‘ಏಕ್​ ಲವ್​ ಯಾ’ ಸುದ್ದಿಗೋಷ್ಠಿಯಲ್ಲಿ ಪ್ರೇಮ್​ ಮಾತು; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ..

Ek Love Ya Press meet: ‘ಏಕ್​ ಲವ್​ ಯಾ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರೇಮ್​, ರೀಷ್ಮಾ ಹಾಗೂ ರಾಣ ಭಾಗವಹಿಸಿದ್ದಾರೆ. ಚಿತ್ರದ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

TV9kannada Web Team

| Edited By: Madan Kumar

Feb 13, 2022 | 5:02 PM

ಪ್ರೇಮ್​ (Director Prem) ನಿರ್ದೇಶನದ ಸಿನಿಮಾ ಎಂದರೆ ಅಲ್ಲಿ ಏನಾದರೂ ಒಂದಷ್ಟು ವಿಶೇಷತೆ ಇದ್ದೇ ಇರುತ್ತದೆ. ಈಗ ಅವರು ‘ಏಕ್​ ಲವ್​ ಯಾ’ (Ek Love Ya) ಸಿನಿಮಾಗೆ ನಿರ್ದೇಶನ ಮಾಡಿದ್ದು, ಫೆ.24ಕ್ಕೆ ಆ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ ಈ ಸಿನಿಮಾದ ಹಾಡುಗಳು ಸೂಪರ್​ ಹಿಟ್​ ಆಗಿವೆ. ಆ ಮೂಲಕ ‘ಏಕ್​ ಲವ್​ ಯಾ’ ಮೇಲೆ ಹೆಚ್ಚು ನಿರೀಕ್ಷೆ ಮೂಡಿಸಿದೆ. ರಾಜ್ಯಾದ್ಯಂತ ಸಂಚರಿಸಿ ಚಿತ್ರದ ಪ್ರಚಾರ ಮಾಡಲಾಗುತ್ತಿದೆ. ಪ್ರೇಮಿಗಳ ದಿನದ ಸಲುವಾಗಿ ಫೆ.14ರಂದು ಈ ಸಿನಿಮಾದ ಇನ್ನೊಂದು ಹಾಡು ಬಿಡುಗಡೆ ಆಗಲಿದೆ. ರಕ್ಷಿತಾ ಪ್ರೇಮ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅವರ ಸಹೋದರ ರಾಣ (Raana) ಅವರು ನಾಯಕನಾಗಿ ನಟಿಸಿದ್ದು, ರೀಷ್ಮಾ ನಾಣಯ್ಯ ಮತ್ತು ರಚಿತಾ ರಾಮ್​ ಕೂಡ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಭಾನುವಾರ (ಫೆ.13) ನಡೆದ ‘ಏಕ್​ ಲವ್​ ಯಾ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರೇಮ್​, ರೀಷ್ಮಾ ಹಾಗೂ ರಾಣ ಭಾಗವಹಿಸಿದ್ದಾರೆ.

ಇದನ್ನೂ ಓದಿ:

‘ಏಕ್​ ಲವ್​ ಯಾ’ ಮ್ಯೂಸಿಕ್​ಗಾಗಿ ಒಂದೂವರೆ ಕೋಟಿ ಖರ್ಚು ಮಾಡಿದೀನಿ ಎಂದ ಜೋಗಿ ಪ್ರೇಮ್​

ಮಲ್ಟಿಪ್ಲೆಕ್ಸ್​ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯ; ಸುದ್ದಿಗೋಷ್ಠಿ ಕರೆದು ಕಿಡಿಕಾರಿದ ಜೋಗಿ ಪ್ರೇಮ್​

Follow us on

Click on your DTH Provider to Add TV9 Kannada