‘ಬೈ ಟೂ ಲವ್’ ನೋಡಿ ಪ್ರೇಕ್ಷಕರು ಎಮೋಷನಲ್ ಆಗುತ್ತಿದ್ದಾರೆ: ಶ್ರೀಲೀಲಾ
ನಟಿ ಶ್ರೀಲೀಲಾ ಅವರಿಗೆ ಬೇಡಿಕೆ ಹೆಚ್ಚಿದೆ. ಅವರು ನಟನೆಯಲ್ಲಿ ಮಾಗಿದ್ದಾರೆ. ಶ್ರೀಲೀಲಾ ನಿರ್ವಹಿಸಿರುವ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಟಿ ಶ್ರೀಲೀಲಾ (Sreeleela) ಹಾಗೂ ಧನ್ವೀರ್ (Dhanveer) ನಟನೆಯ ‘ಬೈ ಟೂ ಲವ್’ ಕಳೆದ ಶುಕ್ರವಾರ (ಫೆಬ್ರವರಿ 18) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಲವ್ ಸ್ಟೋರಿ ಜತೆಗೆ ಎಮೋಷನಲ್ ದೃಶ್ಯಗಳೂ ಹೈಲೈಟ್ ಆಗಿದೆ. ಈ ಸಿನಿಮಾದ ಮೂಲಕ ನಟಿ ಶ್ರೀಲೀಲಾ ಅವರಿಗೆ ಬೇಡಿಕೆ ಹೆಚ್ಚಿದೆ. ಅವರು ನಟನೆಯಲ್ಲಿ ಮಾಗಿದ್ದಾರೆ. ಶ್ರೀಲೀಲಾ ನಿರ್ವಹಿಸಿರುವ ಪಾತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಚಾರಕ್ಕೆ ಶ್ರೀಲೀಲಾ ಕೂಡ ಖುಷಿಯಾಗಿದ್ದಾರೆ. ಉತ್ತರ ಕರ್ನಾಟಕ ಪ್ರವಾಸದಲ್ಲಿ ‘ಬೈ ಟೂ ಲವ್’ (By Two Love) ತಂಡ ಇದೆ. ಅಲ್ಲಿಯೂ ಚಿತ್ರದ ಪ್ರಚಾರ ಕಾರ್ಯ ಮಾಡುತ್ತಿದೆ ತಂಡ. ‘ನಮ್ಮ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ಫೈಟಿಂಗ್ ಬಂದಾಗ ಜನರು ಮೆಚ್ಚಿಕೊಂಡಿದ್ದು ನೋಡಿದ್ದೇನೆ. ಆದರೆ, ಎಮೋಷನಲ್ ದೃಶ್ಯಕ್ಕೂ ಜನರು ಖುಷಿಯಾಗಿದ್ದು ನೋಡಿ ಸಂತಸವಾಯಿತು’ ಎಂದರು ಅವರು.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ‘ಬೈ ಟೂ ಲವ್’ ತಂಡ; ಶ್ರೀಲೀಲಾ-ಧನ್ವೀರ್ ಮಸ್ತಿ
ಸ್ಯಾಡ್ ಮ್ಯೂಸಿಕ್ ಕೇಳಿದ್ರೆ ಗಳಗಳನೆ ಅಳ್ತಾರೆ ನಟಿ ಶ್ರೀಲೀಲಾ; ‘ಮಹಾನಟಿ’ ಎಂಬ ಹೊಗಳಿಕೆ
ಆಗ ವೀರಪ್ಪನ್ ಕೇಸ್ನಲ್ಲಿ ಗಿಫ್ಟ್: ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!

