ಕೋವಿಡ್ ವ್ಯಾಕ್ಸಿನೇಷನ್ ತೆಗೆದುಕೊಂಡ ಬಳಿಕ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ದಿವ್ಯಾ ಸುರೇಶ್ ಚೇತರಿಸಿಕೊಂಡಿದ್ದಾರೆ
ನಿಮಗೆ ನೆನಪಿರಬಹುದು, ಕೆಲ ದಿನಗಳ ಹಿಂದೆ, ಅಂದರೆ ದಿವ್ಯಾ ಸಿನಿಮಾ ನಟಿಯಾಗುವ ಮೊದಲು ರಾತ್ರಿ ಕರ್ಫ್ಯೂ ಸಮಯದಲ್ಲಿ ನಗರದ ಎಮ್ ಜಿ ರೋಡಲ್ಲಿ ಪೋಟೋ ತೆಗೆಯುವ ಪ್ರಯತ್ನ ಮಾಡಿದ್ದ ಮಾಧ್ಯಮದ ಪೋಟೋಗ್ರಾಫರ್ ಒಬ್ಬರೊಂದಿಗೆ ರಂಪಾಟ ಮಾಡಿದ್ದರು.
ಬಿಗ್ ಬಾಸ್ ಕನ್ನಡ (Bigg Boss Kannada) ಕಾರ್ಯಕ್ರಮದಲ್ಲಿ ಒಬ್ಬ ಸ್ಪರ್ಧಿಯಾಗಿದ್ದ ದಿವ್ಯಾ ಸುರೇಶ್ (Divya Suresh) ಕಳೆದ ಕೆಲದಿನಗಳಿಂದ ಸುದ್ದಿಯಲ್ಲಿದ್ದಾರೆ. ಆ ಕಾರ್ಯಕ್ರಮದ ಮೂಲಕವೇ ಅವರು ಕನ್ನಡಿಗರಿಗೆ ಪರಿಚಿತರಾಗಿದ್ದು. ಆಕರ್ಷಕ ಮೈಮಾಟ ಮತ್ತು ನೋಡಲು ಅಂದವಾಗಿರುವ ದಿವ್ಯಾ ಕನ್ನಡ ಚಿತ್ರರಂಗಕ್ಕೆ (Sandalwood) ಎಂಟ್ರಿ ಕೊಡೋದು ನಿಶ್ಚಿತ ಅಂತ ಜನ ಅಂದುಕೊಂಡಿದ್ದು ನಿಜವಾಗಿದೆ. ಅವರು ನಾಯಕಿ ನಟಿಯಾಗಿ ನಟಿಸಿರುವ ‘ರೌಡಿ ಬೇಬಿ’ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು ಅದರ ಟ್ರೇಲರ್ ಬಿಡುಗಡೆಯಾಗಿದೆ. ಅದೇ ಖುಷಿಯಲ್ಲಿದ್ದ ದಿವ್ಯಾ ಸುರೇಶ್ ಬುಧವಾರ, ಟಿವಿ9 ಸಿನಿಮಾ ವರದಿಗಾರ ಮಾಲ್ತೇಶ್ ಜಗ್ಗಿನ್ ಅವರಿಗೆ ಬೆಂಗಳೂರಲ್ಲಿ ಮಾತಿಗೆ ಸಿಕ್ಕರು. ಇತ್ತೀಚಿಗೆ ನಡೆದ ಅಪಘಾತವೊಂದರಲ್ಲಿ ಗಾಯಾಗೊಂಡಿದ್ದ ದಿವ್ಯಾ ಈಗ ಚೇತರಿಸಿಕೊಂಡಿದ್ದಾರೆ. ಕೋವಿಡ್ ಲಸಿಕೆ (Covid vaccination) ಹಾಕಿಸಿಕೊಂಡು ವಾಪಸ್ಸು ಹೋಗುವಾಗ ಬೆಂಗಳೂರಿನ ಕುಖ್ಯಾತ ರಸ್ತೆಗುಂಡಿಗಳ ಜೊತೆ ನೆಗೋಷಿಯೇಟ್ ಮಾಡುವಾಗ ಕೆಳಗೆ ಬಿದ್ದು ಗಾಯಮಾಡಿಕೊಂಡೆ ಅಂತ ಅವರು ಹೇಳಿದರು.
‘ರೌಡಿ ಬೇಬಿ’ ಚಿತ್ರದ ಬಗ್ಗೆ ಮಾತಾಡುತ್ತಾ ಅವರು, ಸಿನಿಮಾಗೆ ಬಹಳ ಕನೆಕ್ಟ್ ಆಗಿದ್ದೇನೆ ಎಂದರು. ಬೆಳೆಯುವ ಮತ್ತು ಕಾಲೇಜು ದಿನಗಳಲ್ಲಿ ಅವರು ತಾನು ಚಿತ್ರದಲ್ಲಿ ನಿರ್ವಹಿಸುತ್ತಿರುವ ಪಾತ್ರದ ಹಾಗೆಯೇ ಇದ್ದರಂತೆ.
ನಿಮಗೆ ನೆನಪಿರಬಹುದು, ಕೆಲ ದಿನಗಳ ಹಿಂದೆ, ಅಂದರೆ ದಿವ್ಯಾ ಸಿನಿಮಾ ನಟಿಯಾಗುವ ಮೊದಲು ರಾತ್ರಿ ಕರ್ಫ್ಯೂ ಸಮಯದಲ್ಲಿ ನಗರದ ಎಮ್ ಜಿ ರೋಡಲ್ಲಿ ಪೋಟೋ ತೆಗೆಯುವ ಪ್ರಯತ್ನ ಮಾಡಿದ್ದ ಮಾಧ್ಯಮದ ಪೋಟೋಗ್ರಾಫರ್ ಒಬ್ಬರೊಂದಿಗೆ ರಂಪಾಟ ಮಾಡಿದ್ದರು.
ಆ ಘಟನೆಗೂ ಅವರು ನಿರ್ವಹಿಸುತ್ತಿರುವ ಪಾತ್ರ ರಿಲೇಟ್ ಆಗುತ್ತದೆ ಎಂದು ಮಾಲ್ತೇಶ್ ಸೂಚ್ಯವಾಗಿ ಹೇಳಿದಾಗ ದಿವ್ಯಾ ನಕ್ಕು ಅದನ್ನು ಮರೆಸುವ ಪ್ರಯತ್ನ ಮಾಡಿದರು!
ನಿಜ ಬದುಕಿನಲ್ಲಿ ಜಾಸ್ತಿ ಎಮೋಷನಲ್ ಟೈಪ್ ಅಗಿರುವುದಾಗಿ ಹೇಳುವ ದಿವ್ಯಾ ಸಿನಿಮಾ ರಂಗಕ್ಕೆ ಬಂದಿರೋದು ಬಹಳ ಖುಷಿ ನೀಡಿದೆ ಎನ್ನುತ್ತಾರೆ. ‘ರೌಡಿ ಬೇಬಿ’ ಸಿನಿಮಾ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ದಿವ್ಯಾ ಸಿನಿಮಾ ರಿಲೀಸ್ ಆದ ಮೇಲೆ ಅವಕಾಶಗಳು ಸಿಕ್ಕೇ ಸಿಗುತ್ತವೆ ಅಂತ ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಇದನ್ನೂ ಓದಿ: Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ