ಅನ್ರಿಕ್ ನೋಕಿಯಾ: ದಕ್ಷಿಣ ಆಫ್ರಿಕಾ ವೇಗಿ ಪ್ರಸ್ತುತ ಕ್ರಿಕೆಟ್ ಅಂಗಳದಲ್ಲಿ ವೇಗದ ಮೂಲಕ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಐಪಿಎಲ್ 2020 ರ ಸೀಸನ್ನಲ್ಲಿ 156.22 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಅಷ್ಟೇ ಅಲ್ಲದೆ ಅವರು ಇತ್ತೀಚೆಗೆ ಐಸಿಸಿ ಟಿ 20 ವಿಶ್ವಕಪ್ನಲ್ಲೂ 153 ಕಿಮೀ ವೇಗದಲ್ಲಿ ಚೆಂಡೆಸೆದಿದ್ದರು. ಈ ಸ್ಥಿರತೆ ಕಾಯ್ದುಕೊಂಡರೆ ಅಖ್ತರ್ ದಾಖಲೆಯು ಅನ್ರಿಕ್ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ.