AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಅಮಿತಾಭ್​ ಬಚ್ಚನ್​ ಹಲವು ದಶಕಗಳಿಂದ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಅಮಿತಾಭ್​ ತುಂಬಾನೇ ಸಿಂಪಲ್​ ಎಂಬುದು ಹತ್ತಿರದಿಂದ ಅವರನ್ನು ನೋಡಿದವರ ಅಭಿಪ್ರಾಯ.

ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ
ಅಮಿತಾಭ್​-ರಶ್ಮಿಕಾ
TV9 Web
| Edited By: |

Updated on: Feb 03, 2022 | 7:39 PM

Share

ಅಮಿತಾಭ್​ ಬಚ್ಚನ್ (Amitabh Bachchan)​ ಅವರನ್ನು ಭೇಟಿ ಮಾಡಬೇಕು ಎಂಬುದು ಅನೇಕರು ಕನಸಾಗಿರುತ್ತದೆ. ಇನ್ನು ಅವರ ಜತೆ ನಟಿಸೋ ಅವಕಾಶ ಸಿಕ್ಕರೆ? ನಿಜಕ್ಕೂ ಅದು ಅದೃಷ್ಟವೇ ಸರಿ. ಹೀಗೊಂದು ಅವಕಾಶ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ (Rashmika Mandanna) ಸಿಕ್ಕಿದೆ. ‘ಗುಡ್​ಬೈ’ ಚಿತ್ರದಲ್ಲಿ (Goodbye Movie) ರಶ್ಮಿಕಾಗೆ ಅಮಿತಾಭ್​ ಜತೆ ನಟಿಸೋ ಅವಕಾಶ ಸಿಕ್ಕಿದೆ. ಇದು ಅವರಿಗೆ ಸಾಕಷ್ಟು ಖುಷಿ ನೀಡಿದೆ. ರಶ್ಮಿಕಾ ಅವರು ‘ಗುಡ್​ ಬೈ’ ಚಿತ್ರದ ಶೂಟಿಂಗ್​ಅನ್ನು ಎಂಜಾಯ್​ ಮಾಡಿದ್ದಾರೆ. ಅಮಿತಾಭ್​ ಬಚ್ಚನ್​ ಅವರನ್ನು ತುಂಬಾನೇ ಹತ್ತಿರದಿಂದ ಕಂಡು ಖುಷಿಪಟ್ಟಿದ್ದಾರೆ. ಹಾಗಾದರೆ, ಅಮಿತಾಭ್​ ಬಚ್ಚನ್​ ಅವರ ವ್ಯಕ್ತಿತ್ವ ಎಂಥದ್ದು? ಆ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ.

ಅಮಿತಾಭ್​ ಬಚ್ಚನ್​ ಹಲವು ದಶಕಗಳಿಂದ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಅಮಿತಾಭ್​ ತುಂಬಾನೇ ಸಿಂಪಲ್​ ಎಂಬುದು ಹತ್ತಿರದಿಂದ ಅವರನ್ನು ನೋಡಿದವರ ಅಭಿಪ್ರಾಯ. ಅಮಿತಾಭ್​ ಬಚ್ಚನ್​ ಅವರನ್ನು ನೋಡಿದ ರಶ್ಮಿಕಾ ಮಂದಣ್ಣ ಅವರಿಗೂ ಹಾಗೆಯೇ ಅನಿಸಿದೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಮಿತಾಭ್​ ಬಚ್ಚನ್​ ಅವರನ್ನು ರಶ್ಮಿಕಾ ಗೊಂಬೆಗೆ ಹೋಲಿಕೆ ಮಾಡಿದ್ದಾರೆ.

ಇಂಡಿಯಾ ಟುಡೇ ವೆಬ್​ ಸೈಟ್​ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಈ ವಿಚಾರ ಹಂಚಿಕೊಂಡಿದ್ದಾರೆ. ‘ಗುಡ್​​​ಬೈ’ನಲ್ಲಿ ನಟಿಸಿದ ಬಗ್ಗೆ ಅವರಿಗೆ ತುಂಬಾನೇ ಖುಷಿ ಇದೆ. ‘ಗುಡ್​ಬೈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಅವರ ಜತೆ ನಟಿಸಿದ್ದು ನಿಜಕ್ಕೂ ಅದ್ಭುತವಾಗಿತ್ತು. ಸೆಟ್​ನಲ್ಲಿ ಅವರು ತುಂಬಾನೇ ಕಂಫರ್ಟೆಬಲ್​ ಫೀಲ್​ ಕೊಡುತ್ತಾರೆ. ಅವರು ನಿಜಕ್ಕೂ ಗೊಂಬೆಯಂತೆ. ಅವರು ಅದ್ಭುತ ವ್ಯಕ್ತಿ. ಅವರನ್ನು ಬಣ್ಣಿಸೋಕೆ ಪದಗಳು ಸಾಲದು’ ಎಂದು ಹೇಳಿದ್ದಾರೆ ಅಮಿತಾಭ್​ ಬಚ್ಚನ್​.

‘ಮಿಷನ್​ ಮಜ್ನು’ ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಿದ್ದಾರ್ಥ್​ ಮಲ್ಹೋತ್ರಾ ಹೀರೋ. ಇದು ಅವರ ಎರಡನೇ ಹಿಂದಿ ಸಿನಿಮಾ. ಈ ಚಿತ್ರದ ಬಗ್ಗೆಯೂ ಅವರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ಈ ಎರಡೂ ಚಿತ್ರಗಳು ಈ ವರ್ಷ ತೆರೆಗೆ ಬರಲಿದೆ ಎಂಬ ನಂಬಿಕೆ ಇದೆ. ಎರಡೂ ಪ್ರಾಜೆಕ್ಟ್​ಗಳ ಬಗ್ಗೆ ಎಗ್ಸೈಟ್​ ಆಗಿದ್ದೇನೆ’ ಎಂದಿದ್ದಾರೆ ಅವರು.

‘ಗುಡ್​ಬೈ’ ಚಿತ್ರದ ಶೂಟಿಂಗ್ ಕಳೆದ ವರ್ಷ ಪ್ರಾರಂಭವಾಗಿತ್ತು. ಅಮಿತಾಭ್​ ಬಚ್ಚನ್ ಜತೆ ರಶ್ಮಿಕಾ ಸೆಟ್‌ನಲ್ಲಿ ಇರುವ ಫೋಟೋಗಳು ವೈರಲ್ ಆಗಿದ್ದವು. ರಶ್ಮಿಕಾ ಅವರು ಹುಟ್ಟುಹಬ್ಬವನ್ನು ಸೆಟ್‌ನಲ್ಲಿ ಆಚರಿಸಿಕೊಂಡಿದ್ದರು. ‘ಗುಡ್​ಬೈ’ನಲ್ಲಿ ಅಮಿತಾಭ್​ ಬಚ್ಚನ್ ಮತ್ತು ರಶ್ಮಿಕಾ ಜೊತೆಗೆ ನೀನಾ ಗುಪ್ತಾ ಸೇರಿ ಅನೇಕರು ನಟಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ತೊಟ್ಟ ಈ ಸೀರೆಯ ಬೆಲೆಯನ್ನು ಊಹಿಸ್ತೀರಾ? ಅಬ್ಬಾಬ್ಬಾ ಇಷ್ಟೊಂದು ದುಬಾರಿಯಾ?

ಕರಣ್​ ಜೋಹರ್​ ಜತೆ ರಶ್ಮಿಕಾ ಮಂದಣ್ಣ ಸಿನಿಮಾ?

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!