Singer Mangli: ‘ಏಕ್ ಲವ್ ಯಾ’ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನೆದು ಕಣ್ಣೀರು ಹಾಕಿದ ಗಾಯಕಿ ಮಂಗ್ಲಿ
ಪುನೀತ್ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಪುನೀತ್ ಅವರನ್ನು ಕಂಡರೆ ಮಂಗ್ಲಿಗೆ ಅಚ್ಚುಮೆಚ್ಚಾಗಿತ್ತು. ಆದರೆ, ಅವರು ನಿಧನ ಹೊಂದಿರುವ ಸುದ್ದಿ ಮಂಗ್ಲಿಗೆ ಬೇಸರ ತರಿಸಿದೆ.
ರಕ್ಷಿತಾ ಪ್ರೇಮ್ ಸಹೋದರ ರಾಣ ಅವರು ‘ಏಕ್ ಲವ್ ಯಾ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ ಆದ್ದರಿಂದ ಹೆಚ್ಚಿನ ನಿರೀಕ್ಷೆ ಇದೆ. ಪ್ರೇಮ್ ಅವರು ‘ಏಕ್ ಲವ್ ಯಾ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಲಾಕ್ಡೌನ್ ಕಾರಣದಿಂದ ಆ ಸಿನಿಮಾದ ಕೆಲಸಗಳು ಕೊಂಚ ವಿಳಂಬ ಆಗಿದ್ದವು. ಈಗ ಮತ್ತೆ ಸಿನಿಮಾ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ. ರಾಣ ನಟಿಸುತ್ತಿರುವ ಈ ಚಿತ್ರಕ್ಕೆ ರೀಷ್ಮಾ ನಾಣಯ್ಯ ಹಾಗೂ ರಚಿತಾ ರಾಮ್ ನಾಯಕಿಯರು. ಇಂದು (ನವೆಂಬರ್ 12) ಈ ಚಿತ್ರದ ಸುದ್ದಿಗೋಷ್ಠಿ ನಡೆಯಿತು. ಈ ಕಾರ್ಯಕ್ರಮಕ್ಕೆ ಟಾಲಿವುಡ್ ಗಾಯಕಿ ಮಂಗ್ಲಿ ಅವರು ಆಗಮಿಸಿದ್ದರು. ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದರು.
ಪುನೀತ್ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಪುನೀತ್ ಅವರನ್ನು ಕಂಡರೆ ಮಂಗ್ಲಿಗೆ ಅಚ್ಚುಮೆಚ್ಚಾಗಿತ್ತು. ಆದರೆ, ಅವರು ನಿಧನ ಹೊಂದಿರುವ ಸುದ್ದಿ ಮಂಗ್ಲಿಗೆ ಬೇಸರ ತರಿಸಿದೆ. ‘ಏಕ್ ಲವ್ ಯಾ’ ಕಾರ್ಯಕ್ರಮದಲ್ಲಿ ಅವರು ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಇಲ್ಲಿದೆ.
ಇದನ್ನೂ ಓದಿ: Singer Mangli: ತೀವ್ರ ವಿರೋಧಕ್ಕೆ ಹೆದರಿದ ರಾಬರ್ಟ್ ಗಾಯಕಿ ಮಂಗ್ಲಿ; ವಿವಾದಾತ್ಮಕ ಸಾಂಗ್ ಡಿಲೀಟ್