ಹೇಗಿತ್ತು ‘ಶಿವಾಜಿ ಸುರತ್ಕಲ್​ 2’ ಮುಹೂರ್ತ ಸಂಭ್ರಮ? ಇಲ್ಲಿದೆ ತಾರಾಬಳಗದ ಫೋಟೋ ಆಲ್ಬಂ

Shivaji Surathkal 2: ಕಳೆದ ವರ್ಷ (2020) ಸೂಪರ್​ ಹಿಟ್​ ಆದ ‘ಶಿವಾಜಿ ಸುರತ್ಕಲ್​’ ಚಿತ್ರಕ್ಕೆ ಈಗ ಸೀಕ್ವೆಲ್​ ಸಿದ್ಧವಾಗುತ್ತಿದೆ. ‘ಶಿವಾಜಿ ಸುರತ್ಕಲ್​ 2’ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದ್ದು, ಈ ಸಂದರ್ಭದ ಕಲರ್​ಫುಲ್​ ಫೋಟೋಗಳು ಇಲ್ಲಿವೆ.

1/5
ರಮೇಶ್​ ಅರವಿಂದ್​ ನಾಯಕತ್ವದ ‘ಶಿವಾಜಿ ಸುರತ್ಕಲ್​ 2’ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರು ಕಥೆ ಚಿತ್ರಕಥೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರೇಖಾ ಕೆ.ಎನ್ ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

2/5
ಇದು ರಮೇಶ್ ಅರವಿಂದ್ ನಟನೆಯ 103ನೇ ಚಿತ್ರ ಎನ್ನುವುದು ಈ ಚಿತ್ರ. ರಮೇಶ್​ ಜೊತೆಗೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ರಾಘು ರಾಮನಕೊಪ್ಪ, ವಿದ್ಯಾ ಮೂರ್ತಿ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಡಿಸೆಂಬರ್​ನಿಂದ ಚಿತ್ರೀಕರಣ ಆರಂಭ ಆಗಲಿದೆ.

3/5
‘ಶಿವಾಜಿ ಸುರತ್ಕಲ್​ 2’ ಚಿತ್ರಕ್ಕೆ ಬೆಂಗಳೂರಿನ ಮಲ್ಲೇಶ್ವರದ ಬಂಡೆ ಗಣೇಶ ದೇವಸ್ಥಾನದಲ್ಲಿ ಗುರುವಾರ (ನ.25) ಮುಹೂರ್ತ ನೆರವೇರಿದೆ. ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಇದರಲ್ಲಿ ಭಾಗಿ ಆಗಿದ್ದರು.

4/5
2ನೇ ಪಾರ್ಟ್​ ಕಥೆಯಲ್ಲಿ ಅನೇಕ ಹೊಸ ಪಾತ್ರಗಳು ಸೇರಿಕೊಂಡಿದ್ದಾರೆ. ಮೇಘನಾ ಗಾಂವ್ಕರ್​, ರಾಕೇಶ್​ ಮಯ್ಯ, ವಿನಾಯಕ ಜೋಶಿ ಸೇರಿದಂತೆ ಅನೇಕ ಕಲಾವಿದರು ಈ ಬಾರಿ ‘ಶಿವಾಜಿ ಸುರತ್ಕಲ್​ 2’ ತಂಡಕ್ಕೆ ಸೇರ್ಪಡೆ ಆಗಿದ್ದಾರೆ.

5/5
ನಕುಲ್​ ಅಭ್ಯಂಕರ್​ ಅವರು ‘ಶಿವಾಜಿ ಸುರತ್ಕಲ್​ 2’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ಅವರು ನಿಭಾಯಿಸುತ್ತಿದ್ದಾರೆ. ಅವರ ಆಗಮನದಿಂದ ಚಿತ್ರತಂಡದ ಬಲ ಹೆಚ್ಚಿದೆ.

Click on your DTH Provider to Add TV9 Kannada