AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬ್ಲಾಂಕ್​’ ಕನ್ನಡ ಚಿತ್ರಕ್ಕೆ ರಮ್ಯಾ ಶುಭ ಹಾರೈಕೆ; ಟ್ರೇಲರ್​ ಕಂಡು ವಾವ್​ ಎಂದ ಸೆಲೆಬ್ರಿಟಿಗಳು

ಫೆ.25ರಂದು ರಿಲೀಸ್​ ಆಗಲಿರುವ ‘ಬ್ಲಾಂಕ್​’ ಸಿನಿಮಾಗೆ ರಮ್ಯಾ ಅವರು ಶುಭ ಹಾರೈಸಿದ್ದಾರೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ಪ್ರೋತ್ಸಾಹ ಸಿಕ್ಕಂತಾಗಿದೆ.

‘ಬ್ಲಾಂಕ್​’ ಕನ್ನಡ ಚಿತ್ರಕ್ಕೆ ರಮ್ಯಾ ಶುಭ ಹಾರೈಕೆ; ಟ್ರೇಲರ್​ ಕಂಡು ವಾವ್​ ಎಂದ ಸೆಲೆಬ್ರಿಟಿಗಳು
‘ಬ್ಲಾಂಕ್​’ ಚಿತ್ರಕ್ಕೆ ರಮ್ಯಾ ಶುಭ ಹಾರೈಕೆ
TV9 Web
| Edited By: |

Updated on: Feb 21, 2022 | 5:14 PM

Share

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ಅವರು ನಟನೆಯಿಂದ ದೂರ ಉಳಿದುಕೊಂಡಿರಬಹುದು. ಆದರೆ ಅವರು ಚಿತ್ರರಂಗದ ಸಂಪರ್ಕ ಕಡಿದುಕೊಂಡಿಲ್ಲ.‌ ಸದ್ಯದಲ್ಲೇ ಅವರು ಕಮ್‌ಬ್ಯಾಕ್ ಮಾಡಲಿದ್ದಾರೆ. ಅದರ ನಡುವೆ ಚಿತ್ರರಂಗದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಮಗೆ ಇಷ್ಟ ಆಗುವಂತಹ ಚಿತ್ರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನಿಸಿಕೆ ಹಂಚಿಕೊಳ್ಳುತ್ತಾರೆ. ಅದೇ ರೀತಿ ಇತ್ತೀಚೆಗೆ ಕನ್ನಡದ ‘ಬ್ಲಾಂಕ್’ (Blank Kannada Movie) ಸಿನಿಮಾದ ಬಗ್ಗೆ ರಮ್ಯಾ ಅವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಪೋಸ್ಟ್ ಮಾಡಿಕೊಂಡಿದ್ದರು. ಕೃಷಿ ತಾಪಂಡ, ಪೂರ್ಣಚಂದ್ರ ಮೈಸೂರು,‌ ಸುಚೇಂದ್ರ ಪ್ರಸಾದ್ ಮುಂತಾದವರು ಅಭಿನಯಿಸಿರುವ ಈ ಸಿನಿಮಾ ಇದೇ ವಾರ (ಫೆ.25) ಬಿಡುಗಡೆ ಆಗಲಿದೆ. ಚಿತ್ರದ ಟ್ರೇಲರ್ ನೋಡಿ ರಮ್ಯಾ ಇಷ್ಟಪಟ್ಟಿದ್ದಾರೆ. ನಟಿ ಕೃಷಿ ತಾಪಂಡ (Krishi Thapanda) ಅವರಿಗೆ ರಮ್ಯಾ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಈ ಮೂಲಕ ಅವರು ‘ಬ್ಲಾಂಕ್’ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಈ ಚಿತ್ರಕ್ಕೆ ಎಸ್. ಜಯ್ ನಿರ್ದೇಶನ ಮಾಡಿದ್ದು, ಎನ್.ಪಿ. ಮಂಜುನಾಥ ಪ್ರಸನ್ನ ಬಂಡವಾಳ ಹೂಡಿದ್ದಾರೆ.

ರಮ್ಯಾ ಅವರಂಥ ಖ್ಯಾತ ನಟಿಯಿಂದ ಮೆಚ್ಚುಗೆ ಮತ್ತು ಹಾರೈಕೆ ಸಿಕ್ಕಿದ್ದಕ್ಕೆ ಕೃಷಿ ತಾಪಂಡ ಅವರು ಖುಷಿ ಆಗಿದ್ದಾರೆ. ‘ಮೊದಲು ‘ಬ್ಲಾಂಕ್​’ ಟ್ರೇಲರ್​ ಗಮನಿಸಿದ ರಮ್ಯಾ ಅವರು ನನಗೆ ಮೆಸೇಜ್​ ಮಾಡಿ ಶುಭ ಹಾರೈಸಿದರು. ಟ್ರೇಲರ್​ ಭರವಸೆ ಮೂಡಿಸುವಂತಿದೆ ಅಂತ ಹೇಳಿದ್ರು. ನಂತರ ಪೋಸ್ಟರ್​ ಮತ್ತು ಲಿಂಕ್​ ಕಳಿಸುವಂತೆ ಹೇಳಿದರು. ಯಾಕೆ ಅಂತ ಗೊತ್ತಾಗಲಿಲ್ಲ. ಆಮೇಲೆ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು ನೋಡಿ ಖುಷಿ ಆಯಿತು. ಅವರ ಫಾಲೋವರ್ಸ್​ ಕೂಡ ನಮ್ಮ ಟ್ರೇಲರ್​ ಅನ್ನು ನೋಡುವಂತಾಯಿತು. ರಮ್ಯಾ ಅಭಿಮಾನಿಗಳು ನಮ್ಮ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವಂತಾಯಿತು. ಇದು ನಮ್ಮ ತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ’ ಎಂದು ಕೃಷಿ ತಾಪಂಡ ಹೇಳಿದ್ದಾರೆ.

ಕನಸು ಮತ್ತು ವಾಸ್ತವಗಳ ನಡುವಿನ ಕಥೆಯನ್ನು ಈ ಸಿನಿಮಾ ಹೊಂದಿದೆ. ಅದರಲ್ಲಿ ಕೃಷಿ ತಾಪಂಡ ಅವರು ಮೂರು ಬಗೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಯಾವಾಗಲೂ ಕಮರ್ಷಿಯಲ್​ ಸಿನಿಮಾ ಮಾಡುವ ನನಗೆ ಇಂಥ ತುಂಬ ಡಿಫರೆಂಟ್​ ಎನಿಸಿತು. ಏನಾದರೂ ಆಗಲಿ ಎಂದು ರಿಸ್ಕ್​ ತೆಗೆದುಕೊಂಡು ಈ ಪಾತ್ರ ಮಾಡಿದ್ದೇನೆ. ಸಿಗರೇಟ್​ ಸೇದುವಂತಹ ದೃಶ್ಯಗಳು ಕೂಡ ಈ ಸಿನಿಮಾದಲ್ಲಿ ಇವೆ. ನಟನೆಗೆ ಹೆಚ್ಚು ಮಹತ್ವ ಇದೆ. ಇಂಥ ಚಿತ್ರದಲ್ಲಿ ನಟಿಸಿದರೆ ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಬಹುದು’ ಎಂದಿರುವ ಕೃಷಿ ತಾಪಂಡ ಅವರು ಪ್ರೇಕ್ಷಕರ ಪ್ರತಿಕ್ರಿಯೆ ತಿಳಿದುಕೊಳ್ಳಲು ಕಾದಿದ್ದಾರೆ.

ನಿರ್ದೇಶಕ ಎಸ್​. ಜಯ್​ ಅವರಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಅವರು ಪ್ರಯೋಗಾತ್ಮಕ ಮಾದರಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸಾಮಾನ್ಯವಾಗಿ ನಿರ್ದೇಶಕರು ಈ ರೀತಿ ಪ್ರಯೋಗ ಮಾಡಲು ಮುಂದಾದರೆ ನಿರ್ಮಾಪಕರ ಸಹಕಾರ ಸಿಗುವುದು ಕಡಿಮೆ. ಆದರೆ ‘ಬ್ಲಾಂಕ್​’ ಚಿತ್ರದ ನಿರ್ಮಾಪಕ ಎನ್​.ಪಿ. ಮಂಜುನಾಥ ಪ್ರಸನ್ನ ಅವರು ಹೊಸ ಪ್ರತಿಭೆಗಳ ಕನಸಿಗೆ ನೀರೆರೆದಿದ್ದಾರೆ. ಇಂಥ ನಿರ್ಮಾಪಕರು ಸಿಕ್ಕಿದ್ದರಿಂದ ಅಂದುಕೊಂಡ ರೀತಿಯೇ ಸಿನಿಮಾ ಮೂಡಿಬರಲು ಸಾಧ್ಯವಾಯ್ತು ಎಂದಿದ್ದಾರೆ ನಿರ್ದೇಶಕರು.

ಕೃಷಿ ತಾಪಂಡ, ಪೂರ್ಣಚಂದ್ರ ಮೈಸೂರು ಜೊತೆಗೆ ಭರತ್ ಹಾಸನ್, ರಶ್ ಮಲ್ಲಿಕ್, ಸುಚೇಂದ್ರ ಪ್ರಸಾದ್, ಪ್ರಶಾಂತ್ ಸಿದ್ದಿ ಮುಂತಾದವರು ‘ಬ್ಲಾಂಕ್’ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಶಾಸ್ತ ಸಂಗೀತ ನಿರ್ದೇಶನ. ಜೆ.ಪಿ. ಮ್ಯಾನ್ ಛಾಯಾಗ್ರಹಣ ಮಾಡಿದ್ದಾರೆ. ರಮ್ಯಾ ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾದ ಟ್ರೇಲರ್​ ನೋಡಿ ಭೇಷ್​ ಎಂದಿದ್ದಾರೆ. ಹಾಗಾಗಿ ಸೆಲೆಬ್ರಿಟಿಗಳಿಗಾಗಿ ಒಂದು ಸ್ಪೆಷಲ್​ ಶೋ ಆಯೋಜನೆ ಮಾಡುವ ಬಗ್ಗೆಯೂ ‘ಬ್ಲಾಂಕ್​’ ಚಿತ್ರತಂಡದವರು ಪ್ಲ್ಯಾನ್​ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಡಿಫರೆಂಟ್​ ಟ್ರೇಲರ್​ನಿಂದ​ ಗಮನ ಸೆಳೆದ ‘ಬ್ಲಾಂಕ್​’ ಚಿತ್ರ; ಫೆ.25ಕ್ಕೆ ರಿಲೀಸ್​ ಆಗಲಿದೆ ಸೈಕಲಾಜಿಕಲ್​ ಥ್ರಿಲ್ಲರ್ ಸಿನಿಮಾ

ನಟಿ ರಮ್ಯಾ ಜೊತೆಗಿರುವ ರಾಣಿ ಯಾರು? ವಾವ್​.. ಆಕಸ್ಮಿಕವಾಗಿ ಸಿಕ್ಕ ಜೀವದ ಬಗ್ಗೆ ಈ ಪರಿ ಪ್ರೀತಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ