AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮನ್ವಿಗೆ ಆ್ಯಕ್ಸಿಡೆಂಟ್​ ಆದ ಸ್ಥಳದಲ್ಲಿ ಏನು ನಡೆಯಿತು? ಪ್ರತ್ಯಕ್ಷದರ್ಶಿಗಳು ತೆರೆದಿಟ್ಟ ಅಸಲಿ ಸತ್ಯ ಇಲ್ಲಿದೆ

ಸಮನ್ವಿಗೆ ಆ್ಯಕ್ಸಿಡೆಂಟ್​ ಆದ ಸ್ಥಳದಲ್ಲಿ ಏನು ನಡೆಯಿತು? ಪ್ರತ್ಯಕ್ಷದರ್ಶಿಗಳು ತೆರೆದಿಟ್ಟ ಅಸಲಿ ಸತ್ಯ ಇಲ್ಲಿದೆ

TV9 Web
| Edited By: |

Updated on: Jan 14, 2022 | 9:09 AM

Share

Samanvi Accident: ಬೆಂಗಳೂರಿನ ಕೋಣನಕುಂಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಸಮನ್ವಿ ನಿಧನಳಾಗಿದ್ದಾಳೆ. ಆ ಸ್ಥಳದಲ್ಲಿ ಇದ್ದ ವ್ಯಕ್ತಿಗಳು ಘಟನೆ ಬಗ್ಗೆ ವಿವರಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಬಾಲನಟಿ ಸಮನ್ವಿ ಮೃತಳಾಗಿದ್ದು (Samanvi Death) ತೀವ್ರ ನೋವಿನ ಸಂಗತಿ. ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Superstar) ರಿಲಿಯಾಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ಈ ಬಾಲಕಿ ಮತ್ತು ಆಕೆಯ ತಾಯಿ ಅಮೃತಾ ನಾಯ್ಡು (Amrutha Naidu) ಅವರು ಗುರುವಾರ (ಜ.13) ಸ್ಕೂಟರ್​ನಲ್ಲಿ ತೆರಳುವಾಗ ಬೆಂಗಳೂರಿನ ಕೋಣನಕುಂಟೆ ಬಳಿ ಈ ದುರ್ಘಟನೆ ಸಂಭವಿಸಿತು. ಆ ಸ್ಥಳದಲ್ಲಿ ಇದ್ದ ವ್ಯಕ್ತಿಗಳು ಘಟನೆ ಬಗ್ಗೆ ವಿವರಿಸಿದ್ದಾರೆ. ‘ನಾವು ಡಿ ಮಾರ್ಟ್​ ಬಳಿ ನಿಂತಿದ್ದೆವು. ಆಗ ಮೆಟ್ರೋ ಸ್ಟೇಷನ್​ ಬಳಿಕ ಒಂದು ಲಾರಿ ಮತ್ತು ಟಾಟಾ ಸುಮೋ ಕಾರಿನವರು ನಿಂತು ಮಾತನಾಡುತ್ತಿದ್ದರು. ಜನರೆಲ್ಲ ಸೇರಿ ಅದರ ವ್ಹೀಲ್​ ಚೆಕ್​ ಮಾಡುತ್ತಿದ್ದರು. ಪೊಲೀಸ್​ನವರು ಇನ್ನೂ ಬಂದಿರಲಿಲ್ಲ. ತಾಯಿ-ಮಗಳು ಸ್ಕೂಟರ್​ನಲ್ಲಿ ಬರುವಾಗ ಲಾರಿಗೆ ಸ್ವಲ್ಪ ಟಚ್​ ಆಯಿತಂತೆ. ಆ ಬಗ್ಗೆ ಪಕ್ಕಾ ಮಾಹಿತಿ ನಮಗೆ ಗೊತ್ತಿಲ್ಲ. ಮಹಿಳೆ ಎಡಗಡೆಗೆ ಬಿದ್ದರು. ಮಗು ಲಾರಿ ಮುಂದೆ ಬಿತ್ತು ಅಂತ ಜನ ಹೇಳ್ತಾರೆ. ಆಗ ಆಕೆಗೆ (Samanvi) ಪ್ರಜ್ಞೆ ತಪ್ಪಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸಮನ್ವಿ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.

ಇದನ್ನೂ ಓದಿ:

‘ದೇವರು ಇದ್ದಾನೋ ಇಲ್ಲವೋ?’: ಸಮನ್ವಿ ನಿಧನದ ಬಳಿಕ ಸೃಜನ್​ ಲೋಕೇಶ್​ ನೋವಿನ ನುಡಿ

Samanvi: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ಸ್ಥಳದಲ್ಲೇ ನಿಧನ