AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್​ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು?

Vijay Deverakonda | Rashmika Mandanna: ಕಳೆದ ಕೆಲವು ದಿನಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಮದುವೆಯ ಕುರಿತು ಗಾಸಿಪ್ ಜೋರಾಗಿತ್ತು. ಇದೀಗ ಸ್ವತಃ ವಿಜಯ್ ದೇವರಕೊಂಡ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್​ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು?
ವಿಜಯ್ ದೇವರಕೊಂಡ
TV9 Web
| Edited By: |

Updated on:Feb 22, 2022 | 8:05 AM

Share

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ (Vijay Deverakonda) ದೊಡ್ಡ ಹೆಸರು. ಇದೀಗ ಅವರು ‘ಲೈಗರ್’ (Liger) ಚಿತ್ರದಲ್ಲಿ ನಟಿಸುತ್ತಿದ್ದು, ದೊಡ್ಡ ಮಟ್ಟದಲ್ಲಿ ಚಿತ್ರ ಮೂಡಿಬರುತ್ತಿದೆ. ಈ ಚಿತ್ರದ ಮೂಲಕ ಬಾಲಿವುಡ್​​ಗೂ ವಿಜಯ್ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿದೆ. ಆದರೆ ಕಳೆದ ಕೆಲವು ದಿನಗಳಿಂದ ವಿಜಯ್ ದೇವರಕೊಂಡ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಇದಕ್ಕೆ ಕಾರಣ ಅವರ ಸಹನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ಸ್ನೇಹದ ವಿಚಾರ. ‘ಡಿಯರ್ ಕಾಮ್ರೇಡ್’, ‘ಗೀತ ಗೋವಿಂದಂ’ ಚಿತ್ರಗಳಲ್ಲಿ ಜತೆಯಾಗಿ ಬಣ್ಣಹಚ್ಚಿದ್ದ ಈ ಜೋಡಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದರು. ಅಲ್ಲದೇ ಈರ್ವರೂ ಚಿತ್ರರಂಗದ ಹೊರಗೂ ಹಲವು ಬಾರಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇದು ವದಂತಿ ಹುಟ್ಟಿಕೊಳ್ಳಲು ಕಾರಣವಾಗಿತ್ತು. 2022ರ ಹೊಸ ವರ್ಷದ ಸಂದರ್ಭದಲ್ಲಿ ರಶ್ಮಿಕಾ- ವಿಜಯ್ ತಮ್ಮ ಕುಟುಂಬದೊಂದಿಗೆ ಒಟ್ಟಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದರು ಎಂಬ ಗುಸುಗುಸು ಕೂಡ ಜೋರಾಗಿತ್ತು. ಇದಕ್ಕೆ ಗಾಸಿಪ್ ಪ್ರಿಯರು ಫೋಟೋಗಳನ್ನೂ ಸಾಕ್ಷಿ ನೀಡಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಈ ತೆರೆಯ ಮೇಲಿನ ಜೋಡಿಯ ರಿಯಲ್ ಲೈಫ್ ಮದುವೆಯ ಕುರಿತು ಸುದ್ದಿ ಓಡಾಡಲು ಆರಂಭವಾಗಿತ್ತು.

ಮೊದಮೊದಲು ಕೇಳಿಬರುತ್ತಿರುವ ಗಾಸಿಪ್​ಗಳಿಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ವಿಜಯ್- ರಶ್ಮಿಕಾ ಈರ್ವರೂ ಉತ್ತಮ ಸ್ನೇಹಿತರು ಎಂದಿದ್ದರು. ಆದರೆ ಕೆಲವು ದಿನಗಳಿಂದೀಚೆಗೆ ವದಂತಿ ವಿಚಾರಗಳು ತಾರಕಕ್ಕೆ ಹೋಗಿದ್ದವು. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ 2022ರಲ್ಲಿ ಮದುವೆಯಾಗುತ್ತಾರೆ ಎಂಬ ವಿಚಾರ ಪ್ರಚಾರಕ್ಕೆ ಬಂದಿತ್ತು. ಇದೀಗ ಈ ಎಲ್ಲವುಗಳಿಗೂ ತೆರೆ ಎಳೆಯುವ ನಿಟ್ಟಿನಲ್ಲಿ ವಿಜಯ್ ದೇವರಕೊಂಡ ಮೌನ ಮುರಿದಿದ್ದಾರೆ.

ಸೋಮವಾರದಂದು ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ, ಮದುವೆಯ ಕುರಿತ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ‘ಅಂತಹ ವರದಿಗಳನ್ನು ಅರ್ಥವಿಲ್ಲದ್ದು ಹಾಗೂ ಅಸಂಬದ್ಧ’ ಎಂದು ಕರೆದಿರುವ ವಿಜಯ್ ದೇವರಕೊಂಡ, ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯ್ ದೇವರಕೊಂಡ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬಂದರೆ ಪ್ರಸ್ತುತ ‘ಲೈಗರ್​’ನಲ್ಲಿ ಬ್ಯುಸಿಯಿರುವ ವಿಜಯ್ ದೇವರಕೊಂಡ, ಅದರ ಪಾತ್ರಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್​ ಬೆಡಗಿ ಅನನ್ಯಾ ಪಾಂಡೆ ಈ ಚಿತ್ರಕ್ಕೆ ನಾಯಕಿ.

ರಶ್ಮಿಕಾ ಕೂಡ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪುಷ್ಪ: ದಿ ರೈಸ್’ ಚಿತ್ರದ ಯಶಸ್ಸಿನಲ್ಲಿರುವ ರಶ್ಮಿಕಾ ನಟನೆಯ ಮತ್ತೊಂದು ಚಿತ್ರ ‘ಆಡವಾಳ್ಳು ಮೀಕು ಜೋಹಾರ್ಲು’ ಸದ್ಯದಲ್ಲೇ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೇ ರಶ್ಮಿಕಾ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಕಚೇರಿಯ ಮುಂಭಾಗ ಕಾಣಿಸಿಕೊಂಡಿದ್ದರು. ಈ ಮೂಲಕ ದೊಡ್ಡ ಪ್ರಾಜೆಕ್ಟ್​​ ಒಂದಕ್ಕೆ ರಶ್ಮಿಕಾ ಸಹಿ ಹಾಕಲಿದ್ದಾರೆಯೇ ಎಂಬ ಕುತೂಹಲ ನಿರ್ಮಾಣವಾಗಿತ್ತು. ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಮಿಷನ್ ಮಜ್ನು’ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ, ಆ ಚಿತ್ರದ ಮುಖಾಂತರ ಬಾಲಿವುಡ್ ಪ್ರವೇಶ್ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ಮದುವೆ ಆಗಲು ನಾನಿನ್ನೂ ಚಿಕ್ಕವಳು’: ಪ್ರೀತಿ-ಶಾದಿ ಬಗ್ಗೆ ವಿವರವಾಗಿ ಮಾತಾಡಿದ ರಶ್ಮಿಕಾ ಮಂದಣ್ಣ

‘ವಿಜಯ್​ ದೇವರಕೊಂಡ ನೋಡಿ ಭಯ ಆಗಿತ್ತು’; ಮತ್ತೆ ಮುನ್ನೆಲೆಗೆ ಬಂತು ರಶ್ಮಿಕಾ ಹೇಳಿದ್ದ ಆ ಮಾತು

Published On - 8:02 am, Tue, 22 February 22

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್