‘ನೆನಪಿರಲಿ’ ಪ್ರೇಮ್​ ಜತೆ ನಟಿಸಿದ್ದ ಹೀರೋಯಿನ್​ಗೆ ಮದುವೆ; ವೈರಲ್​ ಆಯ್ತು ಫೋಟೋ

ಇಂದು ಸಂಜೆ ವೇಳೆಗೆ ಕರೀಷ್ಮಾ ಹಾಗೂ ವರುಣ್​ ಮದುವೆ ನೆರವೇರಿದೆ. ವರುಣ್​ ಅವರು ಕರೀಷ್ಮಾ ಹಣೆಗೆ ಕುಂಕುಮ ಇಡುತ್ತಿರುವ ಫೋಟೋ ವೈರಲ್​ ಆಗಿದೆ. ಕರೀಷ್ಮಾ ಅವರು ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ.

‘ನೆನಪಿರಲಿ’ ಪ್ರೇಮ್​ ಜತೆ ನಟಿಸಿದ್ದ ಹೀರೋಯಿನ್​ಗೆ ಮದುವೆ; ವೈರಲ್​ ಆಯ್ತು ಫೋಟೋ
ಕರೀಷ್ಮಾ ಮದುವೆ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 05, 2022 | 8:36 PM

ಕನ್ನಡ ಸಿನಿಮಾ ಹಾಗೂ ಹಿಂದಿ ಕಿರುತೆರೆಯಲ್ಲಿ ನಟಿಸಿದ್ದ ಕರೀಷ್ಮಾ ತನ್ನಾ (Karishma Tanna) ಅವರು ಪ್ರಿಯಕರ ವರುಣ್​ ಬಂಗೇರಾ (Varun Bangera) ಜತೆಗೆ ಇಂದು (ಫೆಬ್ರವರಿ 5) ಹಸೆಮಣೆ ಏರಿದ್ದಾರೆ. ಆಪ್ತರು ಹಾಗೂ ಕುಟುಂಬ ವರ್ಗದವರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಕರೀಷ್ಮಾ ಅವರು ಲೆಹಂಗಾದಲ್ಲಿ ತುಂಬಾನೇ ಬ್ಯೂಟಿಫುಲ್​ ಆಗಿ ಕಾಣಿಸುತ್ತಿದ್ದರು. ಸದ್ಯ, ಮದುವೆ ಫೋಟೋಗಳು ಹಾಗೂ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಇಂದು ಸಂಜೆ ವೇಳೆಗೆ ಕರೀಷ್ಮಾ ಹಾಗೂ ವರುಣ್​ ಮದುವೆ ನೆರವೇರಿದೆ. ವರುಣ್​ ಅವರು ಕರೀಷ್ಮಾ ಹಣೆಗೆ ಕುಂಕುಮ ಇಡುತ್ತಿರುವ ಫೋಟೋ ವೈರಲ್​ ಆಗಿದೆ. ಕರೀಷ್ಮಾ ಅವರು ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ. ಆದರೆ, ಮದುವೆಯಲ್ಲಿ ಪಾಲ್ಗೊಂಡ ಅವರ ಆಪ್ತರು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ವಲಯದಲ್ಲೂ ಇದು ವೈರಲ್​ ಆಗುತ್ತಿದೆ.

ಗುರುವಾರದಿಂದಲೇ ಕರೀಷ್ಮಾ ಹಾಗೂ ವರುಣ್​ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಈ ಬಗ್ಗೆ ಕರೀಷ್ಮಾ ಅಪ್​ಡೇಟ್​ ನೀಡುತ್ತಲೇ ಬಂದಿದ್ದರು. ಗುರುವಾರ ಹಳದಿ ಕಾರ್ಯಕ್ರಮಗಳು ಜೋರಾಗಿ ನಡೆದಿತ್ತು. ಆ ಬಳಿಕ ಮೆಹಂದಿ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿತ್ತು. ಇದರಲ್ಲಿ ಕುಟುಂಬದವರು ಪಾಲ್ಗೊಂಡಿದ್ದರು.

ಕೆಲ ವರ್ಷಗಳ ಹಿಂದೆ ಪಾರ್ಟಿ ಒಂದರಲ್ಲಿ ವರುಣ್​ ಹಾಗೂ ಕರೀಷ್ಮಾ ಭೇಟಿ ಆಗಿದ್ದರು. ಆ ಬಳಿಕ ಇವರ ನಡುವೆ ಫ್ರೆಂಡ್​ಶಿಪ್​ ಬೆಳೆದಿತ್ತು. ಅದು ಪ್ರೀತಿಗೆ ತಿರುಗಿ ಈಗ ಇಬ್ಬರೂ ದಂಪತಿಗಳಾಗಿದ್ದಾರೆ. ಕಳೆದ ನವೆಂಬರ್​ ತಿಂಗಳಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಆದರೆ, ಇದೂ ಗುಟ್ಟಾಗಿಯೇ ನಡೆದಿತ್ತು.

ಕರೀಷ್ಮಾ ಗೆಳತಿಯೊಬ್ಬರು ಇವರ ನಿಶ್ಚಿತಾರ್ಥದ ಫೋಟೋ ಪೋಸ್ಟ್ ಮಾಡಿದ್ದರು. ಆ ಬಳಿಕ ನಿರ್ಮಾಪಕಿ ಏಕ್ತಾ ಕಪೂರ್ ಈ ದಂಪತಿಗೆ ಶುಭಾಶಯ ತಿಳಿಸಿದ್ದರು. ಆ ಮೂಲಕ ಇವರ ಮದುವೆ ವಿಚಾರ ಅಧಿಕೃತವಾಗಿತ್ತು.

2001ರಲ್ಲೇ ಕರೀಷ್ಮಾ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸೀರಿಯಲ್​ಗಳಲ್ಲಿ ಅವರು ನಟಿಸಿದರು. ಈ ಮಧ್ಯೆ ಸಿನಿಮಾ ರಂಗದಲ್ಲೂ ಅವರಿಗೆ ಆಫರ್ ಬಂತು. 2005ರಲ್ಲಿ ತೆರೆಗೆ ಬಂದ ‘ದೋಸ್ತಿ: ಫ್ರೆಂಡ್ಸ್​ ಫಾರೆವರ್​’ ಚಿತ್ರದಲ್ಲಿ ನಟಿಸಿದರು. 2011ರಲ್ಲಿ ತೆರೆಗೆ ಬಂದ ಕನ್ನಡದ ‘ಐ ಆ್ಯಮ್​ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರದಲ್ಲಿ ಪ್ರೇಮ್​ಗೆ ಜತೆಯಾಗಿ ನಟಿಸಿದರು. ರವೀಂದ್ರ ಎಚ್​.ಪಿ. ದಾಸ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದರು.

ಇದನ್ನೂ ಓದಿ: 20ನೇ ವಯಸ್ಸಿಗೆ ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಕಿರುತೆರೆ ನಟಿ

‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ