‘ಶುರುವಿಂದ ಕೊನೆವರೆಗೂ ನಗಿಸುವ ಚಿತ್ರ ಓಲ್ಡ್​ ಮಾಂಕ್​’; ಪಾತ್ರದ ಬಗ್ಗೆ ಮಾತಾಡಿ ನಿರೀಕ್ಷೆ ಹೆಚ್ಚಿಸಿದ ಅದಿತಿ

‘ಶುರುವಿಂದ ಕೊನೆವರೆಗೂ ನಗಿಸುವ ಚಿತ್ರ ಓಲ್ಡ್​ ಮಾಂಕ್​’; ಪಾತ್ರದ ಬಗ್ಗೆ ಮಾತಾಡಿ ನಿರೀಕ್ಷೆ ಹೆಚ್ಚಿಸಿದ ಅದಿತಿ

TV9 Web
| Updated By: ಮದನ್​ ಕುಮಾರ್​

Updated on: Feb 21, 2022 | 3:52 PM

ಶ್ರೀನಿ ನಿರ್ದೇಶನದ ‘ಓಲ್ಡ್​ ಮಾಂಕ್​’ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ಫೆ.25ರಂದು ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿದೆ ಎಂಬುದನ್ನು ಅದಿತಿ ವಿವರಿಸಿದ್ದಾರೆ.

ಅದಿತಿ ಪ್ರಭುದೇವ (Aditi Prabhudeva) ಮತ್ತು ಶ್ರೀನಿ ಅವರು ಎರಡನೇ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆ ‘ರಂಗನಾಯಕಿ’ ಸಿನಿಮಾದಲ್ಲಿ ಜೊತೆಯಾಗಿದ್ದ ಅವರು ಈಗ ‘ಓಲ್ಡ್​ ಮಾಂಕ್​’ (Old Monk Movie) ಚಿತ್ರದ ಮೂಲಕ ಮತ್ತೆ ಜನರನ್ನು ರಂಜಿಸಲು ಬರುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅದಿತಿ ಪ್ರಭುದೇವ ಅವರು ಮಾತನಾಡಿದ್ದಾರೆ. ‘ಶ್ರೀನಿ ನಿರ್ದೇಶನದ ಸಿನಿಮಾ ಎಂದರೆ ವಿಶೇಷತೆ ಇದ್ದೇ ಇರುತ್ತದೆ. ‘ಓಲ್ಡ್​ ಮಾಂಕ್​’ ಚಿತ್ರ ಕೂಡ ಮನರಂಜನೆಯ ಕಿಕ್​ ನೀಡಲಿದೆ. ಕುಟುಂಬ ಸಮೇತರಾಗಿ ಬಂದು ಎಂಜಾಯ್​ ಮಾಡುವಂತಹ ಚಿತ್ರ ಇದು. ಆರಂಭದಿಂದ ಕೊನೆಯವರೆಗೂ ಈ ಸಿನಿಮಾ ನಗಿಸುತ್ತದೆ. ನನ್ನ ರಿಯಲ್​ ಲೈಫ್​ಗೆ ಹೆಚ್ಚು ಹತ್ತಿರವಾಗಿರುವಂತಹ ಪಾತ್ರ ಸಿಕ್ಕಿದೆ. ಯಾವಾಗಲೂ ನಗುತ್ತಾ, ಜೀವನವನ್ನು ಪಾಸಿಟಿವ್​ ಆಗಿ ನೋಡುತ್ತ, ಏನೇ ಬಂದರೂ ತಲೆ ಕೆಡಿಸಿಕೊಳ್ಳದೇ ಲವಲವಿಕೆಯಿಂದ ಇರುವಂತಹ ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಶ್ರೀನಿ (Srini) ಅವರಿಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಅವರ ಜೊತೆ ಈ ಸಿನಿಮಾದಲ್ಲಿ ನಟಿಸಿದ್ದು ಖುಷಿ ಎನಿಸಿತು’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

ಇದನ್ನೂ ಓದಿ:

‘ಈಗ ಮೊಬೈಲ್​ ಕೊಡು ಅಂದ್ರೆ ಬ್ರೇಕಪ್ ಆಗತ್ತೆ; ನಾವು ಹಾಗಿಲ್ಲ’: ಎಂಗೇಜ್​ಮೆಂಟ್​ ಬಳಿಕ ಅದಿತಿ ಮಾತು

‘ಅವೆಂಜರ್ಸ್’​ ಗೊತ್ತು, ಆದ್ರೆ ಇದೇನು ರಿವೆಂಜರ್ಸ್? ಹೊಸ ಪ್ರಯತ್ನದಿಂದ ಗಮನ ಸೆಳೆದ ‘ಓಲ್ಡ್​ ಮಾಂಕ್​’ ಶ್ರೀನಿ