‘ಆಫೀಸ್​ಗೆ ಬಂದು ಒಂದು ಚಾನ್ಸ್​ ಕೊಡಿ ಎಂದಿದ್ರು’; ‘ಏಕ್​ ಲವ್​ ಯಾ’ ನಾಯಕಿ ರೀಷ್ಮಾ ಬಗ್ಗೆ ಪ್ರೇಮ್​ ಮಾತು

ಆರಂಭದಲ್ಲಿ ಪ್ರೇಮ್​ ಅವರ ಆಫೀಸ್​ಗೆ ಬಂದಿದ್ದರು ರೀಷ್ಮಾ. ಒಂದು ಅವಕಾಶ ನೀಡುವಂತೆ ಅವರು ಕೋರಿಕೊಂಡಿದ್ದರು. ಈ ವಿಚಾರವನ್ನು ಪ್ರೇಮ್​ ಅವರು ಸುದ್ದಿಗೋಷ್ಠಿ ವೇಳೆ ಹೇಳಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Feb 14, 2022 | 2:52 PM

‘ಏಕ್​ ಲವ್​ ಯಾ’ ಸಿನಿಮಾ (Ek Love Ya Movie) ತೆರೆಗೆ ಬರೋಕೆ ರೆಡಿ ಆಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದಿದ್ದಾರೆ. ‘ಜೋಗಿ’ ಪ್ರೇಮ್ (Jogi Prem) ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಈ ಕಾರಣಕ್ಕೂ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್​ ಸಹೋದರ ರಾಣ ಅವರು ಈ ಚಿತ್ರದ ಮೂಲಕ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರೆ. ರಕ್ಷಿತಾ ‘ಏಕ್​ ಲವ್​ ಯಾ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ರೀಷ್ಮಾ ನಾಣಯ್ಯ (Reeshma Nanaiah) ಹಾಗೂ ರಚಿತಾ ರಾಮ್​ ನಾಯಕಿ. ರೀಷ್ಮಾಗೆ ಇದು ಮೊದಲ ಸಿನಿಮಾ. ಈಗಾಗಲೇ ಟ್ರೇಲರ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಆರಂಭದಲ್ಲಿ ಪ್ರೇಮ್​ ಅವರ ಆಫೀಸ್​ಗೆ ಬಂದಿದ್ದರು ರೀಷ್ಮಾ. ಒಂದು ಅವಕಾಶ ನೀಡುವಂತೆ ಅವರು ಕೋರಿಕೊಂಡಿದ್ದರು. ಈ ವಿಚಾರವನ್ನು ಪ್ರೇಮ್​ ಅವರು ಸುದ್ದಿಗೋಷ್ಠಿ ವೇಳೆ ಹೇಳಿಕೊಂಡಿದ್ದಾರೆ. ಅಲ್ಲದೆ, ಅವರ ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಏಕ್​ ಲವ್​ ಯಾ’ ಹೊಸ ರಿಲೀಸ್​ ದಿನಾಂಕ ಯಾವಾಗ ಅನೌನ್ಸ್​ ಆಗುತ್ತೆ? ಮಾಹಿತಿ ಹಂಚಿಕೊಂಡ ಪ್ರೇಮ್​​

‘ಏಕ್​ ಲವ್​ ಯಾ’ ಮ್ಯೂಸಿಕ್​ಗಾಗಿ ಒಂದೂವರೆ ಕೋಟಿ ಖರ್ಚು ಮಾಡಿದೀನಿ ಎಂದ ಜೋಗಿ ಪ್ರೇಮ್​

Follow us on

Click on your DTH Provider to Add TV9 Kannada