೂ ಪ್ರಸಾರವಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತು. ಆಕಾಶ್​ ಶ್ರೀವಸ್ತ (Akash Srivatsa) ನಿರ್ದೇಶನದ ಈ ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದಾಗಿ ಈಗ ಸೀಕ್ವೆಲ್​ ಕೂಡ ಸಿದ್ಧವಾಗುತ್ತಿದೆ. ‘ಶಿವಾಜಿ ಸುರತ್ಕಲ್​ 2’ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಈಗ ಈ ಚಿತ್ರತಂಡಕ್ಕೆ ಖ್ಯಾತ ಬಹುಭಾಷಾ ನಟ ನಾಸರ್​ (Nassar) ಅವರು ಸೇರ್ಪಡೆ ಆಗಿದ್ದಾರೆ. ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆ ಬಗ್ಗೆ ‘ಶಿವಾಜಿ ಸುರತ್ಕಲ್​ 2’ (Shivaji Surathkal 2) ತಂಡ ಮಾಹಿತಿ ಹಂಚಿಕೊಂಡಿದೆ. ಈ ಸಿನಿಮಾವನ್ನು ಅನೂಪ್​ ಗೌಡ ಮತ್ತು ರೇಖಾ ಕೆ.ಎನ್​. ನಿರ್ಮಾಣ ಮಾಡುತ್ತಿದ್ದಾರೆ.

1985ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರು ನಾಸರ್​. ತೆಲುಗು, ತಮಿಳು, ಕನ್ನಡ, ಮಲಯಾಳಂ, ಇಂಗ್ಲಿಷ್​ ಸೇರಿ ಅವರು 600ಕ್ಕೂ ಅಧಿಕ ಸಿನಿಮಾಗಳಲ್ಲಿ​ ನಟಿಸಿದ್ದಾರೆ. ಸಾವಿರಾರು ಪಾತ್ರಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ರಮೇಶ್​ ಅರವಿಂದ್ ಜತೆ ನಟಿಸುತ್ತಿರುವುದು ವಿಶೇಷ.

ಪತ್ತೆದಾರ ಶಿವಾಜಿ ಸುರತ್ಕಲ್​ ಪಾತ್ರವನ್ನು ರಮೇಶ್​ ಅರವಿಂದ್​ ಮಾಡುತ್ತಿದ್ದಾರೆ. ಅವರ ತಂದೆಯ ಪಾತ್ರದಲ್ಲಿ ನಾಸರ್​ ಕಾಣಿಸಿಕೊಳ್ಳಲಿದ್ದಾರೆ. ವಿಜೇಂದ್ರ ಸುರತ್ಕಲ್​ ಎಂಬ ಈ ಪಾತ್ರವು ಕಥೆಯಲ್ಲಿ ಹೈಲೈಟ್​ ಆಗಲಿದೆ. ಬಹಳ ವರ್ಷಗಳಿಂದಲೂ ರಮೇಶ್​ ಅರವಿಂದ್​ ಮತ್ತು ನಾಸರ್​ ಸ್ನೇಹಿತರಾಗಿದ್ದಾರೆ. ಆದರೆ ಜೊತೆಯಲ್ಲಿ ನಟಿಸಲು ಕಾಲ ಕೂಡಿಬಂದಿರುವುದು ಇದೇ ಮೊದಲು. ನಾಸರ್​ ಆಗಮನದಿಂದಾಗಿ ‘ಶಿವಾಜಿ ಸುರತ್ಕಲ್​ 2’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಸಸ್ಪೆನ್ಸ್​ ಥ್ರಿಲ್ಲರ್​ ಮಾದರಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

2021ರ ಡಿ.13ರಿಂದಲೇ ‘ಶಿವಾಜಿ ಸುರತ್ಕಲ್​ 2’ ಚಿತ್ರಕ್ಕೆ ಶೂಟಿಂಗ್​ ನಡೆಯುತ್ತಿದೆ. ರಮೇಶ್​ ಅರವಿಂದ್​​ ಜೊತೆ ರಾಧಿಕಾ ನಾರಾಯಣ್, ರಾಘು ರಾಮನಕೊಪ್ಪ, ವಿದ್ಯಾ ಮೂರ್ತಿ, ವಿನಾಯಕ್ ಜೋಷಿ ಮುಂತಾದವರು ನಟಿಸುತ್ತಿದ್ದಾರೆ. ಗುರುಪ್ರಸಾದ್ ಎಮ್.ಜಿ. ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. 2022ರ ಜನವರಿಯ ಕೊನೆಯಲ್ಲಿ ಈ ಸಿನಿಮಾದ ಬಹುಪಾಲು ಚಿತ್ರೀಕರಣ ಮುಗಿಯಲಿದೆ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

2022ರ ಪೂರ್ತಿ ರಮೇಶ್​ ಅರವಿಂದ್​ ವಿಶೇಷ ಮಾತುಗಳು; ಹೊಸ ಪ್ರಯತ್ನಕ್ಕೆ ಕೈ ಹಾಕಿದ ಎವರ್​ಗ್ರೀನ್​ ನಟ

ಹೇಗಿತ್ತು ‘ಶಿವಾಜಿ ಸುರತ್ಕಲ್​ 2’ ಮುಹೂರ್ತ ಸಂಭ್ರಮ? ಇಲ್ಲಿದೆ ತಾರಾಬಳಗದ ಫೋಟೋ ಆಲ್ಬಂ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ