ಸಮನ್ವಿಗೆ ಅಪ್ಪನ ಕೊನೆಯ ಮುತ್ತು; ಇಲ್ಲಿದೆ ಮನಕಲಕುವ ವಿಡಿಯೋ

ಅಂತ್ಯಸಂಸ್ಕಾರಕ್ಕೂ ಮೊದಲು ಆಂಬುಲೆನ್ಸ್​ನಲ್ಲಿ ರೂಪೇಶ್​ ಅವರು ಮಗಳ ಹಣೆಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗುತ್ತಿದೆ.

ಜನವರಿ 13ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲನಟಿ, ಅಮೃತಾ ನಾಯ್ಡು ಮಗಳು ಸಮನ್ವಿ ಅಂತ್ಯಕ್ರಿಯೆ ಇಂದು (ಜನವರಿ 14)  ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ. ಬಣಜಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿದೆ. ತಂದೆ ರೂಪೇಶ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಸಮನ್ವಿ ಪಂಚಭೂತಗಳಲ್ಲಿ ಲೀನಳಾಗಿದ್ದಾಳೆ. ಅಂತ್ಯಸಂಸ್ಕಾರಕ್ಕೂ ಮೊದಲು ಆಂಬುಲೆನ್ಸ್​ನಲ್ಲಿ ರೂಪೇಶ್​ ಅವರು ಮಗಳ ಹಣೆಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗುತ್ತಿದೆ. ಜ.13ರಂದು ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟರ್ ಮೇಲೆ ಸಮನ್ವಿ ಹಾಗೂ ಅಮೃತಾ ನಾಯ್ಡು ತೆರಳುತ್ತಿದ್ದರು. ಈ ವೇಳೆ ಸ್ಕೂಟರ್​ಗೆ ಲಾರಿ ಬಂದು ಹೊಡೆಯಿತು. ಸ್ಥಳದಲ್ಲೇ ಸಮನ್ವಿ ಮೃತಪಟ್ಟಳು. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: ಬಾಲಕಿ ಸಮನ್ವಿಗೆ ಆ್ಯಕ್ಸಿಡೆಂಟ್ ಆಗಲು ಕಾರಣ ಏನು? ಅಸಲಿ ವಿಚಾರ ತೆರೆದಿಟ್ಟ ಸ್ಥಳೀಯರು 

ಬೆಂಗಳೂರಿನಲ್ಲಿ ನೆರವೇರಿದ ಬಾಲನಟಿ ಸಮನ್ವಿ ಅಂತ್ಯಕ್ರಿಯೆ; ಮುಗಿಲುಮುಟ್ಟಿದ ಆಕ್ರಂದನ

Click on your DTH Provider to Add TV9 Kannada