ಐದು ದಿನಗಳ ಕಾಲ ವಿಧಾನಸೌಧದಲ್ಲಿ ಮಲಗಿದ್ದ ಸಿದ್ದರಾಮಯ್ಯ ಮಂಗಳವಾರ ಬೆಳಗ್ಗೆ ಮನೆಗೆ ಹೋದರು!

ಐದು ದಿನಗಳ ಕಾಲ ವಿಧಾನಸೌಧದಲ್ಲಿ ಮಲಗಿದ್ದ ಸಿದ್ದರಾಮಯ್ಯ ಮಂಗಳವಾರ ಬೆಳಗ್ಗೆ ಮನೆಗೆ ಹೋದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 22, 2022 | 6:39 PM

ಸಿದ್ದರಾಮಯ್ಯ ಕಾರು ಹತ್ತುವ ರೀತಿ ವಿಶಿಷ್ಟ ಅನಿಸುತ್ತದೆ. ಅವರು ಮೊದಲು ತಮ್ಮೆರಡು ಕಾಲುಗಳನ್ನು ಕಾರಿನೊಳಗೆ ತೂರಿ ನಂತರ ದೇಹವನ್ನು ತೂರಿಸುತ್ತಾರೆ. ಬೇರೆಯವರು ಕಾರು ಹತ್ತಿ ಕುಳಿತುಕೊಳ್ಳುವ ವಿಧಾಧನಕ್ಕಿಂತ ಸಿದ್ದರಾಮಯ್ಯ ಅವರ ಶೈಲಿ ಭಿನ್ನವಾಗಿದೆ.

ವಿಧಾನ ಪರಿಷತ್​​​ ನಲ್ಲಿ ಕಾಂಗ್ರೆಸ್ ಸದಸ್ಯರು 5 ದಿನಗಳಿಂದ ನಡೆಸುತ್ತಿದ್ದ ಧರಣಿ ಮುಕ್ತಾಯಗೊಂಡಿದೆ. ಸೋಮವಾರ ರಾತ್ರಿ ವಿಧಾನ ಸೌಧದಲ್ಲೇ (Vidhana Soudha) ಮಲಗಿದ್ದ ಪಕ್ಷದ ನಾಯಕರು ಮಂಗಳವಾರ ಬೆಳಗ್ಗೆ ಎದ್ದು ಒಬ್ಬೊಬ್ಬರಾಗಿ ಮನೆಗೆ ಹೋಗುತ್ತಿದ್ದಿದ್ದು ಮಾಧ್ಯಮ ಕೆಮೆರಾಗಳ ಕಣ್ಣಿಗೆ ಬಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಬೆಳಗ್ಗೆ ತಮ್ಮ ಮನೆಗೆ ಹೋಗುತ್ತಿರುವ ವಿಡಿಯೋವನ್ನು ನಿಮಗಿಲ್ಲಿ ತೋರಿಸುತ್ತಿದ್ದೇವೆ. ಬೆಳಗ್ಗೆ ಎದ್ದಾಕ್ಷಣ ಅವರು ವಿಧಾನ ಸೌಧದ ಮುಂಭಾಗದ ದ್ವಾರದ (front gate) ಬಳಿ ಬರುತ್ತಾರೆ. ಪ್ರಾಯಶಃ ಅವರು ಬರೋದನ್ನೇ ಕಾಯುತ್ತಿದ್ದ ಆಪ್ತ ಸಹಾಯಕ ಫೋನ್ ಹಿಡಿದುಕೊಂಡು ಓಡೋಡಿ ಬರುತ್ತಾರೆ. ಸಿದ್ದರಾಮಯ್ಯ ಅಲ್ಲೇ ನಿಂತುಕೊಂಡು ಫೋನಲ್ಲಿ ಮಾತಾಡುತ್ತಾರೆ. ಅವರು ಮಾತಾಡುತ್ತಿರುವಂತೆಯೇ ಅವರ ಕಾರು ಬಂದು ನಿಲ್ಲುತ್ತದೆ. ಹಿರಿಯ ಕಾಂಗ್ರೆಸ್ ನಾಯಕ ಮಾತಾಡುತ್ತ ಕಾರಿನ ಬಳಿ ಬರುತ್ತಾರಾದರೂ ಕಾರು ಹತ್ತುವ ಮೊದಲು ಮಾತು ಮುಗಿಸುತ್ತಾರೆ.

ಸಿದ್ದರಾಮಯ್ಯ ಕಾರು ಹತ್ತುವ ರೀತಿ ವಿಶಿಷ್ಟ ಅನಿಸುತ್ತದೆ. ಅವರು ಮೊದಲು ತಮ್ಮೆರಡು ಕಾಲುಗಳನ್ನು ಕಾರಿನೊಳಗೆ ತೂರಿ ನಂತರ ದೇಹವನ್ನು ತೂರಿಸುತ್ತಾರೆ. ಬೇರೆಯವರು ಕಾರು ಹತ್ತಿ ಕುಳಿತುಕೊಳ್ಳುವ ವಿಧಾಧನಕ್ಕಿಂತ ಸಿದ್ದರಾಮಯ್ಯ ಅವರ ಶೈಲಿ ಭಿನ್ನವಾಗಿದೆ ಮಾರಾಯ್ರೇ. ಅವರು ಮಾಡೋದೆಲ್ಲ ಭಿನ್ನ ಅಂತ ಪಕ್ಷದ ಕಾರ್ಯಕರ್ತರು ಹೇಳುತ್ತಿರುತ್ತಾರೆ!

ಮಾಧ್ಯಮದ ಒಬ್ಬ ಮಿತ್ರರು ಬೆಳಗಿನ ಜಾವದಲ್ಲೇ ಅವರ ಬೈಟ್ ತೆಗೆದುಕೊಳ್ಳಬೇಕೆಂನ ಉದ್ದೇಶದಿಂದ ಸಾರ್ ಸಾರ್ ಅಂತ ಕೂಗುತ್ತಾ ಕಾರಿನ ಬಳಿಗೆ ಓಡುತ್ತಾರೆ. ಆದರೆ ಸಿದ್ದರಾರಮಯ್ಯ ಈಗ ಮಾತಾಡಲಾರೆ ಅನ್ನುವ ಹಾಗೆ ಕೈ ಸನ್ನೆ ಮಾಡುತ್ತಾ ಧಡ್ ಅಂತ ಡೋರ್ ಎಳೆದುಕೊಂಡ ಕೂಡಲೇ ಅವರನ್ನು ಹೊತ್ತ ಕಾರು ಭುರ್ ಅಂತ ಹೊರಟು ಬಿಡುತ್ತದೆ.

ಇದನ್ನೂ ಓದಿ: Siddaramaiah: ರಾಗಿ ಖರೀದಿ ಮೇಲೆ ಹೇರಿರುವ ಮಿತಿ ತೆರವುಗೊಳಿಸುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿ ಪತ್ರ ಬರೆದ ಸಿದ್ದರಾಮಯ್ಯ