- Kannada News Photo gallery Samanvi Nannamma Superstar Fame And Amruta naidu Daughter Died In accident
Samanvi: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ಸ್ಥಳದಲ್ಲೇ ನಿಧನ
ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Updated on: Jan 13, 2022 | 9:51 PM

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿಶೋ ಆರಂಭಗೊಂಡಿದೆ. ಈ ಕಾರ್ಯಕ್ರಮಕ್ಕೆ 6 ವರ್ಷದ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು.

ಇಂದು (ಜನವರಿ 13) ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಮನ್ವಿ ಮೃತಪಟ್ಟಿದ್ದಾಳೆ. ಇದು ಅವಳ ಅಭಿಮಾನಿಗಳಿಗೆ ದುಃಖ ತಂದಿದೆ.

ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಸಮನ್ವಿ. ತಾಯಿ ಅಮೃತಾ ಜತೆ ಅವರು ಈ ರಿಯಾಲಿಟಿಶೋಗೆ ಬಂದಿದ್ದರು. ಇಂದು ಬೆಂಗಳೂರಿನ (Bengaluru) ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟರ್ ಮೇಲೆ ಸಮನ್ವಿ ಹಾಗೂ ಅಮೃತಾ ತೆರಳುತ್ತಿದ್ದರು.

ಈ ವೇಳೆ ಸ್ಕೂಟರ್ಗೆ ಹಿಂದಿನಿಂದ ಲಾರಿ ಬಂದು ಹೊಡೆದಿದೆ. ಸ್ಥಳದಲ್ಲೇ ಸಮನ್ವಿ ಮೃತಪಟ್ಟಿದ್ದಾಳೆ. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಶೋಗೆ ಬರುವುದಕ್ಕೂ ಮೊದಲು ಮಾತನಾಡಿದ್ದ ಸಮನ್ವಿ, ‘ನನಗೆ ಅಮ್ಮ ಎಂದರೆ ತುಂಬಾನೇ ಅಚ್ಚುಮೆಚ್ಚು. ನಾನು ಅವಳನ್ನು ಜಾಸ್ತಿ ಪ್ರೀತಿ ಮಾಡುತ್ತೇನೆ. ಪಾರ್ಟಿಗೆ ಹೋಗ್ತಾರೆ. ಅಪ್ಪನ ಜತೆ ಹಣ ಶೇರ್ ಮಾಡ್ತಾರೆ. ಈ ಕಾರಣಕ್ಕೆ ನನಗೆ ಅವಳು ಹೆಚ್ಚು ಇಷ್ಟ’ ಎಂದು ಹೇಳಿಕೊಂಡಿದ್ದಳು.



















