AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಜಯ್​ ದೇವರಕೊಂಡ ನೋಡಿ ಭಯ ಆಗಿತ್ತು’; ಮತ್ತೆ ಮುನ್ನೆಲೆಗೆ ಬಂತು ರಶ್ಮಿಕಾ ಹೇಳಿದ್ದ ಆ ಮಾತು

ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಅವರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದುಂಟು. ಗಾಸಿಪ್​ಪ್ರಿಯರು ಈ ಜೋಡಿ ಬಗ್ಗೆ ಆಗಾಗ ಚರ್ಚೆ ಮಾಡುತ್ತಾರೆ.

‘ವಿಜಯ್​ ದೇವರಕೊಂಡ ನೋಡಿ ಭಯ ಆಗಿತ್ತು’; ಮತ್ತೆ ಮುನ್ನೆಲೆಗೆ ಬಂತು ರಶ್ಮಿಕಾ ಹೇಳಿದ್ದ ಆ ಮಾತು
ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ
TV9 Web
| Edited By: |

Updated on: Feb 10, 2022 | 9:01 AM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿ ಬೆಳೆದಿದ್ದಾರೆ. ಅವರ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಯಶಸ್ಸು ಕಾಣುತ್ತಿವೆ. ಆ ಕಾರಣದಿಂದ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ. ಪ್ರತಿ ದಿನ ಅವರ ಬಗ್ಗೆ ಒಂದಿಲ್ಲೊಂದು ಚರ್ಚೆ ನಡೆಯುತ್ತಲೇ ಇರುತ್ತದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ (Vijay Deverakonda) ನಡುವೆ ಉತ್ತಮವಾದ ಬಾಂಧವ್ಯ ಇದೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್​ ಕಾಮ್ರೇಡ್​​’ (Dear Comrade) ಸಿನಿಮಾಗಳಲ್ಲಿ ಇವರಿಬ್ಬರು ಜೋಡಿಯಾಗಿ ನಟಿಸಿದ್ದರು. ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಾರೆ. ಆದರೆ ಈ ಬಗ್ಗೆ ರಶ್ಮಿಕಾ ಅವರಾಗಲಿ, ವಿಜಯ್​ ದೇವರಕೊಂಡ ಅವರಾಗಲಿ ಈವರೆಗೆ ಬಾಯಿ ಬಿಟ್ಟಿಲ್ಲ. ಈಗ ಪರಸ್ಪರ ಇಷ್ಟೊಂದು ಆಪ್ತವಾಗಿರುವ ಈ ಜೋಡಿ ಆರಂಭದಲ್ಲಿ ಹೀಗಿರಲಿಲ್ಲ. ಅಚ್ಚರಿ ವಿಚಾರ ಏನೆಂದರೆ ಮೊದಲು ಪರಿಚಯವಾದಾಗ ವಿಜಯ್​ ದೇವರಕೊಂಡ ಅವರನ್ನು ಕಂಡು ರಶ್ಮಿಕಾ ಮಂದಣ್ಣ ಭಯಪಟ್ಟುಕೊಂಡಿದ್ದರು. ಅದಕ್ಕೆ ಕಾರಣ ಕೂಡ ಇದೆ. ಈ ಹಿಂದೆ ಅವರು ‘ಡಿಯರ್​ ಕಾಮ್ರೇಡ್​’ ಸಿನಿಮಾದ ಪ್ರಚಾರದ ವೇಳೆ ಈ ವಿಚಾರದ ಬಗ್ಗೆ ಮಾತನಾಡಿದ್ದರು.

‘ಹೊಸ ಜನರನ್ನು ಕಂಡರೆ ನನಗೆ ಭಯ. ಹಾಗಾಗಿ ವಿಜಯ್​ ದೇವರಕೊಂಡ ಅವರನ್ನು ಮೊದಲ ಬಾರಿಗೆ ಶೂಟಿಂಗ್​ನಲ್ಲಿ ಭೇಟಿ ಆದಾಗ ಭಯಪಟ್ಟುಕೊಂಡಿದ್ದೆ. ಆದರೆ ನಂತರ ವಿಜಯ್​ ತುಂಬ ಸ್ನೇಹಜೀವಿ ಅನ್ನೋದು ಗೊತ್ತಾಯಿತು. ಅವರ ಜೊತೆ ಕೆಲಸ ಮಾಡೋದು ಸುಲಭ ಆಯಿತು. ಇಬ್ಬರ ನಡುವೆ ಹೊಂದಾಣಿಕೆ ಚೆನ್ನಾಗಿ ಇರುವುದರಿಂದ ಶೂಟಿಂಗ್​ ಮಾಡವುದು ಸುಲಭ. ಅವರನ್ನು ಅರ್ಥ ಮಾಡಿಕೊಳ್ಳಲು ನಾನು ಹೆಚ್ಚು ಕಷ್ಟಪಡಬೇಕಾಗಿಲ್ಲ. ಅದು ನಮ್ಮ ಸ್ನೇಹದ ಉತ್ತಮ ಅಂಶ’ ಎಂದು ರಶ್ಮಿಕಾ ಹೇಳಿದ್ದರು.

ಅಂದು ರಶ್ಮಿಕಾ ಮಾತನಾಡಿದ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹಲವು ಮಾಧ್ಯಮಗಳು ಮತ್ತೊಮ್ಮೆ ಈ ಕುರಿತು ಲೇಖನಗಳನ್ನು ಪ್ರಕಟಿಸಿವೆ. ಸಿನಿಮಾ ವಿಚಾರಕ್ಕೆ ಬಂದರೆ, ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಚಿತ್ರದ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅತ್ತ ವಿಜಯ್​ ದೇವರಕೊಂಡ ಅವರು ‘ಲೈಗರ್​’ ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅದು ಅವರ ಮೊದಲ ಬಾಲಿವುಡ್​ ಸಿನಿಮಾ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಚಿತ್ರದಲ್ಲಿ ರಶ್ಮಿಕಾ ತೆರೆಹಂಚಿಕೊಳ್ಳುತ್ತಿದ್ದಾರೆ. ಹಿಂದಿ ಚಿತ್ರರಂಗದಿಂದ ಅವರಿಗೆ ಅನೇಕ ಹೊಸ ಹೊಸ ಆಫರ್​ಗಳು ಹರಿದುಬರುತ್ತಿವೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್​ ಸಿನಿಮಾಗಳ ಕೆಲಸದ ಸಲುವಾಗಿ ಮುಂಬೈನಲ್ಲೇ ಹೆಚ್ಚು ಸಮಯ ಕಳೆಯಬೇಕಾಗುತ್ತಿದೆ. ಹಾಗಾಗಿ ಅವರು ಅಲ್ಲಿಯೇ ಮನೆ ಕೊಂಡುಕೊಂಡಿದ್ದಾರೆ.

2021ರ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಅವರು ಮುಂಬೈನಲ್ಲಿ ಫ್ಲಾಟ್​ ಖರೀದಿಸಿದ್ದರ ಬಗ್ಗೆ ವರದಿ ಆಗಿತ್ತು. ಆದರೆ ಈಗ ಅವರು ಮತ್ತೆ ಮನೆ ಬದಲಾಯಿಸಿದ್ದಾರೆ. ಮನೆ ಬದಲಿಸುವಾಗ ವಸ್ತುಗಳನ್ನು ಸಾಗಿಸುವುದು ತುಂಬ ಕಷ್ಟದ ಕೆಲಸ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಇನ್​​ಸ್ಟಾಗ್ರಾಮ್​ನಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಅವರು ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ:

ಇಲ್ಲಿ ನೋಡಿ ಇಂಗ್ಲಿಷ್​ ಶ್ರೀವಲ್ಲಿ; ವಿದೇಶಿಗರಲ್ಲೂ ಕ್ರೇಜ್​ ಹುಟ್ಟಿಸಿದ ರಶ್ಮಿಕಾ-ಅಲ್ಲು ಅರ್ಜುನ್​ ಹಾಡು

‘ಜಿಮ್​ನಲ್ಲಿ ಜೀವಿಸುವ ಸೈಕೋ’ ಅಂತ ಕರೆದುಕೊಂಡ ರಶ್ಮಿಕಾ ಮಂದಣ್ಣ; ಹೊಸ ಫೋಟೋ ವೈರಲ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್