‘ದೊಡ್ಡ ಮನೆ ಕಟ್ಟಿದಷ್ಟೇ ಖರ್ಚು, ಮನೆ ಸೆಟ್​ ನಿರ್ಮಾಣಕ್ಕೂ ಆಗಿದೆ’; ‘ಬೈ ಟು ಲವ್​’ ನಿರ್ದೇಶಕ

‘ದೊಡ್ಡ ಮನೆ ಕಟ್ಟಿದಷ್ಟೇ ಖರ್ಚು, ಮನೆ ಸೆಟ್​ ನಿರ್ಮಾಣಕ್ಕೂ ಆಗಿದೆ’; ‘ಬೈ ಟು ಲವ್​’ ನಿರ್ದೇಶಕ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 07, 2022 | 2:40 PM

‘ಬೈ ಟು ಲವ್​’ ಬಗ್ಗೆ ನಿರ್ದೇಶಕ ಹರಿ ಸಂತೋಷ್​ ಟಿವಿ9 ಕನ್ನಡ ಡಿಜಿಟಲ್​ ಜತೆಗೆ ಮಾತನಾಡಿದ್ದಾರೆ. ಈ ಚಿತ್ರಕ್ಕಾಗಿ ಮಾಡಿದ ಸೆಟ್​ಗಳು ಬಹಳ ಅದ್ದೂರಿಯಾಗಿವೆ. ಇದನ್ನು ನಿರ್ಮಿಸಲು ಬಿದ್ದ ಖರ್ಚೆಷ್ಟು ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ.

ಕೊರೊನಾ ಮೂರನೆ ಅಲೆ ಕಡಿಮೆ ಆಗುತ್ತಿದ್ದಂತೆ ಚಿತ್ರರಂಗದಲ್ಲಿ ಮತ್ತೆ ಮೊದಲಿನ ಕಳೆ ಬರೋಕೆ ಶುರುವಾಗಿದೆ. ಸಿನಿಮಾಗಳು ರಿಲೀಸ್​ ದಿನಾಂಕ ಘೋಷಣೆ ಮಾಡಿಕೊಳ್ಳುತ್ತಿವೆ. ಅದೇ ರೀತಿ ಧನ್ವೀರ್ (Dhanveer) ಹಾಗೂ ಶ್ರೀಲೀಲಾ (Sree Leela) ನಟನೆಯ ‘ಬೈ ಟು ಲವ್​’ ಚಿತ್ರ (By Two Love Movie) ಕೂಡ ರಿಲೀಸ್​ಗೆ ರೆಡಿ ಇದೆ. ಆರಂಭದಲ್ಲಿ ಫೆಬ್ರವರಿ 25ರಂದು ಚಿತ್ರ ತೆರೆಗೆ ಬರೋಕೆ ಪ್ಲ್ಯಾನ್​ ಮಾಡಿಕೊಂಡಿದ್ದ ತಂಡ, ಈಗ ಒಂದು ವಾರ ಮೊದಲೇ ಸಿನಿಮಾ ರಿಲೀಸ್​ ಮಾಡುತ್ತಿದೆ. ಫೆಬ್ರವರಿ 18ರಂದು ಚಿತ್ರ ರಿಲೀಸ್​ ಆಗುತ್ತಿದೆ. ಸಿನಿಮಾ ಬಗ್ಗೆ ನಿರ್ದೇಶಕ ಹರಿ ಸಂತೋಷ್​ ಟಿವಿ9 ಕನ್ನಡ ಡಿಜಿಟಲ್​ ಜತೆಗೆ ಮಾತನಾಡಿದ್ದಾರೆ. ಈ ಚಿತ್ರಕ್ಕಾಗಿ ಮಾಡಿದ ಸೆಟ್​ಗಳು ಬಹಳ ಅದ್ದೂರಿಯಾಗಿವೆ. ಇದನ್ನು ನಿರ್ಮಿಸಲು ಬಿದ್ದ ಖರ್ಚೆಷ್ಟು ಎನ್ನುವ ಬಗ್ಗೆ ಅವರು ಮಾತನಾಡಿದ್ದಾರೆ. ಒಂದು ಮನೆ ನಿರ್ಮಾಣಕ್ಕೆ ಬಿದ್ದಷ್ಟೇ ಖರ್ಚು ಮನೆ ಸೆಟ್​ ನಿರ್ಮಾಣಕ್ಕೂ ತಗುಲಿದೆ ಎನ್ನುತ್ತಾರೆ ಅವರು.  

ಇದನ್ನೂ ಓದಿ: ಧನ್ವೀರ್​ ಬರ್ತ್​ಡೇಗೆ ಗಿಫ್ಟ್​ ಆಗಿ ಸಿಕ್ಕಿತ್ತು ನಾಗರಹಾವು; ಭಯಂಕರ ಘಟನೆ ನೆನೆದ ‘ಬೈ ಟು ಲವ್​’ ಹೀರೋ

ಧನ್ವೀರ್​-ಶ್ರೀಲೀಲಾ ಚಿತ್ರಕ್ಕೆ ‘ಬೈ ಟೂ ಲವ್​’ ಅಂತ ಟೈಟಲ್​ ಇಟ್ಟಿದ್ದು ಯಾಕೆ? ಡೈರೆಕ್ಟರ್​ ನೀಡಿದ ಉತ್ತರ ಇಲ್ಲಿದೆ..