ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತೇವೆ ಅಂತ ಕಾಂಗ್ರೆಸ್ ಹೇಳಿದ್ದು ಹಾಸ್ಯಾಸ್ಪದವಾಗಿತ್ತು!

ಕಾಂಗ್ರೆಸ್ ನಾಯಕರು ತಮ್ಮ ಘೋಷಣೆಯಲ್ಲಿ ಜನರ ಅರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತ ಹೇಳಿದ್ದು ಹಾಸ್ಯಾಸ್ಪದವಾಗಿತ್ತು. ಮೂರನೇ ಅಲೆಯಲ್ಲಿ ಒಂದೇ ಸಮನೆ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಹಿಂದೆ ಜವಾಬ್ದಾರಿಯುತ ಸ್ಥಾನಗಳಲ್ಲಿ ಮೆರೆದ ನಾಯಕರಿಗೆ ಗೊತ್ತಿರಲಿಲ್ಲವೇ? ರಾಮನಗರ ತಲುಪಿದ ನಂತರ ಅವರಿಗೆ ಜ್ಞಾನೋದಯವಾಯಿತೆ? ಎಂಥ ಬಾಲಿಷ ಹೇಳಿಕೆ ಅಲ್ವೇ?

ಹಾಗೆ ನೋಡಿದರೆ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಪಾದಯಾತ್ರೆಯ 5ನೇ ದಿನ ರಾಮನಗರದಿಂದ ಆರಂಭಗೊಳ್ಳಬೇಕಿತ್ತು. ರಾಮನಗರದಲ್ಲಿ ಗುರುವಾರ ಬೆಳಗ್ಗೆ ಡ್ರೋಣ್ ಕೆಮೆರಾನಿಂದ ಶೂಟ್ ಮಾಡಿದ ದೃಶ್ಯಗಳನ್ನು ಇಲ್ಲಿ ತೋರಿಸುತ್ತಿದ್ದೇವೆ. ಎಲ್ಲ ಸಿದ್ಧತೆಗಳು ನಡೆದಿದ್ದವು. ಜನ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇಯ ಎದುರು ಜನ ಸೇರಲಾರಂಭಿಸಿದ್ದರು. ಆದರೆ, ಒಳಗಡೆ ಪಕ್ಷದ ನಾಯಕರು ಸಭೆ ನಡೆಸುತ್ತಿದ್ದಾರೆ. ಸಭೆ ನಡೆಸುವ ಉದ್ದೇಶ ಒಂದೇ ಆಗಿತ್ತು.  ಪಾದಯಾತ್ರೆಯಂತೂ ನಿಲ್ಲಿಸಬೇಕು ಅದರೆ ಜನರಿಗೆ ಹೇಗೆ ಮುಖ ತೋರಿಸುವುದು? ಯಾಕೆಂದರೆ, ಪ್ರಳಯ ಎದುರಾದರೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ನಾಯಕರು ಕೊಚ್ಚಿಕೊಂಡಿದ್ದರಲ್ಲ… ಅದನ್ನು ಸಮರ್ಥಿಸಿಕೊಳ್ಳಬೇಕಿತ್ತು, ಮುಖ ಉಳಿಸಿಕೊಳ್ಳಬೇಕಿತ್ತು!

ಹೈಕೋರ್ಟ್ ಚಾಟಿ ಬೀಸಿದ ನಂತರ ಪಾದಯಾತ್ರೆಯನ್ನು ಸ್ಥಗಿತಗೊಳಿಸದೆ ಬೇರೆ ದಾರಿಯಿಲ್ಲ ಅನ್ನುವುದು ಕಾಂಗ್ರೆಸ್ಗೆ ಬುಧವಾರವೇ ಖಚಿತವಾಗಿತ್ತು. ಆಗಿರುವ ಮುಖಭಂಗವನ್ನು ಹೇಗೆ ಮರೆಮಾಚುವುದು ಅಂತ ಸಭೆಯಲ್ಲಿ ತೀರ್ಮಾನಿಸಿದ ನಂತರ ಕಾಂಗ್ರೆಸ್ ನಾಯಕರು ರಾಮನಗರದಲ್ಲಿ ಒಂದು ಸುದ್ದಿಗೋಷ್ಟಿ ನಡೆಸಿ ಪಾದಯಾತ್ರೆಯನ್ನು ಜನರ ಅರೋಗ್ಯದ ಹಿತದೃಷ್ಟಿಯಿಂದ ಮತ್ತು ಉಚ್ಚ ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಮೂರನೇ ಅಲೆ ಶಾಂತಗೊಂಡ ನಂತರ ಪಾದಯಾತ್ರೆಯನ್ನು ಪುನಃ ರಾಮನಗರದಿಂದಲೇ ಆರಂಭಿಸಲಾಗುವುದು ಅಂತ ಘೋಷಿಸಿದರು.

ಕಾಂಗ್ರೆಸ್ ನಾಯಕರು ತಮ್ಮ ಘೋಷಣೆಯಲ್ಲಿ ಜನರ ಅರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತ ಹೇಳಿದ್ದು ಹಾಸ್ಯಾಸ್ಪದವಾಗಿತ್ತು. ಮೂರನೇ ಅಲೆಯಲ್ಲಿ ಒಂದೇ ಸಮನೆ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಹಿಂದೆ ಜವಾಬ್ದಾರಿಯುತ ಸ್ಥಾನಗಳಲ್ಲಿ ಮೆರೆದ ನಾಯಕರಿಗೆ ಗೊತ್ತಿರಲಿಲ್ಲವೇ? ರಾಮನಗರ ತಲುಪಿದ ನಂತರ ಅವರಿಗೆ ಜ್ಞಾನೋದಯವಾಯಿತೆ? ಎಂಥ ಬಾಲಿಷ ಹೇಳಿಕೆ ಅಲ್ವೇ?

ಹಾಗೆ ಹೇಳುವ ಬದಲು, ಕೋರ್ಟ್ ಮುಖಕ್ಕೆ ಉಗಿದ ನಂತರ ನಮ್ಮಲ್ಲಿ ಅರಿವು ಮೂಡಿತು, ಜನರ ಆರೋಗ್ಯ ಮತ್ತು ಹಿತಾಸಕ್ತಿಯನ್ನು ಕಡೆಗಣಿಸಿ ಪ್ರಮಾದವೆಸಗಿದ್ದೇವೆ, ಮೂರನೇ ಅಲೆ ಕೊನೆಗೊಂಡ ನಂತರ ಪಾದಯಾತ್ರೆ ಮುಂದುವರಿಸುತ್ತೇವೆ, ದಯವಿಟ್ಟು ನಮ್ಮನ್ನು ಕ್ಷಮಿಸಿ ಅಂತ ಹೇಳಿದ್ದರೆ, ಜನರ ದೃಷ್ಟಿಯಲ್ಲಿ ಅವರಿಗೆ ಗೌರವ ಹೆಚ್ಚುತಿತ್ತು.

ಇದನ್ನೂ ಓದಿ:   ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

Published On - 9:33 pm, Thu, 13 January 22

Click on your DTH Provider to Add TV9 Kannada