ಸಂಕ್ರಾಂತಿಗೆ ಧನ್ವೀರ್ ಹೊಸಸಿನಿಮಾ ಶೀರ್ಷಿಕೆ ಘೋಷಣೆ; ರಕ್ತಸಿಕ್ತ ಚಾಕು ಹಿಡಿದು ಬಂದ ‘ವಾಮನ’

ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿ ಅನುಭವ ಹೊಂದಿರುವ ಶಂಕರ್ ರಾಮನ್ ಅವರು ಧನ್ವೀರ್​ ನಟನೆಯ 3ನೇ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.

ಸಂಕ್ರಾಂತಿಗೆ ಧನ್ವೀರ್ ಹೊಸಸಿನಿಮಾ ಶೀರ್ಷಿಕೆ ಘೋಷಣೆ; ರಕ್ತಸಿಕ್ತ ಚಾಕು ಹಿಡಿದು ಬಂದ ‘ವಾಮನ’
ಧನ್ವೀರ್​

ನಟ ಧನ್ವೀರ್ (Dhanveer)​ ಈಗತಾನೇ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ ಅವರಿಗೆ ಇರುವ ಅಭಿಮಾನಿ ಬಳಗ ಚಿಕ್ಕದೇನಲ್ಲ. ಈಗ ಸಂಕ್ರಾಂತಿ (Makara Sankranti 2022) ಪ್ರಯುಕ್ತ ಅವರ ಮೂರನೇ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ ಲುಕ್​ ಪೋಸ್ಟರ್​ ಲಾಂಚ್​​ ಆಗಿದೆ. ಈ ಚಿತ್ರಕ್ಕೆ ‘ವಾಮನ’ (Vamana) ಎನ್ನುವ ಶೀರ್ಷಿಕೆ ಫೈನಲ್​ ಆಗಿದೆ. ಈ ಪೋಸ್ಟರ್​ ನೋಡಿ ಅವರ ಅಭಿಮಾನಿಗಳಲ್ಲಿ ಇದ್ದ ಕುತೂಹಲ ಹೆಚ್ಚಾಗಿದೆ. ಫಸ್ಟ್​ಲುಕ್​ ಪೋಸ್ಟರ್​ನಲ್ಲಿ ಧನ್ವೀರ್​ ಅವರು ಕೈನಲ್ಲಿ ಚಾಕು ಹಿಡಿದು ನಿಂತಿದ್ದಾರೆ. ಚಾಕು ಸಂಪೂರ್ಣವಾಗಿ ರಕ್ತಸಿಕ್ತವಾಗಿದೆ. ಈ ಮೂಲಕ ಸಿನಿಮಾದಲ್ಲಿ ರೌಡಿಸಂ, ರಕ್ತದ ಕಥೆಯನ್ನು ಹೇಳಲಾಗುತ್ತಿದೆ ಎಂಬುದನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶನ ಮಾಡುವವರು ಯಾರು ಎಂಬುದು ಕೂಡ ಬಹಿರಂಗ ಆಗಿದೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿ ಅನುಭವ ಹೊಂದಿರುವ ಶಂಕರ್ ರಾಮನ್ ಅವರು ಧನ್ವೀರ್​ ನಟನೆಯ 3ನೇ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಚಿತ್ರರಂಗದಲ್ಲಿ ಅವರದ್ದು 13 ವರ್ಷಗಳ ಅನುಭವ. ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಧನ್ವೀರ್​ಗಾಗಿ ಶಂಕರ್ ರಾಮನ್ ಅವರು ಮಾಫಿಯಾ ಲೋಕದ ಕಥೆ ಸಿದ್ಧಪಡಿಸಿದ್ದಾರೆ. ಈ ಸಿನಿಮಾ ಮಾಸ್​ ಆಕ್ಷನ್ ಎಂಟರ್​ಟೇನರ್​ ಪ್ರಕಾರದಲ್ಲಿ ಮೂಡಿಬರಲಿದೆ.

‘ಬಜಾರ್​’ ಸಿನಿಮಾ ಮೂಲಕ ಧನ್ವೀರ್​ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದರು. ಸದ್ಯ ಧನ್ವೀರ್​ ಗೌಡ ‘ಬೈ ಟು ಲವ್​’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಅದು ಅವರ 2ನೇ ಸಿನಿಮಾ. ಮೂರನೇ ಚಿತ್ರಕ್ಕಾಗಿ ಧನ್ವೀರ್​ ಅವರು ಒಂದಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರಕ್ಕಾಗಿ ತಯಾರಿ ನಡೆಯುತ್ತಿದೆ. ದೇಹವನ್ನು ಹುರಿಗೊಳಿಸಿಕೊಂಡು ಅವರು ಕ್ಯಾಮೆರಾ ಎದುರಿಸಲಿದ್ದಾರೆ. ಮೊದಲೆರಡು ಸಿನಿಮಾಗಳಿಗಿಂತಲೂ ಈ ಚಿತ್ರ ಭಿನ್ನವಾಗಿ ಇರಲಿದೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ. ಈ ಸಿನಿಮಾದಲ್ಲಿ ಬೇರೆ ಯಾವೆಲ್ಲ ಕಲಾವಿದರು ಇರಲಿದ್ದಾರೆ ಎಂಬುದು ಕೂಡ ಇನ್ನಷ್ಟೇ ತಿಳಿಯಬೇಕಿದೆ. ಜ.20ರಿಂದ ಈ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Samanvi Funeral: ಬೆಂಗಳೂರಿನಲ್ಲಿ ನೆರವೇರಿದ ಬಾಲನಟಿ ಸಮನ್ವಿ ಅಂತ್ಯಕ್ರಿಯೆ; ಮುಗಿಲುಮುಟ್ಟಿದ ಆಕ್ರಂದನ

ಸಮನ್ವಿಗೆ ಅಪ್ಪನ ಕೊನೆಯ ಮುತ್ತು; ಇಲ್ಲಿದೆ ಮನಕಲಕುವ ವಿಡಿಯೋ

Click on your DTH Provider to Add TV9 Kannada