ತಾವೇ ನಟಿಸಿದ ಹಲವು ಹಿಟ್​ ಚಿತ್ರಗಳನ್ನು ನೋಡಿಯೇ ಇಲ್ಲ ಶಾರುಖ್​ ಖಾನ್​

ಶಾರುಖ್​ ಖಾನ್​ ಅವರು ಬಾಲಿವುಡ್​​ನ ಬೇಡಿಕೆಯ ನಟ. ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೇವಲ ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಅವರನ್ನು ಇಷ್ಟಪಡುವ ಅನೇಕ ಹೀರೋಗಳಿದ್ದಾರೆ.

ತಾವೇ ನಟಿಸಿದ ಹಲವು ಹಿಟ್​ ಚಿತ್ರಗಳನ್ನು ನೋಡಿಯೇ ಇಲ್ಲ ಶಾರುಖ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 21, 2022 | 2:43 PM

ತಾವು ನಟಿಸಿದ ಸಿನಿಮಾ ರಿಲೀಸ್​ ಆಗುತ್ತಿದೆ ಎಂದರೆ ಅಭಿಮಾನಿಗಳ ಜತೆ ಮೊದಲ ದಿನ, ಮೊದಲ ಶೋ ನೋಡೋಕೆ ನಟ/ನಟಿಯರು ಬರುತ್ತಾರೆ. ಸ್ಯಾಂಡಲ್​ವುಡ್​ (Sandalwood) ಸೇರಿ ಬಹುತೇಕ ಎಲ್ಲಾ ಚಿತ್ರರಂಗದಲ್ಲೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ. ಬಾಲಿವುಡ್​ನಲ್ಲೂ(Bollywood) ಇದೇ ರೀತಿ ಮಾಡಲಾಗುತ್ತದೆ. ಆದರೆ, ಕೆಲ ಸ್ಟಾರ್​ ನಟರಿಗೆ ಇದು ಇಷ್ಟವಾಗುವುದಿಲ್ಲ. ಅವರು ಥಿಯೇಟರ್​ಗೆ ಎಂಟ್ರಿ ಕೊಟ್ಟರೂ ಸಿನಿಮಾ ನೋಡೋಕೆ ಇಷ್ಟಪಡುವುದಿಲ್ಲ. ಸೆಲೆಬ್ರಿಟಿಗಳು ಬಂದರೆ ಅಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಈ ಕಾರಣಕ್ಕೆ ಕೆಲ ಸೆಲೆಬ್ರಿಟಿಗಳು ಮೊದಲ ದಿನ ತಮ್ಮ ನಟನೆಯ ಸಿನಿಮಾ ವೀಕ್ಷಿಸುವುದಿಲ್ಲ. ಆದರೆ ತಾವು ನಟಿಸಿದ ಸಿನಿಮಾವನ್ನು ನೋಡದೇ ಇರುವವರ ಸಂಖ್ಯೆ ಕಡಿಮೆ. ಅಚ್ಚರಿ ಎಂದರೆ ಶಾರುಖ್ ಖಾನ್ (Sharukh Khan)​ ಅವರು ತಾವು ನಟಿಸಿದ ಅನೇಕ ಸಿನಿಮಾಗಳನ್ನು ನೋಡಿಯೇ ಇಲ್ಲ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಶಾರುಖ್​ ಖಾನ್​ ಅವರು ಬಾಲಿವುಡ್​​ನ ಬೇಡಿಕೆಯ ನಟ. ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕೇವಲ ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಅವರನ್ನು ಇಷ್ಟಪಡುವ ಅನೇಕ ಹೀರೋಗಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ನಟನೆಯ ಯಾವುದೇ ಸಿನಿಮಾ ಹಿಟ್​ ಆಗಿಲ್ಲ. 2018ರಲ್ಲಿ ತೆರೆಗೆ ಬಂದ ‘ಝೀರೋ’ ಸಿನಿಮಾದ ಬಳಿಕ ಅವರು ಯಾವುದೇ ಚಿತ್ರಗಳು ತೆರೆಗೆ ಬಂದಿಲ್ಲ. ಸದ್ಯ, ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈಗ ಅವರ ಹಳೆಯ ಸಂದರ್ಶನ ವಿಡಿಯೋ ಒಂದು ವೈರಲ್​ ಆಗಿದೆ.

ಜೀ ಟಿವಿ ಹಿಂದಿಯಲ್ಲಿ ‘ಯಾಕೋಂಕಿ ಬರಾತ್​’ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾರುಖ್​ ಖಾನ್​ ಹಾಗೂ ಅನುಷ್ಕಾ ಶರ್ಮಾ ಆಗಮಿಸಿದ್ದರು. ಈ ವೇಳೆ ಈ ಕಾರ್ಯಕ್ರಮದ ನಿರೂಪಕ ರಿತೇಷ್​ ದೇಶ್​ಮುಖ್​ ಅವರು, ‘ನಿಮ್ಮದೇ ಸಿನಿಮಾಗಳನ್ನು ನೀವು ವೀಕ್ಷಿಸದೇ ಇರುವ ಉದಾಹರಣೆ ಇದೆಯೇ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಅನುಷ್ಕಾ ಶರ್ಮಾ ಇಲ್ಲ ಎನ್ನುವ ಉತ್ತರ ನೀಡಿದರೆ, ಶಾರುಖ್​ ಖಾನ್​ ಹೌದು ಎಂದರು. ಅಷ್ಟೇ ಅಲ್ಲ ಉದ್ದನೆಯ ಲಿಸ್ಟ್​ ತೆಗೆದರು.

View this post on Instagram

A post shared by SRK VIBE (@srkvibe2.0)

‘ನಾನು ನನ್ನ ನಟನೆಯ ಹಲವು ಸಿನಿಮಾಗಳನ್ನು ನೋಡಿಲ್ಲ. ಯಶಸ್ಸು ಕಂಡ ಸಿನಿಮಾಗಳನ್ನೂ ನೋಡಿಲ್ಲ. ‘ದಿವಾನಾ’, ‘ಸ್ವದೇಶ್’​ ಸೇರಿ ಹಲವು ಸಿನಿಮಾ ನೋಡಿಲ್ಲ. ಡಬ್ಬಿಂಗ್​ ಮಾಡುವಾಗ ಮಾತ್ರ ನೋಡಿದ್ದೇನೆ. ನಾನು ಯಾವುದಾದರೂ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ವಿಡಿಯೋವನ್ನು ಮುಂದೊಂದು ದಿನ ನೋಡಿದರೆ ಅಬ್ಬಾ ಇದು ನಾನೇ ನೀಡಿದ ಸಂದರ್ಶನವೇ ಎಂದು ಅನಿಸುತ್ತದೆ’ ಎಂದರು ಶಾರುಖ್​.

ಇದನ್ನೂ ಓದಿ: ಶಾರುಖ್​ ಖಾನ್​ ಹೊಸ ಲುಕ್​ ವೈರಲ್​; ಇದು ಯಾವ ಸಿನಿಮಾ ಪೋಸ್ಟರ್​?

ಆರ್ಯನ್​ ಭೇಟಿ ಮಾಡಿದ  ಶಾರುಖ್​ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ