Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ರಮ್ಯಾ ಜೊತೆಗಿರುವ ರಾಣಿ ಯಾರು? ವಾವ್​.. ಆಕಸ್ಮಿಕವಾಗಿ ಸಿಕ್ಕ ಜೀವದ ಬಗ್ಗೆ ಈ ಪರಿ ಪ್ರೀತಿ

ನಟಿ ರಮ್ಯಾ ಜೊತೆಗಿರುವ ರಾಣಿ ಯಾರು? ವಾವ್​.. ಆಕಸ್ಮಿಕವಾಗಿ ಸಿಕ್ಕ ಜೀವದ ಬಗ್ಗೆ ಈ ಪರಿ ಪ್ರೀತಿ

TV9 Web
| Updated By: ಮದನ್​ ಕುಮಾರ್​

Updated on: Feb 02, 2022 | 9:08 AM

ಒಂದಷ್ಟು ದಿನಗಳ ಹಿಂದೆ ರಮ್ಯಾ ಅವರು ಗೋವಾದಲ್ಲಿ ಇರುವಾಗ ನಡೆದ ಘಟನೆಯನ್ನು ಅವರೀಗ ನೆನಪು ಮಾಡಿಕೊಂಡಿದ್ದಾರೆ. ರಾಣಿ ಸಿಕ್ಕಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.

ನಟಿ ರಮ್ಯಾ (Ramya Divya Spandana) ಅವರಿಗೆ ಶ್ವಾನಗಳ ಬಗ್ಗೆ ತುಂಬ ಪ್ರೀತಿ ಇದೆ. ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ ಅಥವಾ ಸ್ಟೋರಿಗಳನ್ನು ಗಮನಿಸಿದರೆ ಅದು ತಿಳಿಯುತ್ತದೆ. ಪ್ರಾಣಿಗಳ ಬಗ್ಗೆ ಅವರಿಗೆ ಇರುವ ಪ್ರೀತಿ ಬರೀ ತೋರಿಕೆಗೆ ಮಾತ್ರ ಅಲ್ಲ. ನಿಜವಾಗಿಯೂ ಅವರು ಪ್ರಾಣಿಗಳಿಗಾಗಿ ಮಿಡಿಯುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಲಾರಾ ಎಂಬ ನಾಯಿ (Lara Dog) ಮೇಲೆ ಉದ್ದೇಶಪೂರ್ವಕವಾಗಿ ಕಾರು ಹರಿಸಿ ಹತ್ಯೆ ಮಾಡಲಾಗಿರುವ ಘಟನೆಯನ್ನು ರಮ್ಯಾ ತೀವ್ರವಾಗಿ ಖಂಡಿಸಿದ್ದಾರೆ. ಈ ವೇಳೆ ಮಾತನಾಡುವಾಗ ಅವರು ತಮ್ಮ ಜೊತೆಗಿರುವ ರಾಣಿ ಬಗ್ಗೆ ಮಾತನಾಡಿದ್ದಾರೆ. ಒಂದಷ್ಟು ದಿನಗಳ ಹಿಂದೆ ಅವರು ಗೋವಾದಲ್ಲಿ ಇರುವಾಗ ಒಂದು ನಾಯಿ ಮರಿಗೆ (Street Dogs) ಯಾರೋ ಆಕ್ಸಿಡೆಂಟ್​ ಮಾಡಿದ್ದರು. ರಕ್ತಸಿಕ್ತವಾಗಿದ್ದ ನಾಯಿಯನ್ನು ಒಬ್ಬರ ಸಹಾಯ ಪಡೆದು ರಮ್ಯಾ ಅವರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈಗ ಆ ನಾಯಿಯ ಬಗ್ಗೆ ‘ಸ್ಯಾಂಡಲ್​ವುಡ್​ ಕ್ವೀನ್​’ ಮಾತನಾಡಿದ್ದಾರೆ. ಅದಕ್ಕೆ ರಾಣಿ ಎಂದು ಹೆಸರಿಟ್ಟಿದ್ದಾರೆ. ‘ಅವಳ ಹೆಸರು ರಾಣಿ ಅಂತ. ಅವಳಿಗೆ ಇನ್ನೂ ಒಂದು ವರ್ಷ ಆಗಿಲ್ಲ. ನನ್ನ ಜೊತೆಯಲ್ಲೇ ಇದ್ದಾಳೆ’ ಎಂದು ಪ್ರೀತಿಯ ಶ್ವಾನದ ಬಗ್ಗೆ ರಮ್ಯಾ  ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ:

‘ಈಗ ನಾನೇಕೆ ಮಾಧ್ಯಮದ ಮುಂದೆ ಬಂದೆ ಅಂದ್ರೆ..’; ಎಳೆಎಳೆಯಾಗಿ ವಿವರಿಸಿದ ನಟಿ ರಮ್ಯಾ

ನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣ: ಮೃತ ಶ್ವಾನ ಲಾರಾ ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟಿ ರಮ್ಯಾ