ಸ್ನಿಗ್ಧ ಸೌಂದರ್ಯದ ಅಪ್ಪಟ ಕನ್ನಡ ಹುಡುಗಿ ಅದಿತಿ ಪ್ರಭುದೇವ ಬಿಡುವಿಲ್ಲದಷ್ಟು ಬ್ಯೂಸಿಯಾಗಿದ್ದಾರೆ, ಕೈಯಲ್ಲಿ 5-6 ಸಿನಿಮಾಗಳು!!

ಸುದೀಪನಾ ಬಣಕಾರ ಪ್ರಭುದೇವ ಅದಿತಿ ಪ್ರಭುದೇವ ಹೇಗಾದರು ಅಂತ ನಿಮಗೆ ಗೊತ್ತಿದೆಯೇ? ಸಿನಿಮಾಗಳ ಸೆಟ್ನಲ್ಲಿ ಜನರಿಗೆ ಸುದೀಪನಾ ಅಮ ಕರೆಯುವುದು ಕಷ್ಟವಾಗುತಿತ್ತಂತೆ. ಅಲ್ಲದೆ ಜನ ಕರೆಯುವಾಗ ಸುದೀಪ್ ಅಣ್ಣಾ ಸುದೀಪ್ ಅಣ್ಣಾ ಅಂತ ಕೇಳಿಸುತಿತ್ತಂತೆ. ಹಾಗಾಗೇ ಅವರ ತಂದೆ ಅದಿತಿ ಅಂತ ಇನ್ನೊಂದು ಹೆಸರು ನೀಡಿದರು.

ಅಪ್ಪಟ ಕನ್ನಡದ ಹುಡುಗಿ ಅದಿತಿ ಪ್ರಭುದೇವ ಸ್ಯಾಂಡಲ್ವುಡ್ ನಲ್ಲಿ ಜನಪ್ರಿಯ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ. ಸರಳ ಸೌಂದರ್ಯ, ಮಾದಕ ಮೈಮಾಟ ಮತ್ತು ಎತ್ತರದ ನಿಲುವಿನಿಂದ ಅದಿತಿ ಮೊದಲ ನೋಟದಲ್ಲೇ ಗಮನ ಸೆಳೆದು ಬಿಡುತ್ತಾರೆ. ದಾವಣಗೆರೆಯಲ್ಲಿ ಹುಟ್ಟಿ ಅಲ್ಲಿನ ಬಿಐಈಟಿ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಗಿಟ್ಟಿಸಿದ ಬೆಡಗಿ ಅದಿತಿ ಗುರುವಾರದಂದು ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕಿರುತೆರೆಯಲ್ಲಿ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದ ಬಳಿಕ 2017 ರಲ್ಲಿ ಅವರು ಧೈರ್ಯಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಅಲ್ಲಿಂದೀಚಿಗೆ ಸಮಾರು 25 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ ಮತ್ತು ಅವರ ಕೈಯಲ್ಲಿ ಈಗ 5-6 ಚಿತ್ರಗಳಿವೆ.

ಅದಿತಿ ಅವರ ಅಸಲಿ ಹೆಸರು ಸುದೀಪನಾ ಬಣಕಾರ್ ಪ್ರಭುದೇವ. ಪ್ರಭುದೇವ ಅವರ ತಂದೆಯ ಹೆಸರು. ಅನೇಕರಿಗೆ ಅದಿತಿ ಖ್ಯಾತ ನಟ-ಕೊರಿಯೊಗ್ರಾಫರ್-ನಿರ್ದೇಶಕ ಪ್ರಭು ದೇವ ಅವರ ಮಗಳೇ ಎಂಬ ಗೊಂದಲವಿದೆ. ಅಲ್ಲ, ಭಾರತದ ಮೈಕೆಲ್ ಜಾಕ್ಸನ್ ಎಂದು ಕರೆಸಿಕೊಳ್ಳುವ ಪ್ರಭು ದೇವ ಮೈಸೂರಿನವರಾದರೆ, ಅದಿತಿ ತಂದೆ ಪ್ರಭುದೇವ ದಾವಣಗೆರೆಯವರು. ಹಾಗಾಗಿ ಎರಡೂ ಬೇರೆ ಬೇರೆ ಕುಟುಂಬಗಳು.

ಓಕೆ, ಸುದೀಪನಾ ಬಣಕಾರ ಪ್ರಭುದೇವ ಅದಿತಿ ಪ್ರಭುದೇವ ಹೇಗಾದರು ಅಂತ ನಿಮಗೆ ಗೊತ್ತಿದೆಯೇ? ಸಿನಿಮಾಗಳ ಸೆಟ್ನಲ್ಲಿ ಜನರಿಗೆ ಸುದೀಪನಾ ಅಮ ಕರೆಯುವುದು ಕಷ್ಟವಾಗುತಿತ್ತಂತೆ. ಅಲ್ಲದೆ ಜನ ಕರೆಯುವಾಗ ಸುದೀಪ್ ಅಣ್ಣಾ ಸುದೀಪ್ ಅಣ್ಣಾ ಅಂತ ಕೇಳಿಸುತಿತ್ತಂತೆ. ಹಾಗಾಗೇ ಅವರ ತಂದೆ ಅದಿತಿ ಅಂತ ಇನ್ನೊಂದು ಹೆಸರು ನೀಡಿದರು.
ಸಾಮಾನ್ಯವಾಗಿ ಸಿನಿಮಾ ತಾರೆಯರು ಒಳ್ಳೆ ಶಕುನ ಅಂತ ಹೆಸರು ಬದಲಾಯಿಸಿಕೊಳ್ಳುತ್ತಾರೆ. ಆದರೆ ಅದಿತಿಗೆ ಮೂಢನಂಬಿಕೆಗಳ ಮೇಲೆ ವಿಶ್ವಾಸವಿಲ್ಲವಂತೆ.

ಅದಿತಿಗೆ ಹುಟ್ಟುಹಬ್ಬದ ಶುಭಾಷಯಗಳು, ಅವರಿಗೆ ಎಲ್ಲವೂ ಒಳ್ಳೆಯದಾಗಲಿ.

ಇದನ್ನೂ ಓದಿ:   ಅದಿತಿ ಪ್ರಭುದೇವಗೆ ಹುಟ್ಟುಹಬ್ಬದ ಸಂಭ್ರಮ; ಸ್ಯಾಂಡಲ್​ವುಡ್​ ಸುಂದರಿಯ ಕ್ಯೂಟ್​ ಫೋಟೋ ಆಲ್ಬಂ

Published On - 11:34 pm, Thu, 13 January 22

Click on your DTH Provider to Add TV9 Kannada