ಮಲ್ಟಿಪ್ಲೆಕ್ಸ್​ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯ; ಸುದ್ದಿಗೋಷ್ಠಿ ಕರೆದು ಕಿಡಿಕಾರಿದ ಜೋಗಿ ಪ್ರೇಮ್​

ಜೋಗಿ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಚಿತ್ರ ಫೆಬ್ರವರಿ 24ರಂದು ತೆರೆಗೆ ಬರುತ್ತಿದೆ. ಹೀಗಾಗಿ, ಈ ಬಗ್ಗೆ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಒಂದನ್ನು ಸಲ್ಲಿಕೆ ಮಾಡಿದ್ದಾರೆ.

ಮಲ್ಟಿಪ್ಲೆಕ್ಸ್​ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯ; ಸುದ್ದಿಗೋಷ್ಠಿ ಕರೆದು ಕಿಡಿಕಾರಿದ ಜೋಗಿ ಪ್ರೇಮ್​
ಜೋಗಿ ಪ್ರೇಮ್​
TV9kannada Web Team

| Edited By: Rajesh Duggumane

Feb 07, 2022 | 5:53 PM

ಕನ್ನಡ ಚಿತ್ರಗಳಿಗೆ (Kannada Cinema) ನಾನಾ ರೀತಿಯಲ್ಲಿ ಅನ್ಯಾಯ ಆಗುತ್ತಿದೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಇದನ್ನು ಅನೇಕ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಹೇಳಿಕೊಂಡು ಬರುತ್ತಲೇ ಇದ್ದಾರೆ. ಪರಭಾಷೆಯ ಸಿನಿಮಾಗಳ ಅಬ್ಬರದ ನಡುವೆ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಿಗುವುದಿಲ್ಲ ಎನ್ನುವುದ ದೊಡ್ಡ ಸಮಸ್ಯೆ. ಇದರ ಜತೆಗೆ ಮಲ್ಟಿಪ್ಲೆಕ್ಸ್​ಗಳಲ್ಲಿಯೂ ಸ್ಯಾಂಡಲ್​ವುಡ್​ನ (Sandalwood) ಚಿತ್ರಗಳಿಗೆ ಅನ್ಯಾಯ ಆಗುತ್ತಿದೆ. ಕನ್ನಡ ಚಿತ್ರಕ್ಕೆ ಮಲ್ಟಿಪ್ಲೆಕ್ಸ್​ಗಳಲ್ಲಿ ಹೆಚ್ಚು ಸೌಂಡ್​ ಕೊಡುವುದಿಲ್ಲ ಎನ್ನುವ ಆರೋಪ ಇದೆ. ಇದರಿಂದ ಪ್ರೇಕ್ಷಕರಿಗೆ ಸಿನಿಮಾ ಅಷ್ಟು ಪ್ರಭಾವಶಾಲಿ ಎನಿಸುವುದಿಲ್ಲ. ಇದನ್ನು ನಿರ್ದೇಶಕ ‘ಜೋಗಿ’ ಪ್ರೇಮ್​ (Jogi Prem) ಪುನರುಚ್ಛರಿಸಿದ್ದಾರೆ. ಇಂದು (ಫೆಬ್ರವರಿ 7) ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ, ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಜೋಗಿ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಚಿತ್ರ ಫೆಬ್ರವರಿ 24ರಂದು ತೆರೆಗೆ ಬರುತ್ತಿದೆ. ಹೀಗಾಗಿ, ಈ ಬಗ್ಗೆ ಅವರು ಮನವಿ ಸಲ್ಲಿಕೆ ಮಾಡಿದ್ದಾರೆ. ‘ಮಲ್ಟಿಪ್ಲೆಕ್​ಗಳಲ್ಲಿ ತೆಲುಗು, ತಮಿಳು, ಇಂಗ್ಲಿಷ್​ ಸಿನಿಮಾಗಳಿಗೆ ಒಂದು ಸೌಂಡ್​ ಅಂತ ಫಿಕ್ಸ್​ ಮಾಡಿರ್ತಾರೆ. ಇಂಗ್ಲಿಷ್ ಸಿನಿಮಾಗೆ ಸೌಂಡ್​ ಮಟ್ಟವನ್ನು ಏಳು ಪಾಯಿಂಟ್​ನಲ್ಲಿ ಇಟ್ಟರೆ, ತೆಲುಗು ಚಿತ್ರಕ್ಕೆ ಆರು ಪಾಯಿಂಟ್​​ ಸೌಂಡ್​ ಕೊಡ್ತಾರೆ. ಆದರೆ, ಕನ್ನಡದ ಸಿನಿಮಾಗಳಿಗೆ ಕೇವಲ ನಾಲ್ಕು ಪಾಯಿಂಟ್ ಸೌಂಡ್​​ ಕೊಡ್ತಾರೆ. ಇದರಿಂದ ನಮಗೆ ತುಂಬಾನೇ ತೊಂದರೆ ಆಗುತ್ತದೆ. ಆಗ ಸೌಂಡ್​ ಚೆನ್ನಾಗಿ ಕೇಳಲ್ಲ’ ಎಂದಿದ್ದಾರೆ ಪ್ರೇಮ್​.

‘ನನ್ನ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಅದಕ್ಕೆ ನಾನು ಬಂದಿದ್ದೇನೆ. ನಾನು ನನ್ನ ಚಿತ್ರದ ಹಾಡು, ಬ್ಯಾಕ್​ಗ್ರೌಂಡ್​ ಮ್ಯೂಸಿಕ್​ಗೆ ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ‘ವಿಲನ್​’ ಚಿತ್ರಕ್ಕೂ ಸೌಂಡ್​ ಸಮಸ್ಯೆ ಆಯ್ತು. ಇದರಿಂದ ಕನ್ನಡ ಚಿತ್ರಗಳು ಕಿಲ್​ ಆಗುತ್ತವೆ. ನಾನು ನನ್ನ ಚಿತ್ರದ ಬಗ್ಗೆ ಮಾತ್ರ ಹೇಳುತ್ತಿಲ್ಲ. ಎಲ್ಲಾ ಕನ್ನಡ ಚಿತ್ರಗಳಿಗೂ ಇದೇ ರೀತಿ ಆಗುತ್ತಿದೆ’ ಎಂದರು ಪ್ರೇಮ್​.

ಯುಎಫ್​ಒ ಹಾಗೂ ಕ್ಯೂಬ್​ಗೆ ಸಿನಿಮಾ ಅಪ್​ಲೋಡ್​ ಮಾಡಿಸಬೇಕು ಎಂದರೆ ಈಗಲೂ ಚೆನ್ನೈಗೆ ತೆರಳಬೇಕು. ಅಲ್ಲಿ ಸಾಕಷ್ಟು ಸಮಯ ಕಾಯಬೇಕು. ಇದಕ್ಕೆ ಪ್ರೇಮ್​ ಬೇಸರ ವ್ಯಕ್ತಪಡಿಸಿದ್ದಾರೆ. ‘ಮುಂಬೈ, ಚೆನ್ನೈ​ ಮೊದಲಾದ ಕಡೆ ಯುಎಫ್​ಒ ಹಾಗೂ ಕ್ಯೂಬ್​ ಕಚೇರಿ ಇದೆ. ಅವರವರ ಭಾಷೆಯವರು ಅವರದ್ದೇ ರಾಜ್ಯದಲ್ಲಿ ಸಿನಿಮಾ ಅಪ್​ಲೋಡ್​ ಮಾಡುತ್ತಾರೆ. ಆದರೆ, ಕರ್ನಾಟಕದಲ್ಲಿ ಏಕೆ ಯುಎಫ್​ಒ ಹಾಗೂ ಕ್ಯೂಬ್​ ಕಚೇರಿ ಇಲ್ಲ ಎಂಬುದು ನನ್ನ ಪ್ರಶ್ನೆ. ಚೆನ್ನೈಗೆ ಹೋದರೆ ದಿನಗಟ್ಟಲೆ ಕಾಯಬೇಕಾಗುತ್ತದೆ’ ಎಂದಿದ್ದಾರೆ ಪ್ರೇಮ್​.

ಜೋಗಿ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾ ತೆರೆಗೆ ಬರೋಕೆ ರೆಡಿ ಇದೆ. ಫೆಬ್ರವರಿ 24ರಂದು ಸಿನಿಮಾ ರಿಲೀಸ್​ ಆಗುತ್ತಿದೆ. ರಾಣಾ, ರಚಿತಾ ರಾಮ್, ಗ್ರೀಷ್ಮಾ ನಾಣಯ್ಯ ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರವನ್ನು ರಕ್ಷಿತಾ ಪ್ರೇಮ್​ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: Singer Mangli: ‘ಏಕ್​ ಲವ್ ಯಾ’ ಸುದ್ದಿಗೋಷ್ಠಿಯಲ್ಲಿ ಪುನೀತ್​ ನೆನೆದು ಕಣ್ಣೀರು ಹಾಕಿದ ಗಾಯಕಿ ಮಂಗ್ಲಿ

‘ನೆನಪಿರಲಿ’ ಪ್ರೇಮ್​ ಜತೆ ನಟಿಸಿದ್ದ ಹೀರೋಯಿನ್​ಗೆ ಮದುವೆ; ವೈರಲ್​ ಆಯ್ತು ಫೋಟೋ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada