ಬಾಲಕಿ ಸಮನ್ವಿಗೆ ಆ್ಯಕ್ಸಿಡೆಂಟ್ ಆಗಲು ಕಾರಣ ಏನು? ಅಸಲಿ ವಿಚಾರ ತೆರೆದಿಟ್ಟ ಸ್ಥಳೀಯರು

Samanvi Death: ರಸ್ತೆ ಅಪಘಾತದಲ್ಲಿ ಬಾಲನಟಿ ಸಮನ್ವಿ ಮೃತಪಟ್ಟ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಸ್ಥಳೀಯರಾದ ಮಹದೇವ್​ ಎಂಬುವವರು ಆ್ಯಕ್ಸಿಡೆಂಟ್​ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಕಿ ಸಮನ್ವಿಗೆ ಆ್ಯಕ್ಸಿಡೆಂಟ್ ಆಗಲು ಕಾರಣ ಏನು? ಅಸಲಿ ವಿಚಾರ ತೆರೆದಿಟ್ಟ ಸ್ಥಳೀಯರು
ಸ್ಥಳೀಯರಾದ ಮಹದೇವ್,​ ಸಮನ್ವಿ, ಅಮೃತಾ ನಾಯ್ಡು
Follow us
TV9 Web
| Updated By: ಮದನ್​ ಕುಮಾರ್​

Updated on:Jan 14, 2022 | 10:02 AM

ಬಾಲನಟಿ ಸಮನ್ವಿ (Samanvi) ನಿಧನದಿಂದಾಗಿ ಕನ್ನಡ ಕಿರುತೆರೆ ಲೋಕದಲ್ಲಿ ಸೂತಕದ ವಾತಾವರಣ ನಿರ್ಮಾಣ ಆಗಿದೆ. ‘ನನ್ನಮ್ಮ ಸೂಪರ್​ಸ್ಟಾರ್​’ (Nannamma Superstar) ರಿಯಾಲಿಟಿ ಶೋ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದ ಸಮನ್ವಿಗೆ ಗುರುವಾರ (ಜ.13) ಅಪಘಾತ (Samanvi Accident) ಸಂಭವಿಸಿತು. ತಾಯಿ ಅಮೃತಾ ನಾಯ್ಡು (Amrutha Naidu) ಜೊತೆ ಸ್ಕೂಟರ್​ನಲ್ಲಿ ತೆರಳುವಾಗ ಹಿಂದಿನಿಂದ ಬಂದ ಟಿಪ್ಪರ್​ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸಮನ್ವಿ ಸ್ಥಳದಲ್ಲೇ ಮೃತಪಟ್ಟಳು. ಗಾಯಗೊಂಡಿರುವ ಅಮೃತಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ನಡೆದ ಈ ದುರಂತಕ್ಕೆ ಕಾರಣ ಏನು ಎಂಬುದರ ಬಗ್ಗೆ ಸ್ಥಳೀಯರು ಮಾತನಾಡಿದ್ದಾರೆ. ಇಂಥ ಅಪಘಾತ ಸಂಭವಿಸಲು ಅನೇಕ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯರಾದ ಮಹದೇವ್​ ಎಂಬುವವರು ಘಟನೆ ಕುರಿತು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ರಸ್ತೆಯ ಹಿಂದೆ ಸಿಗ್ನಲ್​ ಇದೆ. ಆದರೂ ಕೂಡ ವಾಹನ ಸವಾರರು ವೇಗವಾಗಿ ಬರುತ್ತಾರೆ. ಇನ್ನೊಂದು ರಸ್ತೆ ಅಡ್ಡ ಇರುವುದರಿಂದ ಸುತ್ತಿಕೊಂಡು ಬರಬೇಕು. ಹಾಗಾಗಿ ಈ ರಸ್ತೆಯಲ್ಲಿ ಸ್ಥಳೀಯರು ಅಡ್ಡ ಹೋಗುತ್ತಾರೆ. ಆಗ ಎದುರಿನಿಂದ ವಾಹನಗಳು ಬರುವುದರಿಂದ ಆ್ಯಕ್ಸಿಟೆಂಡ್​ ಆಗುವ ಸಂಭವ ಜಾಸ್ತಿ ಇರುತ್ತದೆ’ ಎಂದು ಅವರು ಹೇಳಿದ್ದಾರೆ.

‘ಫುಟ್​ಪಾತ್​ನಲ್ಲಿ ಅನೇಕ ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಇದನ್ನು ಪೊಲೀಸರು ಹಲವು ಬಾರಿ ಗಮನಿಸಿದ್ದರೂ ಕೂಡ ಇಂದಿಗೂ ವ್ಯಾಪಾರ ನಡೆಯುತ್ತಲೇ ಇದೆ. ಪೊಲೀಸರೇ ಇದನ್ನು ನಿಯಂತ್ರಿಸಬೇಕು. ಗಾಡಿಗಳು ಇರುವುದರಿಂದ ವಾಹನಗಳ ಓಡಾಟಕ್ಕೆ ಜಾಗ ಕಿರಿದಾಗುತ್ತದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಂಬನಿ ಮಿಡಿದ ಸೃಜನ್​ ಲೋಕೇಶ್​:

ಸಮನ್ವಿ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸೃಜನ್​ ಲೋಕೇಶ್​ ಅವರು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ‘ದೇವರು ನಿಜವಾಗಿಯೂ ದೇವರಾ? ಅಥವಾ ದೇವರು ಇದ್ದಾನಾ? ಇಲ್ಲ, ದೇವರನ್ನ ನಂಬಲೇಬೇಕಾ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿವೆ. ಇವತ್ತು ಈ ಘಟನೆಯ ನಂತರ ನಿಜವಾಗಲೂ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸೃಜನ್​ ಲೋಕೇಶ್​ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:

ಸಮನ್ವಿ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ;​ ಯಮಸ್ವರೂಪಿಯಾಗಿ ಬಂತು ಟಿಪ್ಪರ್​ ಲಾರಿ

ಸಮನ್ವಿಗೆ ಆ್ಯಕ್ಸಿಡೆಂಟ್​ ಆದ ಸ್ಥಳದಲ್ಲಿ ಏನು ನಡೆಯಿತು? ಪ್ರತ್ಯಕ್ಷದರ್ಶಿಗಳು ತೆರೆದಿಟ್ಟ ಅಸಲಿ ಸತ್ಯ ಇಲ್ಲಿದೆ

Published On - 9:58 am, Fri, 14 January 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್