ಅವೆಂಜರ್ಸ್, ಓಂ, ಮುನ್ನಭಾಯಿ ಎಂಬಿಬಿಎಸ್, 3 ಈಡಿಯಟ್ಸ್, ಬಂಧನ, ರಣಧೀರ ಸೇರಿದಂತೆ ಅನೇಕ ಬ್ಲಾಕ್ಬಸ್ಟರ್ ಚಿತ್ರಗಳ ಪೋಸ್ಟರ್ ರೀತಿಯಲ್ಲಿ ಅದಿತಿ ಮತ್ತು ಶ್ರೀನಿ ಫೋಟೋಗಳು ಮೂಡಿಬಂದಿವೆ. ಆ ಪೋಸ್ಟರ್ಗಳ ಹಿನ್ನೆಲೆಯಲ್ಲಿ ಈ ಹಾಡು ಸಾಗುತ್ತದೆ. ಈ ರೀತಿಯ ಭಿನ್ನ ಪ್ರಯತ್ನದ ಮೂಲಕ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ತೊಡಗಿಕೊಂಡಿದೆ.
‘ಸಿನಿಮಾದಲ್ಲಿ ಈ ಪೋಸ್ಟರ್ಗಳು ಬಳಕೆ ಆಗಿಲ್ಲ. ಕೇವಲ ಲಿರಿಕಲ್ ವಿಡಿಯೋದಲ್ಲಿ ಈ ರೀತಿ ಮಾಡಿದ್ದೇವೆ. ಸಿನಿಮಾದ ಕಥೆಯಲ್ಲಿ ರಿವೇಂಜ್ ತೀರಿಸಿಕೊಳ್ಳುವ ದೃಶ್ಯಗಳ ಹಿನ್ನೆಲೆಯಲ್ಲಿ ಈ ಸಾಂಗ್ ಬರುತ್ತದೆ. ಅದಕ್ಕೆ ರಿವೆಂಜರ್ಸ್ ಅಂತ ಕರೆದಿದ್ದೇವೆ. ರ‍್ಯಾಪರ್ ಗುಬ್ಬಿ ಅವರು ಈ ಹಾಡನ್ನು ಬರೆದು ಧ್ವನಿ ನೀಡಿದ್ದಾರೆ’ ಎಂದು ಶ್ರೀನಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೊರೊನಾ ಮೂರನೇ ಅಲೆಯ ಹಾವಳಿ ಕಡಿಮೆ ಆಗಿರುವ ಕಾರಣದಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಈ ಅನುಮತಿಯಿಂದಾಗಿ ಎಲ್ಲ ಸಿನಿಮಾ ತಂಡಗಳಿಗೆ ಅನುಕೂಲ ಆಗಲಿದೆ. ಹಾಗಾಗಿ ಶ್ರೀನಿ ಕೂಡ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಫೆ.25ರಂದು ಬಿಡುಗಡೆ ಆಗಲಿರುವ ‘ಓಲ್ಡ್ ಮಾಂಕ್’ ಚಿತ್ರ ಜನರಿಗೆ ಇಷ್ಟ ಆಗಲಿದೆ ಎಂಬ ವಿಶ್ವಾಸ ಅವರಿಗೆ ಇದೆ.
‘ಓಲ್ಡ್ ಮಾಂಕ್’ ಚಿತ್ರದ ಟ್ರೇಲರ್ ನೋಡಿದ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಎಸ್. ನಾರಾಯಣ್, ಸುಜಯ್ ಶಾಸ್ತ್ರಿ, ಅರುಣಾ ಬಾಲರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಸೌರಭ್ ಮತ್ತು ವೈಭವ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ದೀಪು ಎಸ್. ಕುಮಾರ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಭರತ್ ಪರಶುರಾಮ್ ಛಾಯಾಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ:
ಪುನೀತ್ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್ ಮಾಂಕ್’ ಟ್ರೇಲರ್; ಇದರಲ್ಲಿದೆ ಹತ್ತಾರು ವಿಶೇಷತೆ