ಧನ್ವೀರ್ ಬರ್ತ್ಡೇಗೆ ಗಿಫ್ಟ್ ಆಗಿ ಸಿಕ್ಕಿತ್ತು ನಾಗರಹಾವು; ಭಯಂಕರ ಘಟನೆ ನೆನೆದ ‘ಬೈ ಟು ಲವ್’ ಹೀರೋ
‘ಬೈ ಟು ಲವ್’ ಚಿತ್ರದ ಬಗ್ಗೆ ಧನ್ವೀರ್ ಹಾಗೂ ಶ್ರೀಲೀಲಾ ‘ಟಿವಿ9 ಕನ್ನಡ ಡಿಜಿಟಲ್’ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಧನ್ವೀರ್ ಅವರು ತಮ್ಮ ಜೀವನದಲ್ಲಿ ನಡೆದ ಕೆಲ ಅಚ್ಚರಿಯ ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ.
ನಟ ಧನ್ವೀರ್ (Dhanveer) ಅವರು ಸ್ಯಾಂಡಲ್ವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ‘ಬೈ ಟು ಲವ್’ ಚಿತ್ರ (By Two Love Movie) ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ಧನ್ವೀರ್ ನಟನೆಯ ‘ವಾಮನ’ ಸಿನಿಮಾ ಕೆಲಸಗಳು ಈಗಷ್ಟೇ ಆರಂಭವಾಗಿದೆ. ‘ಬೈ ಟು ಲವ್’ ಚಿತ್ರದ ಬಗ್ಗೆ ಧನ್ವೀರ್ ಹಾಗೂ ಶ್ರೀಲೀಲಾ (Sree Leela) ‘ಟಿವಿ9 ಕನ್ನಡ ಡಿಜಿಟಲ್’ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಧನ್ವೀರ್ ಅವರು ತಮ್ಮ ಜೀವನದಲ್ಲಿ ನಡೆದ ಕೆಲ ಅಚ್ಚರಿಯ ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ. ಧನ್ವೀರ್ ಇತ್ತೀಚೆಗೆ ಫಾರ್ಮ್ಹೌಸ್ಗೆ ತೆರಳಿ ಬರ್ತ್ಡೇ ಆಚರಿಸಿಕೊಂಡಿದ್ದರು. ಈ ವೇಳೆ ಅವರ ಗೆಳೆಯರೂ ಇದ್ದರು. ಆಗ ಪಿರಿಯಾಪಟ್ಟಣದಿಂದ ಬಂದಿದ್ದ ವ್ಯಕ್ಯಿಯೋರ್ವ ಗಿಫ್ಟ್ ಆಗಿ ನಾಗರಹಾವನ್ನು ನೀಡಿದ್ದರು! ಹಾವನ್ನು ನೋಡಿ ಧನ್ವೀರ್ ಓಡಿ ಹೋಗಿದ್ದಾರೆ. ಆ ಭಯಾನಕ ಘಟನೆ ಬಗ್ಗೆ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿಗೆ ಧನ್ವೀರ್ ಹೊಸಸಿನಿಮಾ ಶೀರ್ಷಿಕೆ ಘೋಷಣೆ; ರಕ್ತಸಿಕ್ತ ಚಾಕು ಹಿಡಿದು ಬಂದ ‘ವಾಮನ’
‘ಹೆಣ್ಣುಮಗು ಹುಟ್ಟೋಕೆ ನಾನು ಮದುವೆ ಆಗಲ್ಲ’; ಶ್ರೀಲೀಲಾಗೆ ನೇರವಾಗಿ ಹೇಳಿದ ಧನ್ವೀರ್
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

