AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಮಿರ್​ ಖಾನ್​ಗೆ ರಿಲೀಸ್​ ಡೇಟ್​ ಬಿಟ್ಟುಕೊಡಲ್ಲ ಎಂದ ಅಕ್ಷಯ್​ ಕುಮಾರ್​ ಟೀಮ್​; ಆಗಲಿದೆ ಬಿಗ್​ ಕ್ಲ್ಯಾಶ್?​

ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರತಂಡದವರು ಅಕ್ಷಯ್​ ಕುಮಾರ್​ ನಟನೆಯ ‘ರಕ್ಷಾ ಬಂಧನ್​’ ಚಿತ್ರತಂಡದವರ ಬಳಿ ಹೋಗಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಅಕ್ಷಯ್​ ಟೀಮ್​ ಒಪ್ಪಿಲ್ಲ.

ಆಮಿರ್​ ಖಾನ್​ಗೆ ರಿಲೀಸ್​ ಡೇಟ್​ ಬಿಟ್ಟುಕೊಡಲ್ಲ ಎಂದ ಅಕ್ಷಯ್​ ಕುಮಾರ್​ ಟೀಮ್​; ಆಗಲಿದೆ ಬಿಗ್​ ಕ್ಲ್ಯಾಶ್?​
ಅಕ್ಷಯ್​ ಕುಮಾರ್​. ಆಮಿರ್​ ಖಾನ್​
TV9 Web
| Updated By: ಮದನ್​ ಕುಮಾರ್​|

Updated on: Feb 21, 2022 | 8:01 AM

Share

ಸೂಕ್ತವಾದ ರಿಲೀಸ್​ ಡೇಟ್​ ಪಡೆಯಲು ಎಲ್ಲ ಚಿತ್ರತಂಡಗಳು ಕಷ್ಟಪಡುತ್ತಿವೆ. ಅದರಲ್ಲೂ ಕೊರೊನಾ ಹಾವಳಿಯಿಂದ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದ್ದ ಎಲ್ಲ ಸಿನಿಮಾ ತಂಡಗಳಿಗೆ ಈಗ ಹೊಸ ರಿಲೀಸ್​ ದಿನಾಂಕವನ್ನು ಫಿಕ್ಸ್​ ಮಾಡುವುದು ದೊಡ್ಡ ತಲೆನೋವಾಗಿದೆ. ಸರಿಯಾದ ದಿನ ಸಿಗಬೇಕು, ಅಂದು ಯಾವುದೇ ದೊಡ್ಡ ಚಿತ್ರದ ಪೈಪೋಟಿ ಇರಬಾರದು, ಹಬ್ಬ ಅಥವಾ ರಜಾ ದಿನ ಸಿಕ್ಕರೆ ಒಳ್ಳೆಯದು.. ಹೀಗೆ ಹತ್ತಾರು ಲೆಕ್ಕಾಚಾರಗಳನ್ನು ಹಾಕಿಕೊಂಡು ಸಿನಿಮಾ ರಿಲೀಸ್​ ಮಾಡಬೇಕಿದೆ. ಈ ವಿಚಾರದಲ್ಲಿ ಆಮಿರ್ ಖಾನ್​ ಮತ್ತು ಅಕ್ಷಯ್​ ಕುಮಾರ್​ (Akshay Kumar) ಅವರ ನಡುವೆ ಕ್ಲ್ಯಾಶ್​ ಏರ್ಪಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಆಮಿರ್​ ಖಾನ್​ (Aamir Khan) ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಗ್ಗೆ ಹೈಪ್​ ಸೃಷ್ಟಿ ಆಗಿದೆ. ಅದೇ ರೀತಿ ಅಕ್ಷಯ್​ ಕುಮಾರ್​ ಅಭಿನಯದ ‘ರಕ್ಷಾ ಬಂಧನ್​’ (Raksha Bandhan Movie) ಚಿತ್ರ ಕೂಡ ನಿರೀಕ್ಷೆ ಮೂಡಿಸಿದೆ. ಈ ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್​ ಆಗುವುದನ್ನು ತಪ್ಪಿಸಲು ತೆರೆಮರೆಯಲ್ಲಿ ಕೆಲವು ಕಸರತ್ತು ನಡೆಯುತ್ತಿದೆ. ಅಂತಿಮವಾಗಿ ಏನಾಗಲಿದೆ ಎಂಬ ಕೌತುಕ ಸಿನಿಪ್ರಿಯರ ಮನದಲ್ಲಿ ಮೂಡಿದೆ.

ಅಕ್ಷಯ್​ ಕುಮಾರ್​ ಅವರ ‘ರಕ್ಷಾ ಬಂಧನ್​’ ಸಿನಿಮಾದ ಹೆಸರೇ ಸೂಚಿಸುವಂತೆ ಇದು ಸಹೋದರತ್ವದ ಕುರಿತಾದ ಸಿನಿಮಾ. ಹಾಗಾಗಿ ಈ ವರ್ಷ ರಕ್ಷಾ ಬಂಧನ ಹಬ್ಬದ ಸಮಯದಲ್ಲೇ ರಿಲೀಸ್​ ಮಾಡಬೇಕು ಎಂದು ಚಿತ್ರತಂಡದವರು ನಿರ್ಧರಿಸಿದ್ದಾರೆ. ಅಂದರೆ ಆಗಸ್ಟ್​ 11ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗಿದೆ. ಅದೇ ದಿನವೇ ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರವನ್ನು ತೆರೆಕಾಣಿಸಲು ಪ್ಲ್ಯಾನ್​ ಮಾಡಲಾಗಿದೆ. ಈ ಕ್ಲ್ಯಾಶ್​ ತಪ್ಪಿಸಲು ಪ್ರಯತ್ನ ಮಾಡಲಾಗಿದೆ. ಆದರೆ ಆ ಮಾತುಕತೆಯಿಂದ ಫಲ ಸಿಕ್ಕಿಲ್ಲ ಎನಿಸುತ್ತಿದೆ.

ಮೂಲಗಳ ಪ್ರಕಾರ, ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರತಂಡದವರು ಅಕ್ಷಯ್​ ಕುಮಾರ್​ ನಟನೆಯ ‘ರಕ್ಷಾ ಬಂಧನ್​’ ಚಿತ್ರತಂಡದವರ ಬಳಿ ಹೋಗಿ ಮನವಿ ಮಾಡಿಕೊಂಡಿದ್ದಾರೆ. ರಿಲೀಸ್​ ಡೇಟ್​ ಮುಂದೂಡಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ‘ರಕ್ಷಾ ಬಂಧನ್​’ ತಂಡದವರು ಒಪ್ಪಿಲ್ಲ. ‘ಆಮಿರ್ ಖಾನ್​ ಸಲುವಾಗಿ ನಾವು ರಿಲೀಸ್​ ಡೇಟ್​ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಕ್ಷಯ್​ ಕುಮಾರ್​ ತಂಡದವರು ಖಡಕ್​ ಆಗಿ ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ.

ಈಗ ಆಮಿರ್​ ಖಾನ್​ ಅವರಿಗೆ ಇರುವುದು ಎರಡೇ ಆಯ್ಕೆ. ಅಕ್ಷಯ್​ ಕುಮಾರ್​ ಎದುರು ತಮ್ಮ ಸಿನಿಮಾವನ್ನು ರಿಲೀಸ್​ ಮಾಡಬೇಕು ಅಥವಾ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಳ್ಳಬೇಕು. ಎರಡರಲ್ಲಿ ಅವರು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕೌತುಕ ಈಗ ಸೃಷ್ಟಿ ಆಗಿದೆ.

‘ಕೆಜಿಎಫ್​ 2’ ಚಿತ್ರಕ್ಕೆ ದಾರಿ ಬಿಟ್ಟುಕೊಟ್ಟಿರುವ ಆಮಿರ್​ ಖಾನ್​:

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೊವಿಡ್​ ಕಾರಣದಿಂದ ಕೆಲಸಗಳು ವಿಳಂಬ ಆಗಿದ್ದರಿಂದ ಎರಡೆರಡು ಬಾರಿ ರಿಲೀಸ್​ ಡೇಟ್​ ಮುಂದೂಡಲಾಗಿದೆ. ಈ ವರ್ಷ ಏಪ್ರಿಲ್​ ತಿಂಗಳಲ್ಲಿ ರಿಲೀಸ್​ ಮಾಡಲು ನಿರ್ಧರಿಸಲಾಗಿತ್ತು. ಆದರೆ ಆ ತಿಂಗಳಲ್ಲಿ ಯಶ್​ ನಟನೆಯ ‘ಕೆಜಿಎಫ್​ 2’ ರಿಲೀಸ್​ ಆಗಲಿರುವುದರಿಂದ ಸುಮ್ಮನೆ ಕ್ಲ್ಯಾಶ್​ ಬೇಡ ಎಂಬ ಕಾರಣಕ್ಕೆ ಆಮಿರ್​ ಖಾನ್​ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಈಗ ಹೊಸ ರಿಲೀಸ್​ ಡೇಟ್​ ಫಿಕ್ಸ್​ ಮಾಡಲು ಆಮಿರ್​ ಖಾನ್​ ಮತ್ತು ಅವರ ತಂಡದವರು ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ:

ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ

175 ಕೋಟಿ ರೂ. ಎದುರಿಗಿಟ್ಟರೂ ಆಫರ್​ ಒಪ್ಪಲಿಲ್ಲ ಅಕ್ಷಯ್​ ಕುಮಾರ್​; ಇದು ‘ಬಚ್ಚನ್​ ಪಾಂಡೆ’ ತಾಕತ್ತು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!