ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ

ಶ್ರೀಲೀಲಾ ಹಾಗೂ ಧನ್ವೀರ್​ ನಟನೆಯ ‘ಬೈ ಟೂ ಲವ್​’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್​ ಸುವರ್ಣ ವಾಹಿನಿಯ ‘ಗಾನ ಬಜಾನ 2’ ರಿಯಾಲಿಟಿ ಶೋಗೆ ಆಗಮಿಸಿತ್ತು ಈ ತಂಡ. ಈ ವೇದಿಕೆ ಮೇಲೆ ಶ್ರೀಲೀಲಾ ಹೇಳಿಕೊಂಡಿದ್ದಾರೆ.

ಸ್ಯಾಡ್​ ಮ್ಯೂಸಿಕ್​ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ
ಶ್ರೀಲೀಲಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 21, 2022 | 8:07 AM

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರೆಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಬಣ್ಣದ ಲೋಕದಲ್ಲಿ ಕೇವಲ ಅಂದ ಇದ್ದರೆ ಸಾಕಾಗುವುದಿಲ್ಲ. ನಟನೆ ಉತ್ತಮವಾಗಿರಬೇಕು. ನ್ಯಾಚುರಲ್​ ಆಗಿ ನಟಿಸುವ ಕಲೆ ಇರಬೇಕು. ಎಷ್ಟೇ ಪ್ರಯತ್ನ ಮಾಡಿದರೂ ಕೆಲವರಿಗೆ ಇದು ಸಿದ್ಧಿಸುವುದೇ ಇಲ್ಲ. ಆದರೆ, ನಟಿ ಶ್ರೀಲೀಲಾ (Sreeleela) ಆ ರೀತಿ ಅಲ್ಲ. ದಿನ ಕಳೆದಂತೆ ಅವರು ನಟನೆಯಲ್ಲಿ ಮಾಗುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಟಾಲಿವುಡ್​​ನಿಂದಲೂ ಹಲವು ಆಫರ್​ಗಳು ಬರುತ್ತಿವೆ. ಸ್ಟಾರ್​ ನಟರ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗುತ್ತಿದೆ. ಈಗ ಅವರ ಬಳಿ ಇರುವ ವಿಶೇಷ ಕಲೆಯ ಗುಟ್ಟು ರಟ್ಟಾಗಿದೆ. ಅಳುವ ದೃಶ್ಯ ಮಾಡುವಾಗ ಶ್ರೀಲೀಲಾ ಸಹಜವಾಗಿಯೇ ಗಳಗಳನೆ ಅತ್ತು ಬಿಡುತ್ತಾರೆ!. ಈ ವಿಚಾರವನ್ನು ಅವರು ಸ್ಟಾರ್​ ಸುವರ್ಣ (Star Suvarna) ವಾಹಿನಿಯ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ.

ಶ್ರೀಲೀಲಾ ಹಾಗೂ ಧನ್ವೀರ್​ ನಟನೆಯ ‘ಬೈ ಟೂ ಲವ್​’ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ. ಸ್ಟಾರ್​ ಸುವರ್ಣ ವಾಹಿನಿಯ ‘ಗಾನ ಬಜಾನ 2’ ರಿಯಾಲಿಟಿ ಶೋಗೆ ಆಗಮಿಸಿತ್ತು ಈ ತಂಡ. ಈ ವೇದಿಕೆ ಮೇಲೆ ಶ್ರೀಲೀಲಾ ಹೇಳಿಕೊಂಡಿದ್ದಾರೆ. ‘ನಾನು ಸಿನಿಮಾದಲ್ಲಿ ಸಾಕಷ್ಟು ಅತ್ತಿದ್ದೇನೆ. ಈ ಸಿನಿಮಾ ವೈಯಕ್ತಿಕವಾಗಿ ಚಾಲೆಂಜಿಂಗ್​ ಆಗಿತ್ತು’ ಎಂದಿದ್ದಾರೆ ಅವರು.

‘ಎಡಗಣ್ಣಲ್ಲಿ ಅಳಬೇಕು ಎಂದರೆ ಶ್ರೀಲೀಲಾ ಎಡಗಣ್ಣಿನಿಂದ ಮಾತ್ರ ನೀರು ಬರುತ್ತಿತ್ತು’ ಎಂದರು ‘ಬೈ ಟೂ ಲವ್​’ ತಂಡದ ನಿರ್ದೇಶಕ ಹರಿ ಸಂತೋಷ್. ಎಲ್ಲರೂ ಈ ಬಗ್ಗೆ ಅಚ್ಚರಿ ಹೊರ ಹಾಕಿದರು. ‘ಮಹಾನಟಿ’ ಎಂದು ಖ್ಯಾತಿ ಪಡೆದಿದ್ದ ಸಾವಿತ್ರಿ ಅವರು ಇದೇ ರೀತಿಯ ಕಲೆಯನ್ನು ಹೊಂದಿದ್ದರು. ಇದು ಶ್ರೀಲೀಲಾಗೂ ಒಲಿದಿದೆ ಎಂಬ ವಿಚಾರ ಕೇಳಿ ಅವರನ್ನು ‘ಮಹಾನಟಿ’ ಎಂದು ಹೊಗಳಲಾಯಿತು.

View this post on Instagram

A post shared by Star Suvarna (@starsuvarna)

ವೇದಿಕೆ ಮೇಲೆ ಸ್ಯಾಡ್​ ಮ್ಯೂಸಿಕ್​ ಹಾಕಲಾಯಿತು. ಮ್ಯೂಸಿಕ್​ ಕೇಳುತ್ತಿದ್ದಂತೆ ಬಲಗಣ್ಣಲ್ಲಿ ಶ್ರೀಲೀಲಾ ಅಳೋಕೆ ಆರಂಭಿಸಿದರು. ಈ ವಿಚಾರ ನಿಜಕ್ಕೂ ಅಚ್ಚರಿ ತರಿಸಿತ್ತು. ಎಲ್ಲರೂ ಅವರನ್ನು ಮತ್ತೊಮ್ಮೆ ‘ಮಹಾನಟಿ’ ಎಂದು ಹೊಗಳಿದರು.

ಇದನ್ನೂ ಓದಿ: ಇಬ್ಬರು ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಮಾದರಿ ಕೆಲಸಕ್ಕೆ ಬಹುಪರಾಕ್​

ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ

Published On - 6:00 am, Mon, 21 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ