AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾದಲ್ಲಿ ನಟಿಸಿದ ಬಿಎಸ್​ ಯಡಿಯೂರಪ್ಪ; ಮಾಜಿ ಮುಖ್ಯಮಂತ್ರಿ ಒಪ್ಪಿಕೊಂಡ ಆ ಕಥೆ ಯಾವುದು?

BS Yediyurappa Cinema: ಬಿ.ಎಸ್.​ ಯಡಿಯೂರಪ್ಪ ನಟಿಸುತ್ತಿರುವ ‘ತನುಜಾ’ ಸಿನಿಮಾವನ್ನು ಶೀಘ್ರವೇ ತೆರೆಕಾಣಿಸಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ಶಿವಮೊಗ್ಗ ಮತ್ತು ಬೆಂಗಳೂರಿನ ಹಲವೆಡೆ ಚಿತ್ರೀಕರಣ ನಡೆಯುತ್ತಿದೆ.

ಸಿನಿಮಾದಲ್ಲಿ ನಟಿಸಿದ ಬಿಎಸ್​ ಯಡಿಯೂರಪ್ಪ; ಮಾಜಿ ಮುಖ್ಯಮಂತ್ರಿ ಒಪ್ಪಿಕೊಂಡ ಆ ಕಥೆ ಯಾವುದು?
ಬಿ.ಎಸ್. ಯಡಿಯೂರಪ್ಪ, ಸಪ್ತಾ ಪಾವೂರು
TV9 Web
| Edited By: |

Updated on: Feb 20, 2022 | 8:01 AM

Share

ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ನಡುವೆ ಮೊದಲಿನಿಂದಲೂ ನಂಟು ಇದೆ. ಚಿತ್ರರಂಗದಲ್ಲಿ ಮಿಂಚಿದ ಹಲವರು ರಾಜಕೀಯಕ್ಕೆ ಕಾಲಿಟ್ಟು ಸಾಧನೆ ಮಾಡಿದ್ದಾರೆ. ಅದೇ ರೀತಿ, ರಾಜಕೀಯದಲ್ಲಿ ಸಾಧನೆ ಮಾಡಿದ ಅನೇಕರು ನಂತರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಉದಾಹರಣೆ ಇದೆ. ಈಗಿನದ್ದು ಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಸರದಿ. ಹೌದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕನ್ನಡದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರಕ್ಕೆ ‘ತನುಜಾ’ (Tanuja Kannada movie) ಎಂದು ಶೀರ್ಷಿಕೆ ಇಡಲಾಗಿದೆ. ಇದರ ಚಿತ್ರೀಕರಣ ಕೂಡ ಆರಂಭ ಆಗಿದ್ದು, ಶೂಟಿಂಗ್​ನಲ್ಲಿ ಬಿಎಸ್​ವೈ ಭಾಗಿಯಾಗಿರುವ ಫೋಟೋಗಳು ಲಭ್ಯವಾಗಿವೆ. ಅಷ್ಟಕ್ಕೂ ಮಾಜಿ ಮುಖ್ಯಮಂತ್ರಿಗೆ ಈ ಸಿನಿಮಾದಲ್ಲಿ ನಟಿಸಬೇಕು ಎನಿಸಿದ್ದು ಯಾಕೆ? ಅದಕ್ಕೊಂದು ಮುಖ್ಯ ಕಾರಣವಿದೆ. ಇದು ರಿಯಲ್​ ಲೈಫ್​ ಘಟನೆ ಆಧರಿಸಿದ ಸಿನಿಮಾ. ಕೊವಿಡ್​ ಸಂದರ್ಭದಲ್ಲಿ ನೀಟ್​ ಪರೀಕ್ಷೆ ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಗಮನ ಸೆಳೆದಿದ್ದ ಹುಡುಗಿಯ ಕಥೆ ರೋಚಕತೆಯಿಂದ ಕೂಡಿದೆ. ಆ ಘಟನೆ ಎಲ್ಲರ ಗಮನ ಸೆಳೆದಿತ್ತು. ಇದನ್ನೇ ಒನ್​ಲೈನ್ ಸ್ಟೋರಿ ಆಗಿಸಿಕೊಂಡು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿಯವರು ಈ ಚಿತ್ರವನ್ನು (BS Yediyurappa Film) ನಿರ್ದೇಶಿಸುತ್ತಿದ್ದಾರೆ. ಅದರಲ್ಲಿ ಬಿ.ಎಸ್.​ ಯಡಿಯೂರಪ್ಪ ನಟಿಸುತ್ತಿರುವುದು ವಿಶೇಷ.

ತನುಜಾ ಎಂಬ ಹುಡುಗಿ ಕೊರೊನಾ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದ ಸಂದರ್ಭದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಸಹಕಾರದಿಂದ ಪರೀಕ್ಷೆ ಬರೆದು ನೀಟ್ ಪಾಸಾಗಿದ್ದು ಸುದ್ದಿ ಆಗಿತ್ತು. ಆ ಘಟನೆ ನಡೆದಾಗ ಬಿ.ಎಸ್​. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿದ್ದರು. ಈಗ ಸಿನಿಮಾದಲ್ಲಿ ಕೂಡ ಅವರು ಮುಖ್ಯಮಂತ್ರಿಯ ಪಾತ್ರ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ನಟಿಸಲು ಬಿ.ಎಸ್​. ಯಡಿಯೂರಪ್ಪ ಒಪ್ಪಿಕೊಂಡಿರುವುದರಿಂದ ಚಿತ್ರತಂಡಕ್ಕೆ ದೊಡ್ಡ ಬಲ ಬಂದಂತೆ ಆಗಿದೆ. ತಮ್ಮ ರಿಯಲ್​ ಲೈಫ್​ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಇದು ಸಿನಿಪ್ರಿಯರ ಮತ್ತು ರಾಜಕೀಯ ವಲಯದವರಲ್ಲಿ ನಿರೀಕ್ಷೆ ಮೂಡಿಸಿದೆ. ಫೆ.19ರಂದು ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅವರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅವರ ನಟನೆ ಕಂಡು ಚಿತ್ರತಂಡ ಖುಷಿಯಾಗಿದೆ. ರಾಜಕೀಯ ಜೀವನದ ಹಲವು ಘಟ್ಟಗಳಲ್ಲಿ ಯಡಿಯೂರಪ್ಪ ಅವರನ್ನು ಜನರು ಗಮನಿಸಿದ್ದಾರೆ. ಈಗ ಅವರನ್ನು ಕಲಾವಿದರನ್ನಾಗಿ ನೋಡಲು ಅಭಿಮಾನಿಗಳ, ಕಾರ್ಯಕರ್ತರ ನಿರೀಕ್ಷೆ ಹೆಚ್ಚಿದೆ.

ಶೀಘ್ರದಲ್ಲೇ ಈ ಸಿನಿಮಾವನ್ನು ತೆರೆಕಾಣಿಸಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ಶಿವಮೊಗ್ಗ ಮತ್ತು ಬೆಂಗಳೂರಿನ ಹಲವು ಲೊಕೇಷನ್​ಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಅಭಿನಯಿಸಿದ್ದ ಸಪ್ತಾ ಪಾವೂರು ಈ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಜೊತೆ ವಿಶ್ವೇಶ್ವರ ಭಟ್, ಕೆ. ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ ಮುಂತಾದವರು ಅಭಿನಯಿಸುತ್ತಿದ್ದಾರೆ. ಪ್ರದ್ಯೋತನ್​ ಸಂಗೀತ ನಿರ್ದೇಶನ, ರವೀಂದ್ರನಾಥ್ ಛಾಯಾಗ್ರಹಣ, ಉಮೇಶ್ ಆರ್.ಬಿ. ಸಂಕಲನ, ಆರ್. ಚಂದ್ರಶೇಖರ್ ಪ್ರಸಾದ್ ಹಾಗೂ ಜೆ.ಎಂ ಪ್ರಹ್ಲಾದ್ ಸಂಭಾಷಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಹರೀಶ್ ಎಂ.ಡಿ ಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದು, ‘ಬಿಯಾಂಡ್​ ವಿಷನ್ಸ್​ ಸಿನಿಮಾಸ್’​ ಸಂಸ್ಥೆ ಮೂಲಕ ಈ ಚಿತ್ರ ತಯಾರಾಗುತ್ತಿದೆ.

ಇದನ್ನೂ ಓದಿ:

ಸೀರಿಯಲ್​ ನೋಡಿ ಕಾಲ ಕಳೆಯುತ್ತಿರುವ ಯಡಿಯೂರಪ್ಪ; ಮಾಜಿ ಸಿಎಂ ಮೆಚ್ಚಿನ ಧಾರಾವಾಹಿಗಳು ಇವು

ವೀರಶೈವ ಲಿಂಗಾಯತ ಸಂಪ್ರದಾಯದಂತೆ ಬಿಎಸ್ ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಅಂತ್ಯಕ್ರಿಯೆ

ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!