ವೀರಶೈವ ಲಿಂಗಾಯತ ಸಂಪ್ರದಾಯದಂತೆ ಬಿಎಸ್ ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಅಂತ್ಯಕ್ರಿಯೆ
ಸೌಂದರ್ಯ ಅಂತಿಮ ಸಂಸ್ಕಾರ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಡಾ.ನೀರಜ್ ನಿವಾಸ ಕಲ್ಪವೃಕ್ಷದ ಬಳಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ನೇಣಿಗೆ ಶರಣಾಗಿ ಶುಕ್ರವಾರ (ಜನವರಿ 28) ಬೆಳಗ್ಗೆ ಮೃತಪಟ್ಟಿದ್ದರು. ಇದೀಗ, ಸಂಜೆ ವೇಳೆಗೆ ಪತಿ ನೀರಜ್ ಫಾರ್ಮ್ಹೌಸ್ನಲ್ಲಿ ಸೌಂದರ್ಯ ಅಂತ್ಯಕ್ರಿಯೆ ನಡೆಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯ ಪತಿ ನೀರಜ್ ಫಾರ್ಮ್ಹೌಸ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ವೀರಶೈವ ಆಗಮ ಪದ್ಧತಿಯಂತೆ ಬಿಲ್ವಪತ್ರೆ ಹಾಗೂ ವಿಭೂತಿ ಬಳಸಿ ಡಾ. ಸೌಂದರ್ಯ ಅಂತ್ಯಕ್ರಿಯೆ ನಡೆದಿದೆ.
ಡಾ. ಸೌಂದರ್ಯ ಬೆಂಗಳೂರಿನ ವಸಂತನಗರದಲ್ಲಿನ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಡಾ. ಸೌಂದರ್ಯ ನೇಣಿಗೆ ಶರಣಾಗಿದ್ದರು. ಫ್ಯಾನ್ಗೆ ನೇಣು ಬಿಗಿದುಕೊಂಡು ಡಾ. ಸೌಂದರ್ಯ (30) ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗ್ಗೆ 8 ಗಂಟೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೌಂದರ್ಯ ಪತಿ ಡಾ. ನೀರಜ್ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಘಟನೆ ನಡೆದಿದೆ.
ಮನೆ ಕೆಲಸದವರು ಬಂದಾಗ ಬಾಗಿಲು ತೆಗೆಯದ ಹಿನ್ನೆಲೆ ಸೌಂದರ್ಯ ಪತಿ ಡಾ. ನೀರಜ್‌ಗೆ ಕೆಲಸದವರು ಕರೆ ಮಾಡಿದ್ದರು. ಪತಿ ಮನೆಗೆ ಬಂದು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ದೇಹ ಬಿಸಿಯಾಗಿದ್ದರಿಂದ ಸಮೀಪದ ಮಲ್ಲಿಗೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮಲ್ಲಿಗೆ ಆಸ್ಪತ್ರೆಯಲ್ಲಿ ಡಾ. ಸೌಂದರ್ಯ ಜೀವ ಉಳಿಸಲು ಯತ್ನ ಮಾಡಲಾಗಿತ್ತು. ಆದ್ರೆ ವೆಂಟಿಲೇಟರ್ಗೆ ಹಾಕಿದ್ರೂ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮಲ್ಲಿಗೆ ಆಸ್ಪತ್ರೆಯಲ್ಲಿ ಡಾ. ಸೌಂದರ್ಯ ಕೊನೆಯುಸಿರೆಳೆದಿದ್ದರು.
ಅಂತಿಮ ವಿಧಿವಿಧಾನಕ್ಕೆ ಶಿವಗಂಗೆಯ ಹೊನ್ನಗವಿ ಮಠದ ರುದ್ರಮುನಿ ಸ್ವಾಮೀಜಿ ನೇತೃತ್ವ
ಮೃತ ಸೌಂದರ್ಯ ಅಂತ್ಯಸಂಸ್ಕಾರಕ್ಕೆ ಪುರೋಹಿತರು ಆಗಮಿಸಿದ್ದರು. ಸೌಂದರ್ಯ ಪತಿ ನೀರಜ್ ಮನೆಗೆ ಪುರೋಹಿತರು ಆಗಮಿಸಿದ್ದರು. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ ನಡೆಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಅಂತಿಮ ವಿಧಿವಿಧಾನಕ್ಕೆ ಶಿವಗಂಗೆಯ ಹೊನ್ನಗವಿ ಮಠದ ರುದ್ರಮುನಿ ಸ್ವಾಮೀಜಿ ಸಮ್ಮುಖದಲ್ಲಿ ಸಿದ್ಧತೆ ನಡೆಸಲಾಗಿತ್ತು.
ಅಬ್ಬಿಗೆರೆಯ ಫಾರಂಹೌಸ್ನಲ್ಲಿ ಸೌಂದರ್ಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿತ್ತು. ಡಾ. ನೀರಜ್ ನಿವಾಸದ ಬಳಿ ಪುರೋಹಿತ ಚೇತನ್ ಆಗಮಿಸಿದ್ದರು. ಅಷ್ಟೇ ಅಲ್ಲದೆ, ಸ್ಥಳಕ್ಕೆ ಬಿ.ವೈ ಬಿಜಯೇಂದ್ರ ಸೇರಿದಂತೆ ಬಿಎಸ್‌ವೈ ಕುಟುಂಬಸ್ಥರ ಆಗಮಿಸಿದ್ದರು. ಸೌಂದರ್ಯ ಅಂತಿಮ ಸಂಸ್ಕಾರ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಡಾ.ನೀರಜ್ ನಿವಾಸ ಕಲ್ಪವೃಕ್ಷದ ಬಳಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ಡಾ ಸೌಂದರ್ಯ ಹೆರಿಗೆ ನಂತರದ ಖಿನ್ನತೆಯಿಂದ ಬಳಲುತ್ತಿದ್ದರು: ಗೃಹ ಸಚಿವ ಅರಗ ಜ್ಞಾನೇಂದ್ರ
ಇದನ್ನೂ ಓದಿ: ಮೊಮ್ಮಗಳು ಆತ್ಮಹತ್ಯೆ ಹಿನ್ನೆಲೆ: ಬಿಎಸ್ ಯಡಿಯೂರಪ್ಪಗೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ, ಹೆಚ್ಡಿ ದೇವೇಗೌಡ