ನಿಖಿಲ್ ಕುಮಾರಸ್ವಾಮಿ ಹಾಗೂ ಕಶ್ಮೀರ ಪರದೇಸಿ ನಟಿಸಿರುವ ಬಹುನಿರೀಕ್ಷಿತ ‘ರೈಡರ್’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಡಿಸೆಂಬರ್ 24ರಂದು ಚಿತ್ರ ತೆರೆ ಕಾಣಲಿದ್ದು, ಚಿತ್ರತಂಡ ಪ್ರಿ-ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಸಣ್ಣ ಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಆರಂಭದಲ್ಲಿಯೇ ರಚಿತಾ ಸ್ಪಷ್ಟನೆಯನ್ನೂ ನೀಡಿದರು. ಸಣ್ಣ ಪ್ರಮಾಣದಲ್ಲಿ ಗಂಟಲಿನ ನೋವು ಕಾಣಿಸಿಕೊಂಡಿರುವುದರಿಂದ ಧ್ವನಿ ಬೇರೆ ರೀತಿಯಲ್ಲಿ ಕೇಳಿಸುತ್ತದೆ ಎಂದು ಅವರು ಹೇಳಿದರು. ನಂತರ ಮಾತನಾಡಿದ ಅವರು, ಚಿತ್ರಕ್ಕೆ ಶುಭ ಕೋರಿದರು.
ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಿಖಿಲ್ಗೆ ಜತೆಯಾಗಿ ಕಾಣಿಸಿಕೊಂಡಿದ್ದ, ಆ ದಿನಗಳನ್ನು ನೆನಪಿಸಿಕೊಂಡರು. ನಟಿ ಕಶ್ಮೀರ ಅವರನ್ನು ರಚಿತಾ ವಿಶೇಷವಾಗಿ ಹೊಗಳಿದರು. ನಿಖಿಲ್ ಅವರ ಕುರಿತು ಮಾತನಾಡಿದ ರಚಿತಾ, ಅವರೊಬ್ಬ ಜಂಟಲ್ಮನ್. ನಿಖಿಲ್ ಅವರನ್ನು ಡಿಫೈನ್ ಮಾಡೋದಕ್ಕೆ ಜಂಟಲ್ಮನ್ ಹೊರತಾದ ಪದಗಳಿಲ್ಲ. ಅವರೊಬ್ಬ ಉತ್ತಮ ಸ್ನೇಹಿತರೂ ಹೌದು ಎಂದು ನುಡಿದರು.
ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಇಲ್ಲಿದೆ: