‘ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ಸುಟ್ಟು ಬೂದಿಯಾಗಲಿದೆ’; ಆಲಿಯಾ ಭಟ್​ ಸಿನಿಮಾ ಬಗ್ಗೆ ಕಂಗನಾ ಟೀಕೆ

ಆಲಿಯಾ ಭಟ್​ ಹೆಸರು ಕೇಳಿದರೆ ಕಂಗನಾ ರಣಾವತ್​ ಉರಿದುಕೊಳ್ಳುತ್ತಾರೆ. ಆಲಿಯಾ ಖ್ಯಾತ ನಿರ್ದೇಶಕ ಮಹೇಶ್​ ಭಟ್​ ಅವರ ಮಗಳು. ಮಹೇಶ್​ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಆಲಿಯಾ ಬಾಲಿವುಡ್​ ಹಾದಿ ಸುಗಮವಾಗಿತ್ತು.

‘ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ಸುಟ್ಟು ಬೂದಿಯಾಗಲಿದೆ’; ಆಲಿಯಾ ಭಟ್​ ಸಿನಿಮಾ ಬಗ್ಗೆ ಕಂಗನಾ ಟೀಕೆ
ಕಂಗನಾ-ಆಲಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 20, 2022 | 4:15 PM

ಆಲಿಯಾ ಭಟ್​​ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಆಲಿಯಾ ಭಟ್​ ಈ ಚಿತ್ರದಲ್ಲಿ ಗಂಗೂಬಾಯಿ ಆಗಿ ಕಾಣಿಸಿಕೊಂಡಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ರಿಲೀಸ್​ಗೂ ಮೊದಲೇ ಕೆಲ ವಿವಾದಗಳನ್ನು ಹುಟ್ಟುಹಾಕಿದೆ. ಈ ಮಧ್ಯೆ ಆಲಿಯಾ ಭಟ್ (Alia Bhatt)​ ಹಾಗೂ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಗ್ಗೆ ನಟಿ ಕಂಗನಾ ರಣಾವತ್​ ಅವರು ಕಟು ಟೀಕೆ ಮುಂದುವರಿಸಿದ್ದಾರೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋಲಲಿದೆ ಎಂದು ಕಂಗನಾ ಭವಿಷ್ಯ ನುಡಿದಿದ್ದಾರೆ.

ಆಲಿಯಾ ಭಟ್​ ಹೆಸರು ಕೇಳಿದರೆ ಕಂಗನಾ ರಣಾವತ್​ ಉರಿದುಕೊಳ್ಳುತ್ತಾರೆ. ಆಲಿಯಾ ಖ್ಯಾತ ನಿರ್ದೇಶಕ ಮಹೇಶ್​ ಭಟ್​ ಅವರ ಮಗಳು. ಮಹೇಶ್​ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಆಲಿಯಾ ಬಾಲಿವುಡ್​ ಹಾದಿ ಸುಗಮವಾಗಿತ್ತು. ‘ಧರ್ಮ ಪ್ರೊಡಕ್ಷನ್​’ ನಿರ್ಮಾಣದ ಸಿನಿಮಾ ಮೂಲಕ ಆಲಿಯಾ ಬಾಲಿವುಡ್​ಗೆ ಕಾಲಿಟ್ಟರು. ಅವರು ನಟಿಸಿದ ಹಲವು ಸಿನಿಮಾಗಳಿಗೆ ಕರಣ್​ ಜೋಹರ್​ ಬಂಡವಾಳ ಹೂಡಿದ್ದಾರೆ. ಈ ವಿಚಾರದಲ್ಲಿ ಆಲಿಯಾ ವಿರುದ್ಧ ಕಂಗನಾ ಈ ಮೊದಲಿನಿಂದಲೂ ದ್ವೇಷ ಸಾಧಿಸುತ್ತಾ ಬರುತ್ತಿದ್ದಾರೆ. ಈಗ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ. ಈ ಸಿನಿಮಾ ದೊಡ್ಡ ಫ್ಲಾಪ್​ ಆಗಲಿದೆ ಅನ್ನೋದು ಕಂಗನಾ ಅಭಿಪ್ರಾಯ.

‘ಈ ಶುಕ್ರವಾರ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿ ಸುಟ್ಟು ಬೂದಿಯಾಗಲಿದೆ. ಸಿನಿಮಾ ಇಂಡಸ್ಟ್ರಿಯ ಸಂಸ್ಕೃತಿಯನ್ನು ತಂದೆ (ಮಹೇಶ್​ ಭಟ್​) ಹಾಳು ಮಾಡಿದ್ದಾರೆ. ಅವರ ಸಿನಿಮಾಗಳನ್ನು ಜನರು ನೋಡುವುದನ್ನು ನಿಲ್ಲಿಸಬೇಕು. ಈ ಶುಕ್ರವಾರ ರಿಲೀಸ್​ ಆಗುತ್ತಿರುವ ಸಿನಿಮಾ ಕೂಡ ಸೋಲು ಕಾಣಲಿದೆ’ ಎಂದಿದ್ದಾರೆ ಕಂಗನಾ.

ವೈರಲ್​ ಆಗಿದ್ದ ವಿಡಿಯೋಗೆ ಕಂಗನಾ ಟೀಕೆ: 

ಕಿಯಾರಾ ಖನ್ನಾ ಎಂಬ ಬಾಲಕಿ ನೋಡೋಕೆ ಆಲಿಯಾ ಭಟ್​ ರೀತಿಯಲ್ಲಿದ್ದಾಳೆ. ಅವಳದ್ದು ಇನ್ನೂ ಚಿಕ್ಕ ವಯಸ್ಸು. ಆಲಿಯಾ ಭಟ್​ ಹಂಚಿಕೊಂಡ ವಿಡಿಯೋ ಒಂದಕ್ಕೆ ರೀಲ್ಸ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಈ ದೃಶ್ಯದಲ್ಲಿ ಆಲಿಯಾ ಬಾಯಿಗೆ ಬೀಡಿ ಇಟ್ಟಂತೆ ಇವಳು ಕೂಡ ಬಾಯಿಗೆ ಬೀಡಿ ಇಟ್ಟುಕೊಂಡಿದ್ದಾಳೆ. ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಅನೇಕರು ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ, ಈ ಬಗ್ಗೆ ಕಂಗನಾ ಅಸಮಾಧಾನ ಹೊರಹಾಕಿದ್ದರು.

ಗಂಗೂಬಾಯಿ ವೇಶ್ಯೆ ಆಗಿರುತ್ತಾಳೆ. ನಂತರ ಅವರು ಕಾಮಾಟಿಪುರದ ಡಾನ್​ ಆಗಿ ಬೆಳೆಯುತ್ತಾಳೆ. ಇದೇ ಕಥೆ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ರೀತಿಯ ಕಥೆಯುಳ್ಳ ಸಿನಿಮಾಗಳ ಡೈಲಾಗ್​ಗಳನ್ನು ಬಾಲಕಿ ಕಿಯಾರಾ ಕಾಪಿ ಮಾಡಿರುವುದಕ್ಕೆ ಕಂಗನಾ ಅಸಮಾಧಾನ ಹೊರಹಾಕಿದ್ದಾರೆ.  ‘ಚಿಕ್ಕ ಮಕ್ಕಳು ಬಾಯಲ್ಲಿ ಬೀಡಿ ಇಟ್ಟುಕೊಂಡು, ವೇಶ್ಯೆ ಪಾತ್ರವನ್ನು ಅನುಕರಣೆ ಮಾಡುವುದು ಎಷ್ಟು ಸರಿ? ಇಷ್ಟು ಸಣ್ಣ ವಯಸ್ಸಿಗೆ ಅವಳ ಮನಸ್ಸಿನಲ್ಲಿ ಈ ರೀತಿ ವಿಚಾರ ತುಂಬುವುದು ಸರಿಯೇ? ಹಲವು ಚಿಕ್ಕಮಕ್ಕಳು ಇವರನ್ನೇ ಹಿಂಬಾಲಿಸುತ್ತಿರುತ್ತಾರೆ’ ಎಂದು ಕಂಗನಾ ಆತಂಕ ಹೊರ ಹಾಕಿದ್ದರು. ಈ ಪೋಸ್ಟ್​​ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಗೆ ಟ್ಯಾಗ್ ಮಾಡಿದ್ದರು.

ಇದನ್ನೂ ಓದಿ: 47ರ ಪ್ರಾಯದ ನಟನಿಗೆ 20ರ ಹರೆಯದ ನಟಿ ಜೋಡಿ; ಇದು ಸರಿ ಎಂದು ಸಮರ್ಥಿಸಿಕೊಂಡ ಕಂಗನಾ ರಣಾವತ್​

‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ