Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?

ಸಾಮಾಜಿಕ ಜಾಲತಾಣದಲ್ಲಿ ಕೀಳಾಗಿ ಪ್ರತಿಕ್ರಿಯಿಸಿದ ಓರ್ವನಿಗೆ ಸಮಂತಾ ಸಂಯಮದ ಪಾಠ ಮಾಡಿದ್ದಾರೆ. ಅಷ್ಟೇ ಅಲ್ಲ, ವ್ಯಂಗ್ಯವಾಗಿಯೂ ಉತ್ತರಿಸಿದ್ದಾರೆ. ಏನಿದು ಘಟನೆ?

Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?
ಸಮಂತಾ
Follow us
TV9 Web
| Updated By: shivaprasad.hs

Updated on:Feb 22, 2022 | 10:45 AM

ಬಹುಭಾಷಾ ನಟಿ ಸಮಂತಾ (Samantha) ವೃತ್ತಿ ಜೀವನದಲ್ಲಾಗಲಿ ಅಥವಾ ವೈಯಕ್ತಿಕ ಜೀವನದಲ್ಲಾಗಲಿ ಸಾಕಷ್ಟು ಏಳುಬೀಳುಗಳನ್ನು ಕಂಡವರು. ಆದರೆ ಅದರಿಂದ ಹೊರಬಂದು ಮತ್ತೆ ಬದುಕನ್ನು ರೂಪಿಸಿಕೊಂಡು ಮತ್ತಷ್ಟು ಎತ್ತರಕ್ಕೆ ಏರುವ ಛಾತಿ ಅವರಿಗೆ ಸಿದ್ಧಿಸಿದೆ. ಇತ್ತೀಚೆಗೆ ವೈಯಕ್ತಿಕ ಜೀವನದ ಏರುಪೇರನ್ನೂ ಅವರು ಸಮಾನ ಮನಸ್ಥಿತಿಯಿಂದ ಸ್ವೀಕರಿಸಿದ್ದಾರೆ. ಪ್ರವಾಸ, ಹೊಸ ಚಟುವಟಿಕೆಗಳನ್ನು ಕಲಿಯುವುದು ಸೇರಿದಂತೆ ತಮ್ಮನ್ನು ತಾವು ಸಕ್ರಿಯವಾಗಿರಿಸಿಕೊಂಡಿರುವ ಅವರು, ಚಿತ್ರರಂಗದಲ್ಲಿ ಮತ್ತಷ್ಟು ಹೆಸರು ಮಾಡುತ್ತಿದ್ದಾರೆ. ಹೀಗಿದ್ದರೂ ಕೂಡ ನಟಿಗೆ ನಿಂದನೆಗಳು ನಿಂತಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬನ ಕೀಳು ಮೆಸೇಜ್​ಅನ್ನು ಸಮಂತಾ ಹಂಚಿಕೊಂಡಿದ್ದಾರೆ. ಆದರೆ ನಟಿ ಅಷ್ಟಕ್ಕೇ ಸುಮ್ಮನಾಗಿಲ್ಲ. ಆ ವ್ಯಕ್ತಿಗೆ ಖಡಕ್ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಸಮಂತಾ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ‘ಆಸ್ಕ್ ಮಿ ಎನಿಥಿಂಗ್’ (ಏನನ್ನಾದರೂ ಕೇಳಿ) ಸೆಷನ್ ನಡೆಸಿದ್ದರು. ಅದರಲ್ಲಿ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಪ್ರಶ್ನೆಗಳಲ್ಲಿ ತಮಗೆ ಸೂಕ್ತ ಎನಿಸಿದ ಪ್ರಶ್ನೆಗಳಿಗೆ ನಟಿ ಉತ್ತರ ನೀಡಿದ್ದಾರೆ. ಒಬ್ಬ ಅಭಿಮಾನಿ, ‘‘ನಿಮಗೆ ಜೀವನದಲ್ಲಿ ಇಷ್ಟೊಂದು ಧೈರ್ಯ ಹೇಗೆ ಬಂತು?’’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಸಮಂತಾ ‘‘ಕಷ್ಟಕಾಲದಲ್ಲಿ ನಮ್ಮಲ್ಲಿನ ಅತ್ಯುತ್ತಮ ಧೈರ್ಯ ಹೊರಬರುತ್ತದೆ’ ಎಂದು ಹೇಳಿದ್ದಾರೆ.

ಮತ್ತೋರ್ವ ನೆಟ್ಟಿಗ ಕೀಳು ಭಾಷೆಯಲ್ಲಿ ಪ್ರಶ್ನೆ ಕೇಳಿದ್ದಾನೆ. ‘ನೀವು ಸಂತಾನೋತ್ಪತ್ತಿ (ರಿಪ್ರೊಡ್ಯೂಸ್) ಮಾಡಿದ್ದೀರಾ? ಕಾರಣ ನಾನು ನಿಮ್ಮನ್ನು ರಿಪ್ರೊಡ್ಯೂಸ್ ಮಾಡಬೇಕು’ ಎಂದು ಬರೆದಿದ್ದಾನೆ. (Have you reproduced because I wanna reproduce you) ಎಂದು ಬರೆದಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ, ‘ರಿಪ್ರೊಡ್ಯೂಸ್ ಎಂಬ ಪದವನ್ನು ಒಂದು ವಾಕ್ಯದಲ್ಲಿ ಹೇಗೆ ಬಳಸಬೇಕು? ನಾವು ಮೊದಲು ಅದನ್ನು ಗೂಗಲ್ ಮಾಡಬೇಕಾ?’ ಎಂದು ಮರುಪ್ರಶ್ನಿಸಿದ್ದಾರೆ. ಈ ಮೂಲಕ ಆತನಿಗೆ ಸಂಯಮದ ಪಾಠ ಮಾಡುವುದರೊಂದಿಗೆ ವ್ಯಂಗ್ಯವಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ.

Samantha AMA

ಸಮಂತಾ ಉತ್ತರಿಸಿದ ಪೋಸ್ಟ್

ಮತ್ತೋರ್ವ ನೆಟ್ಟಿಗರು ಯುವ ಜನಾಂಗಕ್ಕೆ ಸಲಹೆಯನ್ನು ಕೇಳಿದ್ದಾರೆ. ಅದಕ್ಕೂ ಸಮಂತಾ ಉತ್ತರಿಸಿ ‘ಬಿಡುವು ತೆಗೆದುಕೊಂಡು ಕೆಲಸ ಮಾಡಿ ಎಂದಿದ್ದಾರೆ. ಮತ್ತೋರ್ವ ಅಭಿಮಾನಿ ನೀವು ನಿರ್ದೇಶನ ಮಾಡುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಸಮಂತಾ, ‘ಇಲ್ಲ ಎಂದು ಹೇಳಲಾರೆ’ ಎಂದು ಬರೆದಿದ್ದಾರೆ. ನಿಮ್ಮ ಜೀವನದ ಉದ್ದೇಶವೇನು ಎಂಬ ಪ್ರಶ್ನೆಗೆ, ‘ಎಲ್ಲರೂ ನೆನಪಿಟ್ಟುಕೊಳ್ಳುವಂತಾಗಬೇಕು’ ಎಂದು ಸಮಂತಾ ಉತ್ತರಿಸಿದ್ದಾರೆ.

ಸದ್ದು ಮಾಡುತ್ತಿದೆ ‘ಶಾಕುಂತಲಂ’:

ಚಿತ್ರಗಳ ವಿಷಯಕ್ಕೆ ಬಂದರೆ ಸಮಂತಾ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಚಾಲೆಂಜಿಂಗ್ ಎನ್ನಿಸುವಂತಹ ಪಾತ್ರಗಳನ್ನು ನಟಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಮಂತಾ ನಟಿಸಿರುವ ಬಹುನಿರೀಕ್ಷಿತ ‘ಶಾಕುಂತಲಂ’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಬಹಳ ಭಿನ್ನವಾಗಿ ಕಾಣಿಸಿಕೊಂಡಿರುವ ಸಮಂತಾ, ತಮ್ಮ ಗೆಟಪ್​ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.

ಹೊಸ ಚಿತ್ರದಲ್ಲಿ ಸಮಂತಾ ಲುಕ್ ಹೀಗಿದೆ:

ಖ್ಯಾತ ನಿರ್ದೇಶಕ ಗುಣಶೇಖರ್​ ‘ಶಾಕುಂತಲಂ’ಗೆ ನಿರ್ದೇಶನ ಮಾಡುತ್ತಿದ್ದಾರೆ. ನೀಲಿಮಾ ಗುಣ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾ ಕೂಡ ಬಣ್ಣ ಹಚ್ಚಿದ್ದಾಳೆ ಎಂಬುದು ವಿಶೇಷ.

ಇದನ್ನೂ ಓದಿ:

ವಿವಾಹದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಫರ್ಹಾನ್- ಶಿಬಾನಿ; ಇಲ್ಲಿವೆ ಫೋಟೋಗಳು

ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್​ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು?

Published On - 10:03 am, Tue, 22 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ