‘ವಿಕ್ರಾಂತ್ ರೋಣ’, ‘ಕೆಜಿಎಫ್ 2’ ಬಗ್ಗೆ ಮಾತನಾಡಿದ ನಟ ಕಾರ್ತಿಕೇಯ
‘ಆರ್ಎಕ್ಸ್ 100’ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಗಳಿಸಿದರು ಕಾರ್ತಿಕೇಯ. ‘ವಲಿಮೈ’ ಸಿನಿಮಾ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬರುತ್ತಿದೆ. ಇದು ಅವರಿಗೆ ಸಂತಸ ತಂದಿದೆ.
ತಮಿಳು ನಟ ಅಜಿತ್ (Ajith Kumar) ನಟನೆಯ ‘ವಲಿಮೈ’ ಸಿನಿಮಾ (Valimai Movie) ಫೆಬ್ರವರಿ 24ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಕಾರ್ತಿಕೇಯ ಕೂಡ ನಟಿಸಿದ್ದಾರೆ. ಇದು ಅವರ ಮೊದಲ ತಮಿಳು ಸಿನಿಮಾ. ಅವರು ‘ಆರ್ಎಕ್ಸ್ 100’ ಸಿನಿಮಾ (RX 100 Movie) ಮೂಲಕ ದೊಡ್ಡ ಮಟ್ಟದ ಯಶಸ್ಸು ಗಳಿಸಿದರು. ‘ವಲಿಮೈ’ ಸಿನಿಮಾ ಕನ್ನಡಕ್ಕೂ ಡಬ್ ಆಗಿ ತೆರೆಗೆ ಬರುತ್ತಿದೆ. ಇದು ಅವರಿಗೆ ಸಂತಸ ತಂದಿದೆ. ವೇದಿಕೆ ಮೇಲೆ ಮಾತನಾಡಿರುವ ಅವರು, ‘ಅಜಿತ್ ಅವರ ಜತೆ ನಟಿಸಿದ್ದು ಖುಷಿ ಇದೆ. ಕನ್ನಡದ ಹಲವು ಸಿನಿಮಾಗಳು ಬೇರೆ ರಾಜ್ಯಗಳಲ್ಲೂ ಸದ್ದು ಮಾಡುತ್ತಿವೆ. ‘ವಿಕ್ರಾಂತ್ ರೋಣ’, ‘ಕೆಜಿಎಫ್ 2’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ’ ಎಂದರು. ಅಷ್ಟೇ ಅಲ್ಲ ಮುಂದಿನ ಬಾರಿ ಕರ್ನಾಟಕಕ್ಕೆ ಬರುವಾಗ ಕನ್ನಡವನ್ನು ಸಂಪೂರ್ಣವಾಗಿ ಕಲಿತು ಬರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: RJ Rachana: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಖ್ಯಾತಿಯ ಆರ್ಜೆ ರಚನಾ
ರಕ್ಷಿತ್ ಸಿನಿಮಾದಲ್ಲಿ ನಟಿಸಿದ್ದ ಆರ್ಜೆ ರಚನಾಗೆ ಹೃದಯಾಘಾತ; ಮನೆಯಲ್ಲಿದ್ದಾಗಲೇ ಕಾಣಿಸಿಕೊಂಡಿತ್ತು ಎದೆನೋವು