ದುಬೈ ಬಗ್ಗೆ ಶಾರುಖ್​ ಪ್ರೀತಿಯ ಮಾತು; ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಏನು?

Shah Rukh Khan Dubai: ‘ದುಬೈನಲ್ಲಿ ಪ್ರತಿ ಅನುಭವ ಕೂಡ ವಿಶೇಷ ನೆನಪಾಗಿ ಉಳಿದುಕೊಳ್ಳುತ್ತದೆ. ನನ್ನ ಜೊತೆ ಈ ನಗರವನ್ನು ನೋಡಿ’ ಎಂದು ಶಾರುಖ್​ ಖಾನ್​ ಕ್ಯಾಪ್ಷನ್​ ನೀಡಿದ್ದಾರೆ.

ದುಬೈ ಬಗ್ಗೆ ಶಾರುಖ್​ ಪ್ರೀತಿಯ ಮಾತು; ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಏನು?
ಶಾರುಖ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Mar 09, 2022 | 1:38 PM

ಬಾಲಿವುಡ್​ ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. 1990ರ ದಶಕದಿಂದ ಈವರೆಗೆ ಅನೇಕ ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಅವರನ್ನು ವಿದೇಶದಲ್ಲಿ ಕೋಟ್ಯಂತರ ಜನರು ಇಷ್ಟಪಡುತ್ತಾರೆ. ಶಾರುಖ್​ ಖಾನ್​ ಎಂದರೆ ದುಬೈನಲ್ಲಿನ ಜನರಿಗೂ ಸಖತ್​ ಪ್ರೀತಿ. ಅದೇ ರೀತಿ ಶಾರುಖ್​ ಅವರಿಗೂ ದುಬೈ (Dubai) ಬಗ್ಗೆ ವಿಶೇಷ ಒಲವು ಇದೆ. ಅಲ್ಲಿನ ಪ್ರವಾಸಿ ತಾಣಗಳು ಅವರಿಗೆ ಇಷ್ಟ. ಆ ಕಾರಣದಿಂದ ಅವರನ್ನು ದುಬೈ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಇದರ ಭಾಗವಾಗಿ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ದುಬೈನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹಾಡಿ ಹೊಗಳಲಾಗಿದೆ. ಜೊತೆಗೆ, ದುಬೈ ಮಂದಿಗೆ ಶಾರುಖ್​ ಬಗ್ಗೆ ಎಷ್ಟು ಅಭಿಮಾನ ಇದೆ ಎಂಬುದನ್ನು ತೋರಿಸಲಾಗಿದೆ. ಈ ವಿಡಿಯೋವನ್ನು ಶಾರುಖ್​ ಖಾನ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ಸದ್ಯ ಈ ವಿಡಿಯೋ (Shah Rukh Khan Dubai video) ವೈರಲ್​ ಆಗಿದೆ. ಆ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಶಾರುಖ್​ ಟ್ರೆಂಡ್​​ ಆಗಿದ್ದಾರೆ.

ದುಬೈಗೆ ಒಮ್ಮೆಯಾದರೂ ಹೋಗಬೇಕು ಎಂಬುದು ಅನೇಕರ ಆಸೆ. ಅಲ್ಲಿನ ಆಕರ್ಷಕ ಕಟ್ಟಡಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಶೂಟಿಂಗ್​ ಮುಗಿಸಿದ ಬಳಿಕ ಸ್ವತಃ ಶಾರುಖ್​ ಖಾನ್​ ಅವರು ಅಲ್ಲಿನ ಸ್ಥಳಗನ್ನು ನೋಡಿ ಎಂಜಾಯ್​ ಮಾಡುತ್ತಿರುವ ರೀತಿಯಲ್ಲಿ ಈ ಜಾಹೀರಾತು ಮೂಡಿಬಂದಿದೆ. ‘ದುಬೈನಲ್ಲಿ ಪ್ರತಿ ಅನುಭವ ಕೂಡ ವಿಶೇಷ ನೆನಪಾಗಿ ಉಳಿದುಕೊಳ್ಳುತ್ತದೆ. ನನ್ನ ಜೊತೆ ಈ ನಗರವನ್ನು ನೋಡಿ’ ಎಂದು ಶಾರುಖ್​ ಖಾನ್​ ಅವರು ಈ ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದಾರೆ.

ಇದೊಂದು ಜಾಹೀರಾತು ಆಗಿದ್ದರೂ ಕೂಡ ಅಭಿಮಾನಿಗಳ ಪಾಲಿಗೆ ಸರ್ಪ್ರೈಸ್​ ಆಗಿದೆ. ಯಾಕೆಂದರೆ ಶಾರುಖ್​​ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಬಹಳ ಕಾಲ ಆಗಿದೆ. 2018ರಲ್ಲಿ ತೆರೆಕಂಡ ‘ಝೀರೋ’ ಸಿನಿಮಾದ ಬಳಿಕ ಅವರ ನಟನೆಯ ಯಾವುದೇ ಚಿತ್ರ ಬಿಡುಗಡೆ ಆಗಿಲ್ಲ. ಲಾಕ್​ ಡೌನ್​, ಮಗನ ಡ್ರಗ್ಸ್​ ಪಾರ್ಟಿ ವಿವಾದ ಸೇರಿದಂತೆ ಅನೇಕ ಅಡೆತಡೆಗಳ ಕಾರಣದಿಂದ ಅಭಿಮಾನಿಗಳ ಎದುರು ಬರಲು ಶಾರುಖ್​ಗೆ ಸಾಧ್ಯವಾಗಿರಲಿಲ್ಲ. ಕಡೇ ಪಕ್ಷ ಈಗ ಜಾಹೀರಾತಿನ ಮೂಲಕವಾದರೂ ಅವರು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

View this post on Instagram

A post shared by Shah Rukh Khan (@iamsrk)

ಇದು ಜಾಹೀರಾತು ಆಗಿದ್ದರೂ ಕೂಡ ಒಂದು ಹಾಡಿನ ರೀತಿಯಲ್ಲಿ ಮೂಡಿಬಂದಿದೆ. ಇದರ ಅವಧಿ ಮೂರು ನಿಮಿಷ ಇದೆ. ಹೊಸ ಗೆಟಪ್​ನಲ್ಲಿ ಶಾರುಖ್​ ಖಾನ್​ ಕಾಣಿಸಿಕೊಂಡಿದ್ದಾರೆ. ಹಾಡಿಗೆ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡುವ ಮೂಲಕ ಅಭಿಮಾನಿಗಳನ್ನು ಅವರು ಮನರಂಜಿಸಿದ್ದಾರೆ. ಅವರನ್ನು ಕಂಡು ಖುಷಿಪಟ್ಟಿರುವ ನೆಟ್ಟಿಗರು ‘ಕಿಂಗ್​ ಈಸ್​ ಬ್ಯಾಕ್​’ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಶಾರುಖ್​ ಖಾನ್​ ಅವರು ಇತ್ತೀಚಿನ ವರ್ಷಗಳಲ್ಲಿ ಹಲವು ಸೋಲುಗಳನ್ನು ಕಂಡಿದ್ದಾರೆ. ಹಾಗಾಗಿ ಸಿನಿಮಾಗಳ ಆಯ್ಕೆಯಲ್ಲಿ ಈಗ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸದ್ಯ ಅವರು ‘ಪಠಾಣ್​’ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕೆಲವೇ ದಿನಗಳ ಹಿಂದೆ ‘ಪಠಾಣ್​’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಕೂಡ ಕಾಣಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ಅವರ ಹಿನ್ನೆಲೆ ಧ್ವನಿ ಕೇಳಿಸಿದೆ. ಆದರೆ ಲುಕ್​ ಬಹಿರಂಗ ಆಗಿಲ್ಲ. 2023ರ ಜ.25ರಂದು ಈ ಸಿನಿಮಾ ರಿಲೀಸ್​ ಆಗಲಿದೆ.

ಇದನ್ನೂ ಓದಿ:

ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಶಾರುಖ್​ ಫೋಟೋ ಸಾಕ್ಷಿ; ಆದರೆ ಅವರ​ ಪಕ್ಕ ಇರೋದು ಗೌರಿ ಖಾನ್​ ಅಲ್ಲ

ತಾವೇ ನಟಿಸಿದ ಹಲವು ಹಿಟ್​ ಚಿತ್ರಗಳನ್ನು ನೋಡಿಯೇ ಇಲ್ಲ ಶಾರುಖ್​ ಖಾನ್​

Published On - 1:23 pm, Wed, 9 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ