‘ಕೆಜಿಎಫ್ 2’ ಸಿನಿಮಾ ಡಬ್ಬಿಂಗ್ ಪೂರ್ಣಗೊಳಿಸಿದ ಶ್ರೀನಿಧಿ ಶೆಟ್ಟಿ
ಇಡೀ ಚಿತ್ರತಂಡ ಇತ್ತೀಚೆಗೆ ಕೊಲ್ಲೂರಿನ ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆದು ಬಂದಿದೆ. ಅಧೀರನಾಗಿ ಸಂಜಯ್ ದತ್ ಹಾಗೂ ಪ್ರಧಾನ ಮಂತ್ರಿ ರಮಿಕಾ ಸೇನ್ ಆಗಿ ರವೀನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ.
‘ಕೆಜಿಎಫ್ 2’ ಚಿತ್ರ (KGF Chapter 2) ತೆರೆಗೆ ಬರೋಕೆ ರೆಡಿ ಆಗುತ್ತಿದೆ. ಏಪ್ರಿಲ್ 14ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರತಂಡ ವೇಗವಾಗಿ ಕೆಲಸಗಳನ್ನು ಪೂರ್ಣಗೊಳಿಸುತ್ತಿದೆ. ತಿಂಗಳ ಹಿಂದೆ ಸಂಜಯ್ ದತ್ ಅವರು ಡಬ್ಬಿಂಗ್ ಕೆಲಸ ಪೂರ್ಣಗೊಳಿಸಿದ್ದರು. ಈಗ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಕೂಡ ಡಬ್ಬಿಂಗ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಯಶ್ ‘ಕೆಜಿಎಫ್ 2’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇಡೀ ಚಿತ್ರತಂಡ ಇತ್ತೀಚೆಗೆ ಕೊಲ್ಲೂರಿನ ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆದು ಬಂದಿದೆ. ಅಧೀರನಾಗಿ ಸಂಜಯ್ ದತ್ ಹಾಗೂ ಪ್ರಧಾನ ಮಂತ್ರಿ ರಮಿಕಾ ಸೇನ್ ಆಗಿ ರವೀನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರಿಂದ ಸ್ಫೂರ್ತಿ ಪಡೆದಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದು ಇಂದಿರಾ ಗಾಂಧಿಯಿಂದ ಸ್ಫೂರ್ತಿ ಪಡೆದ ಪಾತ್ರವಲ್ಲ ಎನ್ನುವ ಸ್ಪಷ್ಟನೆ ರವೀನಾ ಕಡೆಯಿಂದ ಬಂದಿದೆ.
ಇದನ್ನೂ ಓದಿ: ಕೆಜಿಎಫ್ ಟೀಮ್ನಿಂದ ಭರ್ಜರಿ ಕ್ರಿಕೆಟ್; ನಿರ್ಮಾಪಕರ ಬೌಲಿಂಗ್ಗೆ ಯಶ್ ಬ್ಯಾಟಿಂಗ್- ವೈರಲ್ ಆಯ್ತು ವಿಡಿಯೋ