ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭೇಟಿ ಮಾಡಿದ ಪ್ರೇಮ್ ಹೇಳಿದ್ದೇನು?
ರಾಜಕೀಯದ ಅನೇಕ ಗಣ್ಯರ ಜೊತೆಗೆ ಪ್ರೇಮ್ ಅವರಿಗೆ ಒಡನಾಟ ಇದೆ. ಅವರೆಲ್ಲರೂ ಬಂದು ತಮ್ಮ ಸಿನಿಮಾ ವೀಕ್ಷಿಸಲಿ ಎಂಬುದು ಪ್ರೇಮ್ ಆಸೆ. ಅದಕ್ಕಾಗಿ ಫೆ.23ರಂದು ವಿಶೇಷ ಪ್ರದರ್ಶನವನ್ನು ಅವರು ಏರ್ಪಡಿಸಲಿದ್ದಾರೆ.
ಬಹುನಿರೀಕ್ಷಿತ ‘ಏಕ್ ಲವ್ ಯಾ’ ಸಿನಿಮಾ (EK Love Ya Movie) ಫೆಬ್ರವರಿ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾಗಾಗಿ ವಿಶೇಷ ಶೋ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಹಲವು ಮುಖಂಡರಿಗೆ ಪ್ರೇಮ್ ಆಹ್ವಾನ ನೀಡಿದ್ದಾರೆ. ಖುದ್ದಾಗಿ ಭೇಟಿ ನೀಡಿ ಅನೇಕರನ್ನು ಅವರು ಆಹ್ವಾನಿಸಿದ್ದಾರೆ. ರಾಜಕೀಯದ ಅನೇಕ ಗಣ್ಯರ ಜೊತೆಗೆ ಪ್ರೇಮ್ ಅವರಿಗೆ ಒಡನಾಟ ಇದೆ. ಅವರೆಲ್ಲರೂ ಬಂದು ತಮ್ಮ ಸಿನಿಮಾ ವೀಕ್ಷಿಸಲಿ ಎಂಬುದು ಪ್ರೇಮ್ ಆಸೆ. ಅದಕ್ಕಾಗಿ ಫೆ.23ರಂದು ವಿಶೇಷ ಪ್ರದರ್ಶನವನ್ನು ಅವರು ಏರ್ಪಡಿಸಲಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ನಿರ್ದೇಶಕ ಪ್ರೇಮ್ ಅವರು ಆಹ್ವಾನ ನೀಡಿದ್ದಾರೆ. ‘ಕೊವಿಡ್ ಕಂಟಕದಿಂದ ಕುಗ್ಗಿರುವ ಕನ್ನಡ ಚಿತ್ರರಂಗಕ್ಕೆ ಬೆನ್ನೆಲುಬಾಗಿ ನಿಂತು ನಮ್ಮ ‘ಏಕ್ ಲವ್ ಯಾ’ ಸಿನಿಮಾ ವೀಕ್ಷಣೆ ಮಾಡುವುದರ ಮೂಲಕ ಮತ್ತೆ ಕನ್ನಡಿಗರಲ್ಲಿ ಭಾಷಾಭಿಮಾನ ಹಾಗೂ ಚಿತ್ರರಂಗದ ಮೇಲಿನ ಪ್ರೀತಿಯನ್ನು ಹೆಚ್ಚಿಸಬೇಕೆಂದು ಕೇಳಿಕೊಳ್ಳುತ್ತೇವೆ’ ಎಂದು ಪ್ರೇಮ್ ಹೇಳಿದ್ದಾರೆ.
ಇದನ್ನೂ ಓದಿ: ‘ಏಕ್ ಲವ್ ಯಾ’ ಸುದ್ದಿಗೋಷ್ಠಿಯಲ್ಲಿ ಪ್ರೇಮ್ ಮಾತು; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ..
‘ಆಫೀಸ್ಗೆ ಬಂದು ಒಂದು ಚಾನ್ಸ್ ಕೊಡಿ ಎಂದಿದ್ರು’; ‘ಏಕ್ ಲವ್ ಯಾ’ ನಾಯಕಿ ರೀಷ್ಮಾ ಬಗ್ಗೆ ಪ್ರೇಮ್ ಮಾತು