Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯ್ಯಪ್ಪ ಸ್ವಾಮಿ ಭಕ್ತರಿಂದ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ; ಇಲ್ಲಿದೆ ವಿಡಿಯೋ

ಅಯ್ಯಪ್ಪ ಸ್ವಾಮಿ ಭಕ್ತರಿಂದ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ; ಇಲ್ಲಿದೆ ವಿಡಿಯೋ

TV9 Web
| Updated By: ಸುಷ್ಮಾ ಚಕ್ರೆ

Updated on:Jan 03, 2022 | 12:46 PM

ಈ ಹಿಂದೆ ಕೆಲವು ಭಕ್ತರು ಪುನೀತ್​ ರಾಜ್​ಕುಮಾರ್​ ಫೋಟೋವನ್ನು ಇರುಮುಡಿ ಜೊತೆ ಇಟ್ಟುಕೊಂಡು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ 18 ಮೆಟ್ಟಿಲು ಹತ್ತಿದ್ದರು. ಈಗ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಪುನೀತ್‌ಗೆ ಪೂಜೆ ಸಲ್ಲಿಸಲಾಗಿದೆ.

ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ.‌ ಅಭಿಮಾನಿಗಳ ಎದೆಯಲ್ಲಿ ಅವರು ಸದಾ ಶಾಶ್ವತವಾಗಿ ಇರುತ್ತಾರೆ. ಅವರ ನೆನಪುಗಳು ಪ್ರತಿ ದಿನ ಕಣ್ಣೆದುರು ಬರುತ್ತಿದೆ. ಅಭಿಮಾನಿಗಳು (Puneeth Rajkumar Fans)  ತಾವು ಮಾಡುವ ಎಲ್ಲ ಕೆಲಸಗಳಲ್ಲೂ ಅಪ್ಪು ಅವರನ್ನು ಸ್ಮರಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಲಾಗುತ್ತಿದೆ. ಈ ಮೊದಲು ಕೆಲವು ಭಕ್ತರು ಅಪ್ಪು (Puneeth Rajkumar Photo) ಫೋಟೋವನ್ನು ಇರುಮುಡಿ ಜೊತೆ ಇಟ್ಟುಕೊಂಡು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ 18 ಮೆಟ್ಟಿಲುಗಳನ್ನು ಹತ್ತಿದ್ದರು. ಈಗ ಅಯ್ಯಪ್ಪ ಸ್ವಾಮಿ (Ayyappa Swamy) ಮಾಲಾಧಾರಿಗಳಿಂದ ಪುನೀತ್‌ಗೆ ಪೂಜೆ ಸಲ್ಲಿಸಲಾಗಿದೆ. ಕೊಪ್ಪಳದ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ. ಕನಕರಾಜ ಚೌಧರಿ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಲಾಗಿದೆ. ನಟನೆ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕೆಲಸಗಳಲ್ಲೂ ಪುನೀತ್ ತೊಡಗಿಕೊಂಡಿದ್ದರು.‌ ಆ ಕಾರಣದಿಂದ ಅವರನ್ನು ಕಂಡರೆ ಅಭಿಮಾ‌ನಿಗಳಿಗೆ ಈ ಪರಿ ಪ್ರೀತಿ. ಇಂಥ ಹೃದಯವಂತನನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ.

ಇದನ್ನೂ ಓದಿ:

ಪುನೀತ್​ಗೆ ದೇವರ ಸ್ಥಾನ ನೀಡಿದ ಫ್ಯಾನ್ಸ್​; ಅಪ್ಪು ಮೇಲಿನ ಅಪಾರ ಅಭಿಮಾನಕ್ಕೆ ಇನ್ನೊಂದು ಸಾಕ್ಷಿ

ನ್ಯೂ ಇಯರ್​ ಸಂಭ್ರಮಕ್ಕೆ ಪುನೀತ್​​ ರಾಜ್​ಕುಮಾರ್​ ಹೊಸ ಚಿತ್ರ ‘ಲಕ್ಕಿ ಮ್ಯಾನ್​’ ಪೋಸ್ಟರ್​ ರಿಲೀಸ್​

Published on: Jan 03, 2022 12:18 PM