Satish Ninasam: ಮಗಳ ಹೆಸರು, ಫೋಟೋ ರಿವೀಲ್ ಮಾಡಿದ ಸತೀಶ್ ನೀನಾಸಂ
ಸತೀಶ್ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ‘ಲೂಸಿಯಾ’ ಚಿತ್ರ ಅವರಿಗೆ ದೊಡ್ಡ ಮಟ್ಟದಲ್ಲಿ ಹಿಟ್ ತಂದುಕೊಟ್ಟಿತ್ತು. ಆ ಸಿನಿಮಾ ಬಳಿಕ ಅವರ ಚಾರ್ಮ್ ಚೇಂಜ್ ಆಯಿತು. ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬಂದವು.
ಸತೀಶ್ ನೀನಾಸಂ (Sathish Ninasam) ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಖಾಸಗಿತನಕ್ಕೆ ಗೌರವ ಕೊಡಬೇಕು ಎನ್ನುವ ಉದ್ದೇಶಕ್ಕೆ ಮಗಳ ಫೋಟೋವನ್ನು ಅವರು ಹಂಚಿಕೊಂಡಿರಲಿಲ್ಲ. ಈಗ ಮಗಳ ಫೋಟೋವನ್ನು ಸತೀಶ್ ಹಂಚಿಕೊಂಡಿದ್ದಾರೆ. ಮಗಳ ಹೆಸರು ಮನಸ್ವಿತ. ಅವಳು ಒಂದು ವರ್ಷ ಇದ್ದಾಗಿನ ಫೋಟೋವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ ಸತೀಶ್.
‘ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ, ನನ್ನ ಮಗಳು ಮನಸ್ವಿತಾ. ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಚಿತ್ರ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬ ಯಾವ ಚಿತ್ರಗಳನ್ನು ಹಂಚಿಕೊಂಡಿರಲಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ’ ಎಂದು ಸತೀಶ್ ಬರೆದುಕೊಂಡಿದ್ದಾರೆ.
ಮನಸ್ವಿತ ಒಂದು ವರ್ಷ ಇದ್ದಾಗ ತೆಗೆದ ಫೋಟೋವನ್ನು ಸತೀಶ್ ಹಾಕಿದ್ದಾರೆ. ಈ ಬಗ್ಗೆಯೂ ಸತೀಶ್ ಬರೆದುಕೊಂಡಿದ್ದಾರೆ. ‘ಇದು ಅವಳ ಮೊದಲ ವರ್ಷ ತೆಗೆದ ಚಿತ್ರ. ಈಗ ಅವಳು 5 ತುಂಬಿ 6ರ ಹೆಜ್ಜೆ ಇಡುತ್ತಿದ್ದಾಳೆ. ಧನ್ಯವಾದಗಳೊಂದಿಗೆ. ಸುಪ್ರೀತಾ, ಮನಸ್ವಿತ, ಸತೀಶ್’ ಎಂದು ಅವರು ಬರೆದುಕೊಂಡಿದ್ದಾರೆ. ಸತೀಶ್ ಹಂಚಿಕೊಂಡಿರುವ ಫೋಟೋ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಸತೀಶ್ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ‘ಲೂಸಿಯಾ’ ಚಿತ್ರ ಅವರಿಗೆ ದೊಡ್ಡ ಮಟ್ಟದಲ್ಲಿ ಹಿಟ್ ತಂದುಕೊಟ್ಟಿತ್ತು. ಆ ಸಿನಿಮಾ ಬಳಿಕ ಅವರ ಚಾರ್ಮ್ ಚೇಂಜ್ ಆಯಿತು. ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬಂದವು. 2018ರಲ್ಲಿ ತೆರೆಗೆ ಬಂದ ‘ಅಯೋಗ್ಯ’ ಸಿನಿಮಾ ಸೂಪರ್-ಡೂಪರ್ ಹಿಟ್ ಆಯಿತು. ಸದ್ಯ, ಅವರ ಕೈಯಲ್ಲಿ ಹಲವು ಆಫರ್ಗಳಿವೆ. ‘ಪೆಟ್ರೋಮ್ಯಾಕ್ಸ್’ ಸೇರಿ ಅನೇಕ ಚಿತ್ರಗಳ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.
ಇದನ್ನೂ ಓದಿ: ‘ಎಲ್ಲವೂ ಕೂಡಿ ಬಂದ್ರೆ ಕನ್ನಡದಲ್ಲೇ ರಮ್ಯಾ ಜತೆ ಸಿನಿಮಾ ಮಾಡ್ತೀನಿ’: ಸತೀಶ್ ನೀನಾಸಂ
Ninasam Sathish: ನಟ ನೀನಾಸಂ ಸತೀಶ್ ಅವರಿಗೆ ಮಾತೃ ವಿಯೋಗ
Published On - 7:07 pm, Fri, 14 January 22