Singer Mangli: ತೀವ್ರ ವಿರೋಧಕ್ಕೆ ಹೆದರಿದ ರಾಬರ್ಟ್ ಗಾಯಕಿ ಮಂಗ್ಲಿ; ವಿವಾದಾತ್ಮಕ ಸಾಂಗ್ ಡಿಲೀಟ್

Mangli controversy:  ತೆಲುಗು ರಾಜ್ಯಗಳಲ್ಲಿ ಈಗ ಬೋನಾಲು ಹಬ್ಬದ ಸಮಯ. ಈ ವಿಶೇಷ ಸಂದರ್ಭದಲ್ಲಿ ಮಂಗ್ಲಿ ‘ಬೋನಾಲು...’ ಹಾಡನ್ನು ಹಾಡಿ, ನೃತ್ಯ ಮಾಡಿದ್ದರು.  ಆದರೆ, ಈ ಹಾಡಿನ ಸಾಹಿತ್ಯ ಕಾಳಿ ದೇವಿಗೆ ಅವಮಾನ ಮಾಡುವಂತಿದೆ ಎನ್ನುವ ಆರೋಪ ಕೇಳಿ ಬಂದಿತ್ತು

Singer Mangli: ತೀವ್ರ ವಿರೋಧಕ್ಕೆ ಹೆದರಿದ ರಾಬರ್ಟ್ ಗಾಯಕಿ ಮಂಗ್ಲಿ; ವಿವಾದಾತ್ಮಕ ಸಾಂಗ್ ಡಿಲೀಟ್
ಗಾಯಕಿ ಮಂಗ್ಲಿ


‘ರಾಬರ್ಟ್’ ಸಿನಿಮಾದ​ ತೆಲುಗು ಅವತರಣಿಕೆಯ ‘ಕಣ್ಣೇ ಅಧಿರಿಂದಿ’ ಹಾಡನ್ನು ಹಾಡುವ ಮೂಲಕ ಗಾಯಕಿ ಮಂಗ್ಲಿ ಎಲ್ಲರ ಗಮನ ಸೆಳೆದಿದ್ದರು.  ಬೋನಾಲು ಹಬ್ಬದ ಸಮಯದಲ್ಲಿ ಅವರು ‘ಬೋನಾಲು…’ ಹಾಡನ್ನು ಹಾಡಿ, ನೃತ್ಯ ಮಾಡಿದ್ದರು.  ಆದರೆ, ಈ ಹಾಡಿನ ಸಾಹಿತ್ಯ ಕಾಳಿ ದೇವಿಗೆ ಅವಮಾನ ಮಾಡುವಂತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಅವರ ವಿರುದ್ಧ​ ದೂರು ಕೂಡ ದಾಖಲಾಗಿತ್ತು. ಹೀಗಾಗಿ, ಈಗ ಹಳೆ ಹಾಡನ್ನು ಡಿಲೀಟ್​ ಮಾಡಲಾಗಿದೆ. ಪದ್ಯದ ಸಾಹಿತ್ಯ ಬದಲಿಸಿ ಹೊಸ ಹಾಡನ್ನು ಹಾಡಿ ಅಪ್​ಲೋಡ್​ ಮಾಡಲಾಗಿದೆ. ಈ ವಿವಾದದ ಬಗ್ಗೆ ಮಂಗ್ಲಿ ಉತ್ತರ ನೀಡಿದ್ದಾರೆ.

‘ನಾನು ಈ ಹಿಂದೆ ಹಾಡಿದ ಬೋನಾಲು ಗೀತೆ ಬಗ್ಗೆ ಕೆಲವರು ವಿವಾದ ಸೃಷ್ಟಿಸುತ್ತಿದ್ದಾರೆ. ಈ ಬೋನಾಲು ಗೀತೆಯನ್ನು  80 ವರ್ಷದ ಪ್ರಮುಖ ಜಾನಪದ ಸಾಹಿತಿ ಪಾಲಮೂರು ರಾಮಸ್ವಾಮಿ ಅವರಿಂದ ಪಡೆದು ನಾನು ಹಾಡಿದೆ. ಅದು 25 ವರ್ಷಗಳ ಹಿಂದೆ ರಾಮಸ್ವಾಮಿಯವರು ಬರೆದಿದ್ದ ಹಾಡು. ಪಾಲುಮಾರು ಪ್ರಾಂತ್ಯದಲ್ಲಿ ಈ ಹಾಡನ್ನು ಕೋಲಾಟದ ವೇಳೆ ಹಾಡಲಾಗುತ್ತದೆ. ನಾನು ಇದನ್ನೇ ಹಾಡಿದ್ದು’ ಎಂದು ಮಂಗ್ಲಿ ಪತ್ರ ಆರಂಭಿಸಿದ್ದಾರೆ.

‘2008ರಲ್ಲಿ ಇದನ್ನು ಡಿಆ.ರ್.ಸಿ ಸಂಸ್ಥೆಯವರು ಸಿಡಿ ರೂಪದಲ್ಲಿ ಬಿಡುಗಡೆ ಮಾಡಿದ್ದರು. ರಾಮಸ್ವಾಮಿಯವರು ರಚಿಸಿದ ಗ್ರಾಮದೇವತೆಯ ಕುರಿತ ನಿಂದನಾಸ್ತುತಿಯಲ್ಲಿರೋ ಕೋಲಾಟದ  ಗೀತೆ ಅದು.  ಅದನ್ನೆ ನಾನು ಹಾಡಿದ್ದೆ. ಅದಕ್ಕೆ ಈಗ ಕೆಲವರು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಹೆಸರಲ್ಲಿ  ವಿವಾದ ಸೃಷ್ಟಿಸುತ್ತಿದ್ದಾರೆ. ನಾನೇನು ಪಂಡಿತರ ಕುಟುಂಬದಿಂದ ಬಂದವಳಲ್ಲ. ಗಿಡ-ಮರಗಳು , ಪ್ರಕೃತಿಯನ್ನು ಪೂಜಿಸುವ, ಗ್ರಾಮ ದೇವತೆಗೆಳನ್ನು ಪೂಜಿಸುವ ಗಿರಿಜನ ಬಂಜಾರಾ ಸಮುದಾಯದಿಂದ ಬಂದವಳು ನಾನು. ನಮ್ಮಲ್ಲಿ ಬತುಕಮ್ಮ, ಬೋನಾಲು ಹಬ್ಬಗಳೊಂದಿಗೆ ಬಂಜಾರ ಸಮುದಾಯದಲ್ಲಿ ತೀಜ, ಶೀತಲದೇವಿ ಹಬ್ಬಗಳಲ್ಲಿ ಪ್ರಕೃತಿಯನ್ನು ದೇವತೆಗೆಳಂತೆ ಪೂಜಿಸುತ್ತೇವೆ. ನಮಗೆ ಸಂತೋಷವೇ ಆಗಲಿ ಕಷ್ಟವೇ ಆಗಲಿ, ನಾವು ನಮ್ಮ ನಂಬಿಕೆಯೆ ಗ್ರಾಮ ದೇವತೆಯಬಳಿಯೇ ಹೇಳಿಕೊಳ್ಳುತ್ತೇವೆ. ನಮ್ಮ ಮನೆಯ ಸದಸ್ಯರನ್ನಾಗಿ ಭಾವಿಸಿಕೊಂಡು, ನಾವು ತಿನ್ನುವುದು, ಕುಡಿಯುದನ್ನೇ ನೈವೇದ್ಯೆಯಾಗಿ ನೀಡುತ್ತೇವೆ’ ಎಂದಿದ್ದಾರೆ ಅವರು.

‘ಅಮ್ಮನವರ ಆಶೀರ್ವಾದ, ಆಂಜನೇಯ ಸ್ವಾಮಿ ಕೃಪೆ, ಅಭಿಮಾನಿಗಳೆಲ್ಲರ ಆಶೀರ್ವಾದದಿಂದ ಬೆಳೆದು ಬಂದಿದ್ದೇನೆ. ಇದಕ್ಕಾಗಿಯೇ ನಾನು ಹುಟ್ಟಿ ಬೆಳೆದ ತಾಂಡಾದಲ್ಲಿ ಆಂಜನೇಯ ಸ್ವಾಮಿ ಗುಡಿ ಕಟ್ಟಿಸಿದ್ದೇನೆ.  ಇಂದು ದೀಪ, ಧೂಪ , ನೈವೈದ್ಯೆಯೊಂದಿಗೆ ಪೂಜೆ  ಮಾಡಿದ್ದೇನೆ.  ಆಂಜನೇಯನಿಗೆ ಗುಡಿ ಕಟ್ಟಿಸೋ ಸಾಮರ್ಥ್ಯ, ಧೈರ್ಯ ನೀಡುವಂತೆ ಆಂಜನೇಯನಲ್ಲಿ ಹರಕೆ ಹೊತ್ತಿದ್ದೆ. ಆ ಹರಕೆಯನ್ನು ಇಂದು ತೀರಿಸಿಕೊಂಡಿದ್ದೇನೆ. ಆದರೆ, ಎಂದೂ ಸಹ ಗುಡಿಗೆ ಹೋಗದ, ದೇವರನ್ನು ಪೂಜಿಸದ ಜನರೆಲ್ಲ ಇತ್ತೀಚೆಗೆ ನನ್ನ ವಿರುದ್ಧ ಅಪಪ್ರಚಾರ, ಟೀಕೆ ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಮಂಜಸ?’ ಎಂದು ಮಂಗ್ಲಿ ಪ್ರಶ್ನೆ ಮಾಡಿದ್ದಾರೆ.

‘ಬೋನಾಲು, ಬತಕಮ್ಮ, ಸಮ್ಮ, ಸಾರಕ್ಕೆ, ಶಿವರಾತ್ರಿ, ಸಂಕ್ರಾಂತಿ, ಹಬ್ಬಗಳಲ್ಲಿ ಹಾಡು ಹಾಡಿದ್ದೇನೆ. ಈ ಬಾರಿ ಶಿವರಾತ್ರಿಯಂದು ಪ್ರಮುಖ ಶೈವ ಸ್ಥಳ ಕಾಶಿಯಲ್ಲಿ ಹಾಡು ಹಾಡಿ ಚಿತ್ರೀಕರಿಸಿದ್ದೇನೆ, ಪ್ರತಿ ಹಬ್ಬಗಳಲ್ಲಿ ನಾನು  ನಮ್ಮ ಕುಟುಂಬದವರು ಭಾಗಿಯಾಗಿದ್ದೇವೆ. ನನ್ನನ್ನು ನಮ್ಮ ಕುಟುಂಬದವರು ಆಶೀರ್ವದಿಸಿ ಬೆಳೆಸಿದ್ದಾರೆ. ಮನೆಯ ಮಗಳಂತೆ ಬೆಳಸಿದ್ದಾರೆ. ದಶಕಗಳ ಕಾಲ ಪ್ರೋತ್ಸಾಹಿಸಿದ್ದಾರೆ. ಒಂದೇ ಬಾರಿ ನಾನು ಫೇಮಸ್ ಆಗಿಲ್ಲ. ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟು ಸಾಧನೆ ಮಾಡಿದ್ದೇನೆ. ಆದರೆ ಕೆಲವು ನನ್ನ ಹಾಡುಗಳ  ಮೇಲೆ ಹತ್ತಾರು ವರ್ಷಗಳ ನಂತರ ಈಗ ಟೀಕಿಸುತ್ತಿದ್ದಾರೆ. ತಮ್ಮ ಮನೆಗಳಲ್ಲಿ ಮಗಳು, ತಾಯಿ, ಸಹೋದರಿ ಇದ್ದಾಳೆ ಎನ್ನೋದನ್ನು ಮರೆತು ವಿಷಕ್ಷಣರಹಿತವಾಗಿ ಮನಬಂದಂತೆ ಟೀಕೆ ಮಾಡುತ್ತಿದ್ದಾರೆ’ ಎಂದು ಮಂಗ್ಲಿ ಬೇಸರ ಹೊರ ಹಾಕಿದ್ದಾರೆ.

‘ಹಾಡಿನ ಸಾಹಿತ್ಯಕ್ಕಾಗಿ ನನ್ನನ್ನು ಟೀಕಿಸುತ್ತಿದ್ದಾರೆ. ಮೈನಮ್ಮ ದೇವಿಯ ಬಗೆಗೆ ಇರುವ ನಿಂದನಾ ಸಾಹಿತ್ಯದ ಗೀತೆಗಳನ್ನು ಕುರಿತು ತಿಳಿದುಕೊಂಡು ನಂತರ ನನ್ನ ಬಗ್ಗೆ ಟೀಕೆ ಮಾಡುವವರು ಮಾಡಬೇಕಿತ್ತು. ನನ್ನ ಮನಸ್ಸು ಘಾಸಿಗೊಳಿಸಿರೋ ಟೀಕಾಕಾರರಿಗಾಗಿ ಈ ಉತ್ತರ ನೀಡುತ್ತಿದ್ದೇನೆ. ಹಿರಿಯ ಜಾನಪದ ಕಾರರಾದ ಪಾಲಮಾರು ರಾಮಮೂರ್ತಿಯವರ ಮೇಲೆ ಗೌರವ, ಅವರ ಪಾಂಡಿತ್ಯಕ್ಕೆ ಗೌರವಿಸಿ ನಾನು ಈ ಹಾಡಿನ ಬಗ್ಗೆ ಆರಂಭದಲ್ಲಿ ವಿಮರ್ಶೆ ಬಂದಾಗಿ ಬದಲಿಸಿರಲಿಲ್ಲ. ಆದರೆ ಇದೀಗ ತೀವ್ರ ಟೀಕೆ, ಪೊಲೀಸ್ ದೂರು ಕಾರಣ ರಾಮಮೂರ್ತಿಯವರ ಅನುಮತಿಯ ಮೇರೆಗೆ ಬೋನಾಲು ಹಾಡಿನ ಸಾಹಿತ್ಯ ಬದಲಿಸಿದ್ದೇನೆ. ನನ್ನನ್ನು ಟೀಕಿಸುವವರು, ಆದರಿಸುವವವರು ಎಲ್ಲರೂ ನನ್ನವರೆ ಎಂದು ಭಾವಿಸಿ ಈ ಹಾಡಿನ ಸಾಹಿತ್ಯ ಬದಲಿಸಿರುವೆ. ಈ ಹಾಡನ್ನು ತಮ್ಮೆಲ್ಲರ ಮುಂದೆ ತರುತ್ತಿರುವೆ’ ಎಂದಿದ್ದಾರೆ.

ಇದನ್ನೂ ಓದಿ: Singer Mangli: ಗಾಯಕಿ ಮಂಗ್ಲಿ ವಿವಾದ: ರಾಬರ್ಟ್​ ಸಿಂಗರ್​ ವಿರುದ್ಧ ದಾಖಲಾಯ್ತು ದೂರು

Read Full Article

Click on your DTH Provider to Add TV9 Kannada