ಸಮಂತಾ ಹಾಡಿಗೆ ಮಸ್ತ್​ ಆಗಿ ಡ್ಯಾನ್ಸ್ ಮಾಡಿದ ಆಶಿಕಾ ರಂಗನಾಥ್​; ಇಲ್ಲಿದೆ ವಿಡಿಯೋ

ಆಶಿಕಾ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ದಿನಚರಿಯ ಅಪ್​ಡೇಟ್​ ನೀಡುತ್ತಾರೆ. ಶೂಟಿಂಗ್​ ಸೆಟ್​ನಲ್ಲಿರುವ ಫೋಟೋಗಳನ್ನು ಆಶಿಕಾ ಹಂಚಿಕೊಳ್ಳುತ್ತಾರೆ.

ಸಮಂತಾ ಹಾಡಿಗೆ ಮಸ್ತ್​ ಆಗಿ ಡ್ಯಾನ್ಸ್ ಮಾಡಿದ ಆಶಿಕಾ ರಂಗನಾಥ್​; ಇಲ್ಲಿದೆ ವಿಡಿಯೋ
ಆಶಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 20, 2022 | 8:37 PM

ನಟಿ ಆಶಿಕಾ ರಂಗನಾಥ್​ (Ashika Ranganath) ಅವರಿಗೆ ಸ್ಯಾಂಡಲ್​ವುಡ್​ನಲ್ಲಿ (Sandalwood) ಬೇಡಿಕೆ ಹೆಚ್ಚುತ್ತಿದೆ. ಸ್ಟಾರ್​ ನಟರ ಜತೆ ಅವರು ತೆರೆಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ತೆರೆಗೆ ಬಂದ ‘ಮದಗಜ’ ಸಿನಿಮಾ (Madhagaja Movie) ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಅವರು ಶ್ರೀಮುರಳಿ ಜತೆ ತೆರೆಹಂಚಿಕೊಂಡಿದ್ದರು. ಈಗ ಆಶಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರು ಎಷ್ಟೇ ಬ್ಯುಸಿ ಇದ್ದರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ಈಗ ಅವರು ಹೊಸ ರೀಲ್ಸ್​​ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಖತ್​ ಆಗಿ ಆಶಿಕಾ ಡ್ಯಾನ್ಸ್​ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಆಶಿಕಾ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ದಿನಚರಿಯ ಅಪ್​ಡೇಟ್​ ನೀಡುತ್ತಾರೆ. ಶೂಟಿಂಗ್​ ಸೆಟ್​ನಲ್ಲಿರುವ ಫೋಟೋಗಳನ್ನು ಆಶಿಕಾ ಹಂಚಿಕೊಳ್ಳುತ್ತಾರೆ. ಯಾವುದಾದರೂ ಸಮಾರಂಭದಲ್ಲಿ ಪಾಲ್ಗೊಂಡರೆ ಅದರ ಫೋಟೋಗಳನ್ನೂ ಆಶಿಕಾ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಇದರ ಜತೆಗೆ ಹಲವು ಡ್ಯಾನ್ಸ್​ ವಿಡಿಯೋಗಳನ್ನು ಆಶಿಕಾ ಹಂಚಿಕೊಂಡಿದ್ದಿದೆ. ಈಗ ಆಶಿಕಾ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ.

2018ರಲ್ಲಿ ತೆರೆಗೆ ಬಂದ ‘ರಂಗಸ್ಥಲಂ’ ಚಿತ್ರ ಹಿಟ್​ ಆಗಿತ್ತು. ರಾಮ್​ ಚರಣ್​ ಹಾಗೂ ಸಮಂತಾ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ದೇವಿ ಶ್ರೀ ಪ್ರಸಾದ್​ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ರಂಗಮ್ಮ ಮಂಗಮ್ಮ..’ ಹಾಡು ಕೂಡ ಜನಪ್ರಿಯತೆ ಪಡೆದುಕೊಂಡಿತ್ತು. ಈ ಹಾಡಿಗೆ ಈಗ ಆಶಿಕಾ ಹೆಜ್ಜೆ ಹಾಕಿದ್ದಾರೆ. ಅವರ ಸ್ಟೆಪ್​ ಅಭಿಮಾನಿಗಳಿಗೆ ಸಖತ್​ ಇಷ್ಟವಾಗಿದೆ. ಇದು ಅವರ ಫೇವರಿಟ್​ ಹಾಡು.

ಆಶಿಕಾ ಅವರು ತೆಲುಗು ಹಾಡಿಗೆ ಹೆಜ್ಜೆ ಹಾಕಿರುವುದಕ್ಕೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಕನ್ನಡದಲ್ಲಿ ಅನೇಕ ಹಾಡುಗಳಿದ್ದರೂ ತೆಲುಗು ಹಾಡಿಗೆ ಡ್ಯಾನ್ಸ್​ ಮಾಡೋದು ಏಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಆಶಿಕಾ ತಲೆಕೆಡಿಸಿಕೊಂಡಿಲ್ಲ. ಅವರ ಅಭಿಮಾನಿಗಳು ಆಶಿಕಾ ಪರ ಬ್ಯಾಟ್​ ಬೀಸುತ್ತಿದ್ದಾರೆ. ಇತ್ತೀಚೆಗೆ ‘ಮದಗಜ’ ಸಕ್ಸಸ್​ಮೀಟ್​ನಲ್ಲಿ ಆಶಿಕಾ ಕನ್ನಡದ ಬಗ್ಗೆ ಮಾತನಾಡಿದ್ದರು. ಟೀಕೆ ಮಾಡಿದವರಿಗೆ ಈ ಮಾತುಗಳನ್ನು ಅಭಿಮಾನಿಗಳು ನೆನಪಿಸುತ್ತಿದ್ದಾರೆ.

ಆಶಿಕಾ ಅವರು ನಟನೆ ಜತೆಗೆ ಡ್ಯಾನ್ಸ್ ಮೂಲಕವೂ ಗುರುತಿಸಿಕೊಂಡಿದ್ದಾರೆ. ‘ರ‍್ಯಾಂಬೋ 2’ ಸಿನಿಮಾದ ‘ಚುಟು ಚುಟು..’ ಹಾಡಿನಲ್ಲಿ ಆಶಿಕಾ ಮಸ್ತ್​ ಸ್ಟೆಪ್​ ಹಾಕಿದ್ದರು. ಈ ಹಾಡು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿತ್ತು. ಈ ಹಾಡಿನಿಂದ ಆಶಿಕಾ ಬೇಡಿಕೆ ಕೂಡ ಹೆಚ್ಚಿದೆ. ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಆಶಿಕಾ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ‘ಅವತಾರ ಪುರುಷ’ ಮೊದಲಾದ ಚಿತ್ರಗಳು ರಿಲೀಸ್​ಗೆ ರೆಡಿ ಇವೆ.

ಇದನ್ನೂ ಓದಿ: ಮಿರಿಮಿರಿ ಮಿಂಚುವ ಆಶಿಕಾ ಫೋಟೋಶೂಟ್​; ಕನ್ನಡತಿಯ ಚೆಲುವಿಗೆ ಫ್ಯಾನ್ಸ್​ ಫಿದಾ

ಎಲ್ಲಾ ಹುಡುಗರಿಗೂ ದೊಡ್ಡ ಥ್ಯಾಂಕ್ಸ್​ ಹೇಳಿದ ಆಶಿಕಾ ರಂಗನಾಥ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ