‘ಕಲ್ಲಾದರೆ ನಾನು..’ ಹಾಡನ್ನು ಕೇಳಿ ವಿಷ್ಣುವರ್ಧನ್ ಹೇಳಿದ್ದೇನು? ಎಸ್.ನಾರಾಯಣ್ ಹಂಚಿಕೊಂಡ್ರು ಕುತೂಹಲಕರ ವಿಚಾರ
Old Monk | Srini: ನಟ ಕಮ್ ನಿರ್ದೇಶಕ ಶ್ರೀನಿ ಹಾಗು ಅದಿತಿ ಅಭಿನಯದ ‘ಓಲ್ಡ್ ಮಾಂಕ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ವಾರ ಸಿನಿಮಾ ತೆರೆಗೆ ಬರುತ್ತಿದ್ದು, ಚಿತ್ರದಲ್ಲಿ ಅಪ್ಪ ಮಗನಾಗಿ ನಟಿಸಿರೋ ಶ್ರೀನಿ ಹಾಗು ಎಸ್.ನಾರಾಯಣ್ ಸಿನಿಮಾ ಬಗ್ಗೆ ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ.
ನಟ ಕಮ್ ನಿರ್ದೇಶಕ ಶ್ರೀನಿ (Srini) ಹಾಗು ಅದಿತಿ ಅಭಿನಯದ ‘ಓಲ್ಡ್ ಮಾಂಕ್’ (Old Monk) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೇ ವಾರ ಸಿನಿಮಾ ತೆರೆಗೆ ಬರುತ್ತಿದ್ದು, ಚಿತ್ರದಲ್ಲಿ ಅಪ್ಪ ಮಗನಾಗಿ ನಟಿಸಿರೋ ಶ್ರೀನಿ ಹಾಗು ಎಸ್.ನಾರಾಯಣ್ (S Narayan) ಸಿನಿಮಾ ಬಗ್ಗೆ ಸಾಕಷ್ಟು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಆಗ ಮಾತನಾಡುತ್ತಾ ಎಸ್.ನಾರಾಯಣ್ ವಿಷ್ಣುವರ್ಧನ್ ಜತೆಗಿನ ಒಡನಾಟವನ್ನು, ಹಾಗೂ ಅವರ ಜತೆ ಚಿತ್ರ ಮಾಡಿದ್ದರ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ನಿರ್ದೇಶಕ, ಬರಹಗಾರನಿಗೆ ಪಾತ್ರಗಳ ಮೇಲಿರುವಷ್ಟೇ ಪ್ರೀತಿ ಕಲಾವಿದರ ಮೇಲೆಯೂ ಇರಬೇಕು. ಆಗ ಉತ್ತಮ ಸಿನಿಮಾ ಮೂಡಿಬರಲು ಸಾಧ್ಯ ಎಂದು ಎಸ್.ನಾರಾಯಣ್ ಹೇಳಿದ್ದಾರೆ.
ಈ ಸಂದರ್ಭ ‘ಕಲ್ಲಾದರೆ ನಾನು’ ಹಾಡಿನ ರೆಕಾರ್ಡಿಂಗ್ ಘಟನೆಯನ್ನು ಎಸ್.ನಾರಾಯಣ್ ನೆನಪು ಮಾಡಿಕೊಂಡಿದ್ದಾರೆ. ಆಕಾಶ್ ಸ್ಟುಡಿಯೋದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡನ್ನು ಹೇಳುತ್ತಿದ್ದರು. ಆಗ ವಿಷ್ಣುವರ್ಧನ್ ನನ್ನ ಕೈಹಿಡಿದು ಕೇಳುತ್ತಾ ಕುಳಿತಿದ್ದರು. ಹಾಡು ಅದ್ಭುತವಾಗಿ ಮೂಡಿಬರುತ್ತಿತ್ತು. ಅದನ್ನು ಕೇಳಿದ ವಿಷ್ಣುವರ್ಧನ್, ‘‘ನಾರಾಯಣ್, ಒಂದು ದಿನ, ಬಾಲು ಅವರಿರಲ್ಲ. ವಿಷ್ಣುವರ್ಧನ್ ಇರಲ್ಲ. ಎಸ್.ನಾರಾಯಣ್ ಇರಲ್ಲ. ಆದರೆ ಈ ಹಾಡು ಮಾತ್ರ ಇರುತ್ತದೆ’’ ಎಂದು ಹೇಳಿದ್ದರಂತೆ. ‘‘ಈಗ ಹಾಡಿದೆ. ನೆನಪುಗಳಿದೆ. ಆದರೆ ಅವರಿಲ್ಲ. ಇಂತಹ ನೆನಪುಗಳು ಸಿಗೋದು ಸಿನಿಮಾದಲ್ಲಿ’’ ಎನ್ನುವುದು ಎಸ್.ನಾರಾಯಣ್ ಮಾತು.
ಇದನ್ನೂ ಓದಿ:
Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?