‘ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಎಂದಿದ್ದ ಕರೀಷ್ಮಾಗೆ ಮದುವೆ; ಇಲ್ಲಿವೆ ಫೋಟೋಗಳು
ಕೆಲ ವರ್ಷಗಳ ಹಿಂದೆ ಪಾರ್ಟಿ ಒಂದರಲ್ಲಿ ವರುಣ್ ಹಾಗೂ ಕರೀಷ್ಮಾ ಭೇಟಿ ಆಗಿದ್ದರು. ಆ ಬಳಿಕ ಇವರ ನಡುವೆ ಫ್ರೆಂಡ್ಶಿಪ್ ಬೆಳೆದಿತ್ತು. ಅದು ಪ್ರೀತಿಗೆ ತಿರುಗಿ ಈಗ ಇಬ್ಬರೂ ದಂಪತಿಗಳಾಗಿದ್ದಾರೆ.
Updated on: Feb 05, 2022 | 9:15 PM

ಕನ್ನಡ ಸಿನಿಮಾ ಹಾಗೂ ಹಿಂದಿ ಕಿರುತೆರೆಯಲ್ಲಿ ನಟಿಸಿದ್ದ ಕರೀಷ್ಮಾ ತನ್ನಾ ಅವರು ಪ್ರಿಯಕರ ವರುಣ್ ಬಂಗೇರಾ (Varun Bangera) ಜತೆಗೆ ಇಂದು (ಫೆಬ್ರವರಿ 5) ಹಸೆಮಣೆ ಏರಿದ್ದಾರೆ. ಆಪ್ತರು ಹಾಗೂ ಕುಟುಂಬ ವರ್ಗದವರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ.

ಕರೀಷ್ಮಾ ಅವರು ಲೆಹಂಗಾದಲ್ಲಿ ತುಂಬಾನೇ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದರು. ಸದ್ಯ, ಮದುವೆ ಫೋಟೋಗಳು ಹಾಗೂ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಇಂದು ಸಂಜೆ ವೇಳೆಗೆ ಕರೀಷ್ಮಾ ಹಾಗೂ ವರುಣ್ ಮದುವೆ ನೆರವೇರಿದೆ. ವರುಣ್ ಅವರು ಕರೀಷ್ಮಾ ಹಣೆಗೆ ಕುಂಕುಮ ಇಡುತ್ತಿರುವ ಫೋಟೋ ವೈರಲ್ ಆಗಿದೆ. ಕರೀಷ್ಮಾ ಅವರು ಯಾವುದೇ ಫೋಟೋಗಳನ್ನು ಹಂಚಿಕೊಂಡಿಲ್ಲ.

ಮದುವೆಯಲ್ಲಿ ಪಾಲ್ಗೊಂಡ ಅವರ ಆಪ್ತರು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ವಲಯದಲ್ಲೂ ಇದು ವೈರಲ್ ಆಗುತ್ತಿದೆ.

ಗುರುವಾರದಿಂದಲೇ ಕರೀಷ್ಮಾ ಹಾಗೂ ವರುಣ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಈ ಬಗ್ಗೆ ಕರೀಷ್ಮಾ ಅಪ್ಡೇಟ್ ನೀಡುತ್ತಲೇ ಬಂದಿದ್ದರು. ಗುರುವಾರ ಹಳದಿ ಕಾರ್ಯಕ್ರಮಗಳು ಜೋರಾಗಿ ನಡೆದಿತ್ತು. ಆ ಬಳಿಕ ಮೆಹಂದಿ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿತ್ತು.

2001ರಲ್ಲೇ ಕರೀಷ್ಮಾ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸೀರಿಯಲ್ಗಳಲ್ಲಿ ಅವರು ನಟಿಸಿದರು. ಈ ಮಧ್ಯೆ ಸಿನಿಮಾ ರಂಗದಲ್ಲೂ ಅವರಿಗೆ ಆಫರ್ ಬಂತು. 2005ರಲ್ಲಿ ತೆರೆಗೆ ಬಂದ ‘ದೋಸ್ತಿ: ಫ್ರೆಂಡ್ಸ್ ಫಾರೆವರ್’ ಚಿತ್ರದಲ್ಲಿ ನಟಿಸಿದರು. 2011ರಲ್ಲಿ ತೆರೆಗೆ ಬಂದ ಕನ್ನಡದ ‘ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರದಲ್ಲಿ ಪ್ರೇಮ್ಗೆ ಜತೆಯಾಗಿ ನಟಿಸಿದರು. ರವೀಂದ್ರ ಎಚ್.ಪಿ. ದಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.

TV9 Kannada
Read More




