‘100 ಕೋಟಿ ರೂ. ಅಲ್ಲ ಎಂದಿದ್ದರೆ ನಾನು ಈ ಕೆಲಸ ಮಾಡ್ತಿರಲಿಲ್ಲ’; ಚೇತನ್​ ಸಿನಿಮಾ ಬಗ್ಗೆ ರಮ್ಯಾ ಮಾತು

‘100 ಕೋಟಿ ರೂ. ಅಲ್ಲ ಎಂದಿದ್ದರೆ ನಾನು ಈ ಕೆಲಸ ಮಾಡ್ತಿರಲಿಲ್ಲ’; ಚೇತನ್​ ಸಿನಿಮಾ ಬಗ್ಗೆ ರಮ್ಯಾ ಮಾತು
ಚೇತನ್​ ಕುಮಾರ್, ರಮ್ಯಾ

Ramya Divya Spandana: ಚೇತನ್ ಕುಮಾರ್​​ ಅಭಿನಯಿಸಿರುವ ‘100 ಕ್ರೋರ್ಸ್​’ ಸಿನಿಮಾದ ಟೀಸರ್​ ಲಾಂಚ್​​ ಆಗುತ್ತಿದೆ. ಇದನ್ನು ‘ಸ್ಯಾಂಡಲ್​ವುಡ್​ ಕ್ವೀನ್​’ ರಮ್ಯಾ ಅವರು ರಿಲೀಸ್​ ಮಾಡಲಿದ್ದಾರೆ ಎಂಬುದು ವಿಶೇಷ.

TV9kannada Web Team

| Edited By: Madan Kumar

Dec 23, 2021 | 8:38 AM

ನಟಿ ರಮ್ಯಾ (Ramya Divya Spandana) ಅವರು ನಟನೆಯಿಂದ ದೂರು ಉಳಿದುಕೊಂಡಿದ್ದರೂ ಕೂಡ ಕನ್ನಡ ಚಿತ್ರರಂಗದ ಅನೇಕರ ಜೊತೆ ಸಂಪರ್ಕ ಹೊಂದಿದ್ದಾರೆ. ಅನೇಕ ಸೆಲೆಬ್ರಿಟಿಗಳ ಜೊತೆ ಅವರ ಒಡನಾಟ ಮುಂದುವರಿದಿದೆ. ಇತ್ತೀಚೆಗೆ ಅವರು ಹಲವು ಸಿನಿಮಾಗಳ ಕುರಿತು ಮಾತನಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಕನ್ನಡ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈಗ ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಕುಮಾರ್ (Chetan Kumar)​​ ಅವರ ಹೊಸ ಸಿನಿಮಾ ‘100 ಕ್ರೋರ್ಸ್​’ (100 Crores Movie) ಚಿತ್ರಕ್ಕೆ ಅವರು ಸಾಥ್​ ನೀಡಿದ್ದಾರೆ. ಈ ಚಿತ್ರದ ಟೀಸರ್​ ಬಿಡುಗಡೆ ಮಾಡಲು ಅವರು ಒಪ್ಪಿಕೊಂಡಿದ್ದಾರೆ. 

ಸಾಮಾಜಿಕ ಹೋರಾಟ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರು ನಟ ಚೇತನ್ ಕುಮಾರ್​​. ಸಿನಿಮಾಗಳ ಆಯ್ಕೆಯಲ್ಲಿ ಅವರು ತುಂಬ ಚ್ಯೂಸಿ. ಅವರು ಅಭಿನಯಿಸಿರುವ ‘100 ಕ್ರೋರ್ಸ್​’ ಸಿನಿಮಾದ ಟೀಸರ್​ ಲಾಂಚ್​​ ಈಗ ಆಗುತ್ತಿದೆ. ಡಿ.24ರಂದು ಬೆಳಗ್ಗೆ 9 ಗಂಟೆಗೆ ಟೀಸರ್​ ಬಿಡುಗಡೆ ಆಗಲಿದೆ. ಇದನ್ನು ‘ಸ್ಯಾಂಡಲ್​ವುಡ್​ ಕ್ವೀನ್​’ ರಮ್ಯಾ ಅವರು ರಿಲೀಸ್​ ಮಾಡಲಿದ್ದಾರೆ ಎಂಬುದು ವಿಶೇಷ. ಈ ವಿಚಾರವನ್ನು ಚೇತನ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಟೀಸರ್​ ಬಿಡುಗಡೆ ಕುರಿತು ಚೇತನ್​ ಮಾಡಿರುವ ಪೋಸ್ಟ್​ ಅನ್ನು ರಮ್ಯಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ‘100 ಕೋಟಿ ರೂಪಾಯಿಗೋಸ್ಕರ ಅಲ್ಲ ಎಂದಿದ್ದರೆ ನಾನು ಈ ಕೆಲಸ ಮಾಡುತ್ತಿರಲಿಲ್ಲ. ಸುಮ್ಮನೆ ತಮಾಷೆಗೆ ಹಾಗಂದೆ! ಚೇತನ್​ ಅವರೇ, ನಿಮಗಾಗಿ ಏನು ಬೇಕಾದರೂ ಮಾಡುತ್ತೇನೆ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರಗಳಿಗೆ ರಮ್ಯಾ ಪ್ರೋತ್ಸಾಹ:

ಕನ್ನಡದಲ್ಲಿ ರಿಲೀಸ್​ ಆಗುತ್ತಿರುವ ಚಿತ್ರಗಳ ಬಗ್ಗೆ ರಮ್ಯಾ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ವಾರ (ಡಿ.24) ನಿಖಿಲ್​ ಕುಮಾರಸ್ವಾಮಿ ನಟನೆಯ ‘ರೈಡರ್​’ ಮತ್ತು ಡಾಲಿ ಧನಂಜಯ ಅಭಿನಯದ ‘ಬಡವ ರಾಸ್ಕಲ್​’ ಚಿತ್ರಗಳು ತೆರೆಕಾಣುತ್ತಿವೆ. ಆ ಸಿನಿಮಾಗಳಿಗೆ ರಮ್ಯಾ ಶುಭ ಕೋರಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ ಆಕ್ಟೀವ್​ ಆಗಿದ್ದಾರೆ. ಇನ್​ಸ್ಟಾಗ್ರಾಮ್​ ಮೂಲಕ ಅವರು ಅವರು ಅಭಿಮಾನಿಗಳಿಗೆ ಆಗಾಗ ಅಪ್​ಡೇಟ್​ ನೀಡುತ್ತ ಇರುತ್ತಾರೆ. ಅವರು ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ‘ರೈಡರ್​’ ಮತ್ತು ‘ಬಡವ ರಾಸ್ಕಲ್​’ ಚಿತ್ರಗಳ ಮೇಲೆ ತಮಗೆ ಎಷ್ಟು ನಿರೀಕ್ಷೆ ಇದೆ ಎಂಬುದನ್ನು ತಿಳಿಸಿದ್ದಾರೆ. ‘ರೈಡರ್’​ ಚಿತ್ರದ ಟೀಸರ್​ ಹಂಚಿಕೊಂಡು ನಿಖಿಲ್​ ಕುಮಾರಸ್ವಾಮಿ ಅವರಿಗೆ ರಮ್ಯಾ ಶುಭ ಕೋರಿದ್ದಾರೆ. ಅದೇ ರೀತಿ ‘ಬಡವ ರಾಸ್ಕಲ್​’ ಚಿತ್ರದ ಪೋಸ್ಟರ್​ ಶೇರ್​ ಮಾಡಿಕೊಂಡಿರುವ ಅವರು ಇಡೀ ತಂಡಕ್ಕೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ಧನಂಜಯ ಅವರಿಗೆ ರಮ್ಯಾ ಕಡೆಯಿಂದ ಈ ರೀತಿ ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳು ಸಿಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ‘ರತ್ನನ್​ ಪ್ರಪಂಚ’ ಸಿನಿಮಾ ಬಿಡುಗಡೆ ಆದಾಗಲೂ ಅವರು ಪ್ರೀತಿ ತೋರಿಸಿದ್ದರು.

ಇದನ್ನೂ ಓದಿ:

ರಮ್ಯಾ ಜನ್ಮದಿನ; ‘ಸ್ಯಾಂಡಲ್​ವುಡ್​ ಕ್ವೀನ್​’ 39ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ

ಹಿಂದುತ್ವ ಮತ್ತು ಹಿಂದೂಯಿಸಂ ನಡುವಿನ ವ್ಯತ್ಯಾಸ ತಿಳಿಸಿದ ರಮ್ಯಾ; ವಾಸ್ತವ ವಿವರಿಸಿ ಬೇಸರ ವ್ಯಕ್ತಪಡಿಸಿದ ನಟಿ

Follow us on

Related Stories

Most Read Stories

Click on your DTH Provider to Add TV9 Kannada