ಲತಾ ಮಂಗೇಶ್ಕರ್​ಗೆ ಅಂತಿಮ ನಮನ ಸಲ್ಲಿಸಿದ ಶಾರುಖ್​ ಖಾನ್​; ಇಲ್ಲಿದೆ ವಿಡಿಯೋ

ಲತಾ ಮಂಗೇಶ್ಕರ್​ಗೆ ಅಂತಿಮ ನಮನ ಸಲ್ಲಿಸಿದ ಶಾರುಖ್​ ಖಾನ್​; ಇಲ್ಲಿದೆ ವಿಡಿಯೋ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 06, 2022 | 9:05 PM

ವಿಶೇಷ ವಾಹನದಲ್ಲಿ ಲತಾ ಮಂಗೇಶ್ಕರ್​ ಪಾರ್ಥಿವ ಶರೀರವನ್ನು ಶಿವಾಜಿ ಪಾರ್ಕ್​ಗೆ ಕರೆತರಲಾಯಿತು. ದಾರಿಯುದ್ದಕ್ಕೂ ಲತಾ ಅವರ ಅಪಾರ ಅಭಿಮಾನಿಗಳು ವಾಹನವನ್ನು ಹಿಂಬಾಲಿಸಿದರು. ಇಡೀ ವಾಹನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದಾರಿಯುದ್ದಕ್ಕೂ ಲತಾ ಅವರನ್ನು ಬೀಳ್ಕೊಡಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು.

ಲತಾ ಮಂಗೇಶ್ಕರ್ (Lata Mangeshkar)​ ಅವರು ಭಾನುವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ನಿಧನ ಹೊಂದಿದರು. ಮುಂಬೈನ ಖಾಸಗಿ ಆಸ್ಪತ್ರೆ ವೈದ್ಯರು ಈ ವಿಚಾರವನ್ನು ಅಧಿಕೃತ ಮಾಡಿದರು. ಕೊವಿಡ್ ಹಾಗೂ ನ್ಯುಮೋನಿಯಾದಿಂದ ಅವರು ಬಳಲುತ್ತಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.ಲತಾ ಮಂಗೇಶ್ಕರ್​ ದೇಹವನ್ನು ಮುಂಬೈನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅನುಪಮ್​ ಖೇರ್ (Anupam Kher)​ ಸೇರಿದಂತೆ ಬಾಲಿವುಡ್​ನ ಸಾಕಷ್ಟು ದಿಗ್ಗಜರು ಬಂದು ಲತಾ ಅವರ ಅಂತಿಮ ದರ್ಶನ ಪಡೆದರು. ಕೇವಲ ಆಪ್ತರಿಗಷ್ಟೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮನೆಯಿಂದ ಲತಾ ಮಂಗೇಶ್ಕರ್​ ಅವರ ಪಾರ್ಥಿವ ಶರೀರ ತೆರಳುವುದಕ್ಕೂ ಮೊದಲು ಅವರ ಸಹೋದರಿ ಆಶಾ ಭೋಸ್ಲೆ ಅವರು ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ವಿಶೇಷ ವಾಹನದಲ್ಲಿ ಲತಾ ಮಂಗೇಶ್ಕರ್​ ಪಾರ್ಥಿವ ಶರೀರವನ್ನು ಶಿವಾಜಿ ಪಾರ್ಕ್​ಗೆ ಕರೆತರಲಾಯಿತು. ದಾರಿಯುದ್ದಕ್ಕೂ ಲತಾ ಅವರ ಅಪಾರ ಅಭಿಮಾನಿಗಳು ವಾಹನವನ್ನು ಹಿಂಬಾಲಿಸಿದರು. ಇಡೀ ವಾಹನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದಾರಿಯುದ್ದಕ್ಕೂ ಲತಾ ಅವರನ್ನು ಬೀಳ್ಕೊಡಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ಗಾಯಕಿಗೆ ದುಃಖದ ವಿದಾಯ ಹೇಳಿದರು. ಶಾರುಖ್​ ಖಾನ್ (Shah Rukh Khan)​ ಅವರು ಶಿವಾಜಿ ಪಾರ್ಕ್​ಗೆ ತೆರಳಿ ಲತಾ ಮಂಗೇಶ್ಕರ್​ಗೆ  ಅಂತಿಮ ನಮನ ಸಲ್ಲಿಸಿದರು. 

ಇದನ್ನೂ ಓದಿ: Lata Mangeshkar Funeral: ನೆಚ್ಚಿನ ಗಾಯಕಿಗೆ ದುಃಖದ ವಿದಾಯ; ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಲತಾ ಮಂಗೇಶ್ಕರ್​ ಅಂತ್ಯಸಂಸ್ಕಾರ 

ಲತಾ ಮಂಗೇಶ್ಕರ್ ಪಾರ್ಥಿವ ಶರೀರಕ್ಕೆ ಶಾರುಖ್ ಖಾನ್, ಪ್ರಧಾನಿ ಮೋದಿ ನಮನ; ಇಲ್ಲಿವೆ ಫೋಟೋ